ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ

ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಕಲಿ ಪೊಲೀಸ್ ಓರ್ವ ಲಕ್ಷಾಂತರ ರೂ. ವಂಚಿಸಿರುವಂತಹ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವುದಾಗಿ ಬೆದರಿಕೆ ಆರೋಪ ಕೂಡ ಮಾಡಲಾಗಿದೆ. ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ.

ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ
ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2024 | 8:12 PM

ನೆಲಮಂಗಲ, ಜುಲೈ 21: ಮದುವೆ ಆಗುವುದಾಗಿ ಮಹಿಳೆಗೆ (woman) ವಂಚಿಸಿ, ಲವ್, ಸೆಕ್ಸ್, ದೋಖಾ ಮಾಡಿರುವಂತಹ ಘಟನೆ ಬೆಂಗಳೂರಿನ (Bengaluru) ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 40 ವರ್ಷದ ಮಹಿಳೆಯ ಬಳಿ 41 ಲಕ್ಷ ರೂ. ಹಣ ಮತ್ತು 5 ಲಕ್ಷ ರೂ. ಮೌಲ್ಯದ ಎಲ್‌ಐಸಿ ಬಾಂಡನ್ನು ಕಿತ್ತುಕೊಂಡು ಮೋಸ ಮಾಡಿದ್ದಾನೆ. ಚಿಕ್ಕಬಾಣಾವಾರದ ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಎಂಬುವವರಿಂದ ವಂಚನೆ ಆರೋಪ ಮಾಡಲಾಗಿದೆ.

11 ವರ್ಷದ ಹಿಂದೆ ಮಹಿಳೆಗೆ ವಿಚ್ಛೇದನವಾಗಿದೆ. ಬಳಿಕ ಇಬ್ಬರಿಗೂ ಪರಿಚಯವಾಗಿದೆ. ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಪೊಲೀಸ್​ ಡ್ರೆಸ್​​ನಲ್ಲಿ ಇರುವ ಫೋಟೋ ಹಾಗೂ ಗನ್​ ಇರುವುದನ್ನು ನೋಡಿರುವ ಮಹಿಳೆ ಪೊಲೀಸ್​ ಹುದ್ದೆಯಲ್ಲಿರಬಹುದು ಎಂದು ನಂಬಿದ್ದಾರೆ. ಆದರೆ ಆತ ನಕಲಿ ಪೊಲೀಸ್​ ಎಂಬುದು ನಂತರ ಗೊತ್ತಾಗಿದೆ.

ಮಹಿಳೆ ತಂಗಿಗೆ ಖಾಸಗಿ ಅಂಗ ತೋರಿಸಿ ವಿಕೃತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಾಣಾವರ ಬ್ರಾಂಚ್​ನ 183258, 183259, 183260 ಮತ್ತು 183261 ನಂಬರಿನ ಚೆಕ್​ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾನೆ. ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿ ಮೇಲೆ ಕೂಡ ಹಲ್ಲೆ ಮಾಡಿದ್ದು, ಮಹಿಳೆ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೇರೆದಿದ್ದಾನೆ.

ಇದನ್ನೂ ಓದಿ: ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು

ದೈಹಿಕವಾಗಿ ಬಳಸಿಕೊಂಡಿದ್ದು, ಇಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ BNS 2023 115(2), 316(2), 318(4), 324(4), 351(2), 352, 76, 79 ರೀತ್ಯಾ ಪ್ರಕರಣ ದಾಖಲಾಗಿದೆ.

ಮೂವರು ಕುಖ್ಯಾತ ಕಳ್ಳರ ಬಂಧನ

ಕೋಲಾರ: ನಗರದ ಗಲ್​ಪೇಟೆ ಪೊಲೀಸರಿಂದ ಮೂವರು ಕುಖ್ಯಾತ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 10 ಲಕ್ಷ ರೂ. ಬೆಲೆ ಬಾಳುವ 10 ದ್ವಿಚಕ್ರ ವಾಹನಗಳು ಹಾಗೂ 25 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಕೋಲಾರ ಮೂಲದ ಸಂಜಯ್, ಫರ್ದಿನ್ ಹಾಗೂ ವೆನ್ನೆಲ್ಲಾ ಬಂಧಿತ ಆರೋಪಿಗಳು.

ಇದನ್ನೂ ಓದಿ: ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು; ಮನೆಗೆ ನುಗ್ಗಿ ಮಹಿಳೆಯನ್ನ ಮಾರಕಾಸ್ತ್ರದಿಂದ ಕೊಂದರು

ಕೋಲಾರ, ಹೊಸಕೋಟೆ, ಕೆ.ಆರ್.ಪುರಂ ಸೇರಿದಂತೆ ವಿವಿಧೆಡೆ ಕಳವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಕೋಲಾರದ ಗಲ್​ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಇದೀಗ ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.