AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಆರೋಪ

ತುಮಕೂರಿಗೆ ಹೋಗಲು ಬೆಂಗಳೂರಿನ ಜಾಲಹಳ್ಳಿ ಕ್ರಾಸ್​ನಲ್ಲಿ ಬಸ್​ಗೆ ಕಾಯ್ತಿದ್ದ ದ್ವಿತೀಯ PU ವಿದ್ಯಾರ್ಥಿನಿಯನ್ನು ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಮಾಡಿರುವಂತಹ ಘಟನೆ ಜೂನ್ 8ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರ ಜೊತೆ ನಾಲ್ವರು ಯುವಕರಿದ್ದ ಕಿಡ್ನಾಪ್ ಆರೋಪ ಮಾಡಲಾಗಿದೆ.

ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಆರೋಪ
ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿದ್ದ ಕಿಡ್ನ್ಯಾಪ್‌ ಆರೋಪ
ಬಿ ಮೂರ್ತಿ, ನೆಲಮಂಗಲ
| Edited By: |

Updated on:Jul 21, 2024 | 10:59 PM

Share

ಬೆಂಗಳೂರು, ಜುಲೈ 21: ಬಸ್​ಗಾಗಿ ಕಾಯುತ್ತ ನಿಂತಿದ್ದ 17 ವರ್ಷದ ದ್ವಿತೀಯ ಪಿಯುಸಿ ಓದುತ್ತಿರುವ ಯುವತಿಯನ್ನು (girl) ನಾಲ್ವರು ಯುವಕರು ಕಿಡ್ನ್ಯಾಪ್‌ (Kidnap)​ ಮಾಡಿರುವಂತಹ ಘಟನೆ ಜೂನ್​ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಬಚಾವ್​ ಆಗಿದ್ದಾಳೆ. ಸದ್ಯ ಪೀಣ್ಯ ಪೊಲೀಸ್ ಠಾಣಾ ಸರಹದ್ದಿಗೆ  ಸೇರಿದ್ದರಿಂದ ಕೇಸ್ ವರ್ಗಾವಣೆ ಮಾಡಲಾಗಿದೆ.

ಜೂನ್​ 6ರಂದು ಜಾಲಹಳ್ಳಿ ಕ್ರಾಸ್​ನಲ್ಲಿ ತುಮಕೂರಿಗೆ ಹೋಗಲು ಬಸ್​ಗಾಗಿ ಯುವತಿ ಕಾಯುತ್ತ ನಿಂತಿದ್ದಳು. ಈ ವೇಳೆ ವಿದ್ಯಾರ್ಥಿನಿ ಬಳಿಗೆ ಬಂದಿದ್ದ ಯುವತಿಯರಿಂದ ರಾಸಾಯನಿಕ ಸಿಂಪಡಿಸಿ, ಮಾಸ್ಕ್ ಹಾಕಿ ಪ್ರಜ್ಞೆ ತಪ್ಪಿಸಿ ಎಳೆದೊಯ್ದಿದ್ದಾರೆ.

ಅಪಹೃತ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಾಗ ಕಾರಿನಲ್ಲಿದ್ದ ಬಗ್ಗೆ ಮನವರಿಕೆ ಆಗಿದೆ. ಯುವತಿ ಪ್ರಜ್ಞೆ ತಪ್ಪಿದಂತೆಯೇ ಇದ್ದಾಗ ಮೈಸೂರು ಬಳಿ ಕಿಡ್ನ್ಯಾಪರ್ಸ್ ಕಾರು ನಿಲ್ಲಿಸಿ ಟೀ ಕುಡಿಯುಲು ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು

ಬಳಿಕ ವಿದ್ಯಾರ್ಥಿನಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರು ಆಧರಿಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 56/2024 ಕಲಂ 143, 328, 363, ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ನಾಲ್ವರು ಯುವಕರಿದ್ದರು ಎಂದು ಆರೋಪ ಮಾಡಲಾಗಿದೆ. ಸ್ಥಳ ಪಂಚನಾಮೆ ಕ್ರಮ ಜರುಗಿಸುವ ಸಮಯದಲ್ಲಿ ಕೃತ್ಯ ನಡೆದ ಸ್ಥಳವು ಪೀಣ್ಯ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ್ದರಿಂದ ಕೇಸ್ ವರ್ಗಾವಣೆ ಮಾಡಲಾಗಿದೆ.

ಡ್ರಗ್ಸ್ ಇಟ್ಟಿದ್ದ ಲೋಕೇಷನ್ ಹುಡುಕಿಕೊಂಡು ಬಂದ ಯುವಕರು: ಪೆಡ್ಲರ್​ಗಳಿಗೆ ಗ್ರಾಮಸ್ಥರಿಂದ ತರಾಟೆ

ಇಬ್ಬರು ಡ್ರಗ್ಸ್​ ಪೆಡ್ಲರ್​ಗಳಿಗೆ ಗಾಣಿಗರಹಳ್ಳಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿಯಲ್ಲಿ ನಡೆದಿದೆ. ಡ್ರಗ್ಸ್ ಇಟ್ಟಿದ್ದ ಜಾಗವನ್ನು ಯುವಕರು ಹುಡುಕಿಕೊಂಡು ಬಂದಿದ್ದಾರೆ. ಗ್ರಾಮದ ರಸ್ತೆಯ ಬಳಿ ಡ್ರಗ್ಸ್ ಲೋಕೇಷನ್​​ಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ

ಈ ವೇಳೆ ಡ್ರಗ್ಸ್​ ಪೆಡ್ಲರ್​ಗಳಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಮುಖಮುಚ್ಚಿಕೊಂಡು ಟಾರ್ಚ್ ಬೆಳಕಲ್ಲೇ ಯುವಕರು ಪರಾರಿ ಆಗಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:58 pm, Sun, 21 July 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್