ಮೊಬೈಲ್​ನಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಭಾಷಣೆ; ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ

ಅದೊಂದು ಸುಂದರ ಕುಟುಂಬ, ಗಂಡ-ಹೆಂಡತಿ, ಎರಡು ಮುದ್ದಾದ ಮಕ್ಕಳು. ಯಾವುದಕ್ಕೂ ಕೊರತೆ ಇರಲಿಲ್ಲ. ಆದ್ರೆ, ಇದಕ್ಕಿದ್ದಂತೆ ಆ ಕುಟುಂಬದಲ್ಲಿ ಬೀರುಗಾಳಿ ಎದ್ದಿದ್ದು, ದಿಢೀರನೇ ಬಂದ ಗಂಡ ಆಕೆಯ ಎದೆಗೆ ಕೋವಿಯಿಂದ ಗುಂಡು ಹೊಡೆದಿದ್ದಾನೆ. ಸ್ಥಳದಲ್ಲೆ ಹೆಂಡತಿ ಕೊನೆಯುಸಿರೆಳೆದಿದ್ದಾಳೆ.

ಮೊಬೈಲ್​ನಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಭಾಷಣೆ; ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ
ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 20, 2024 | 9:36 PM

ಕೊಡಗು, ಜು.20: ಪತ್ನಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ(Virajpet)ತಾಲ್ಲೂಕಿನ ಬೆಟೋಳಿ ಎಂಬ ಗ್ರಾಮದಲ್ಲಿ ನಡೆದಿದೆ. ಶಿಲ್ಪ (34) ಮೃತ ರ್ದುದೈವಿ. ಪ್ರೀತಿಸಿ ಮದುವೆಯಾದ ಗಂಡನಿಂದಲೆ ಕೊಲೆಯಾಗಿ ಹೋಗಿದ್ದಾಳೆ. 18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯ ಸಂಕೇತ ಎಂಬಂತೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇದರಿಂದ ಇಬ್ಬರೂ ಕೂಡ ಬೇರೆ ಬೇರೆ ಆಗಿದ್ದರಂತೆ. ಆದರೆ, ಒಂದೆ ವಾಸವಾಗಿದ್ದ ಅವರು, ಪ್ರತ್ಯೇಕ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಬಳಿಕ ಇಬ್ಬರ ಕಟುಂಬದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನಕ್ಕೆ ಅರ್ಜಿಕೂಡ ಹಾಕಿ ಕಾಯುತ್ತಿದ್ದರು.

ಇನ್ನು ನಿನ್ನೆ(ಶುಕ್ರವಾರ) ರಾತ್ರಿ ಮೃತ ಶಿಲ್ಪ ಮೊಬೈಲ್​ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದಳಂತೆ, ಮಾರನೇ ದಿನವೂ ಬೆಳಗ್ಗೆ 8.45ರ ಸಮಯದಲ್ಲಿ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸಿದ್ದಳಂತೆ. ಅದೇ ಸಮಯದಲ್ಲಿ ಅಡಿಗೆ ಮನೆಗೆ ಹೋದ ಗಂಡ ಬೋಪಣ್ಣ, ಕೋವಿ ಸಮೇತ ಆಗಮಿಸಿ  ಶಿಲ್ಪಾಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ.

ಇದನ್ನೂ ಓದಿ:ದಶಕಗಳ ಸ್ನೇಹಿತರ ಮಧ್ಯೆ ಹಣಕಾಸಿನ ವ್ಯವಹಾರ; ಶ್ರೀರಾಂಪುರದ ಕುಮಾರ್​ನನ್ನ ಕೊಲೆ ಮಾಡಿದವ ಅಂದರ್​

ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾದ ಪತಿ

ನಂತರ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ. ವಿರಾಜಪೇಟೆ ಮಲಬಾರ್ ರಸ್ತೆಯ ಆರ್ಜಿಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದ್ದಿದ್ದ ಬೋಪಣ್ಣ, ಹದಿನೆಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಪ್ರಥಮ ಪಿಯುಸಿ ಹಾಗೂ ಏಳನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನ ಕಳೆದುಕೊಂಡು ಮಕ್ಕಳಿಬ್ಬರು ತಬ್ವಲಿಗಳಾಗಿದ್ದಾರೆ.

ಪ್ರೀತಿಸಿ ಮದುವೆಯಾದ ನಂತರ ಹೊಂದಾಣಿಕೆ ಜೀವನ ಮಾಡಿದ್ರೆ ಸಂಸಾರ ಚೆನ್ನಾಗಿರುತ್ತಿತ್ತು. ಆದ್ರೆ, ಇಬ್ಬರೂ ಜಗಳವಾಡಿ ಸಂಸಾರವನ್ನು ಅಂತ್ಯ ಮಾಡಿಕೊಂಡಿದ್ದಾರೆ. ಇತ್ತ ಹೆಂಡತಿಯನ್ನು ಕೊಂದು ಗಂಡ ಕೂಡ ನೆಮ್ಮದಿಯಾಗಿಲ್ಲ. ಈಗ ಕೊಲೆ ಮಾಡಿ ಪೋಲಿಸರ ಕೈಗೆ ಸಿಕ್ಕಿದ್ದಾನೆ. ಸುಂದರ ಸಂಸಾರ ದಾರುಣವಾಗಿ ಅಂತ್ಯ ಕಂಡಿರೋದು ಮಾತ್ರ ವಿಪರ್ಯಾಸವೆ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ