ಗ್ಯಾಂಗ್ಸ್ಟರ್ನನ್ನು ಪ್ರೀತಿಸಿ ಓಡಿ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ ಮನೆಗೆ ವಾಪಸಾದ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಗ್ಯಾಂಗ್ಸ್ಟರ್ ಜತೆ ಓಡಿ ಹೋಗಿದ್ದ ಸೂರ್ಯ ಜೈ ಮಹಿಳೆ 9 ತಿಂಗಳ ಬಳಿಕ ಹಿಂದಿರುಗಿದ್ದಳು, ಆತ್ಮಹತ್ಯೆಗೆ ಯತ್ನಿಸಿದ್ದಳು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪತಿ ರಂಜಿತ್ ಕುಮಾರ್ ತನ್ನ ಮನೆಯ ಸಿಬ್ಬಂದಿಗೆ ತನ್ನ ಹೆಂಡತಿಯನ್ನು ಮನೆಗೆ ಪ್ರವೇಶಿಸಲು ಬಿಡಬೇಡಿ ಎಂದು ಹೇಳಿದ್ದರು. ಪೊಲೀಸರ ಪ್ರಕಾರ, ಮಹಿಳೆ ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ.
ಕಳೆದ ವರ್ಷದಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ರಂಜಿತ್ ಕುಮಾರ್ ಪರ ವಕೀಲ ಹಿತೇಶ್ ಗುಪ್ತಾ ಹೇಳಿದ್ದಾರೆ. ಅದೇ ಸಮಯದಲ್ಲಿ, ವಿಚ್ಛೇದನ ಅರ್ಜಿಯನ್ನು ಅಂತಿಮಗೊಳಿಸಲು ರಂಜಿತ್ ಕುಮಾರ್ ಶನಿವಾರ ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗೆ ಹೋಗಲು ಬಿಡದಿದ್ದಕ್ಕೆ ಮನನೊಂದ ಪತ್ನಿ ವಿಷ ಸೇವಿಸಿ ಆಂಬ್ಯುಲೆನ್ಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ.
ಮತ್ತಷ್ಟು ಓದಿ: ಬಸ್ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್ ಆರೋಪ
ಮಧುರೈನಲ್ಲಿ 14 ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ತಮಿಳುನಾಡು ಪೊಲೀಸರಿಂದ ಬಂಧನವನ್ನು ತಪ್ಪಿಸಲು ಸೂರ್ಯ ತನ್ನ ಗಂಡನ ಮನೆಗೆ ಮರಳಿರಬಹುದು ಎಂದು ಮೂಲಗಳು ಹೇಳುತ್ತಿವೆ.
ತಮಿಳಿನಲ್ಲಿ ಬರೆದಿರುವ ಆತ್ಮಹತ್ಯಾ ಪತ್ರವೂ ಪೊಲೀಸರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಆಕೆ ಜುಲೈ 11 ರಂದು ಮಗುವೊಂದನ್ನು ಅಪಹರಿಸಿ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಳು, ಆದರೆ ಮಧುರೈ ಪೊಲೀಸರು ಬಾಲಕನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಪೊಲೀಸರು ಸೂರ್ಯ ಸೇರಿದಂತೆ ಭಾಗಿಯಾದವರಿಗಾಗಿ ಹುಡುಕಾಟ ಆರಂಭಿಸಿದ್ದರು. ಇದೇ ವೇಳೆ ಮಹಿಳೆಯ ಪತಿ ಶವ ಸ್ವೀಕರಿಸಲು ನಿರಾಕರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ