AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷದ ಬಾಲಕ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದ 150 ಕೆಜಿ ತೂಕದ ದಡೂತಿ ತಾಯಿ

ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಮಗ ಪಕ್ಕದ ಮನೆಗೆ ಹೋಗೋದನ್ನು ತಡೆಯಲು ಈ ರೀತಿ ಮಾಡಿದೆ. ಕೊಲೆ ಮಾಡುವ ಕೆಟ್ಟ ಯೋಚನೆ ನನಗಿರಲ್ಲಿಲ್ಲ ಎಂದು ಪೊಲೀಸ್​​ ತನಿಖೆಯ ವೇಳೆ ಮಹಿಳೆ ಹೇಳಿರುವುದು ವರದಿಯಾಗಿದೆ.

10 ವರ್ಷದ ಬಾಲಕ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದ 150 ಕೆಜಿ ತೂಕದ ದಡೂತಿ ತಾಯಿ
ಅಕ್ಷತಾ ವರ್ಕಾಡಿ
|

Updated on: Jul 20, 2024 | 4:32 PM

Share

ಅಮೆರಿಕ: ತಾಯಿ-ಮಗುವಿನ ಸಂಬಂಧ ಅತ್ಯಂತ ಪ್ರವಿತ್ರವಾದುದು ಮತ್ತು ಗಾಢವಾದುದು. ತಾಯಿಯ ಮಡಿಲಲ್ಲಿದ್ದರೆ ಮಗು ಎಲ್ಲವನ್ನೂ ಮರೆತು ಹಾಯಾಗಿರುತ್ತದೆ ಎಂಬ ಮಾತಿಗೆ. ಆದರೆ ಇಲ್ಲೊಬ್ಬಳು ಮಹಾ ತಾಯಿ ತನ್ನ ಮಗುವಿನ ಮೇಲೆ ಕುಳಿತು, ಉಸಿರುಗಟ್ಟಿಸಿ ಕೊಂದಿದ್ದಾಳೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಜೆನಿಫರ್ ವಿಲ್ಸನ್(48) ಎಂದು ಗುರುತಿಸಲಾಗಿದ್ದು, ಈಕೆ ಮೃತ ಬಾಲಕನ ಮಲತಾಯಿ ಎಂದು ತಿಳಿದುಬಂದಿದೆ.

ಡಕೋಟಾ ಸ್ಟೀವನ್ಸ್(10) ಕೊಲೆಯಾದ ಬಾಲಕ. ಮಗ ಪಕ್ಕದ ಮನೆಗೆ ಹೋಗೋದನ್ನು ತಪ್ಪಿಸೋಕೆ ಹೋಗಿ ಮಗುವನ್ನು ಉಸಿರು ಕಟ್ಟಿಸಿ ಕೊಂದಿರುವುದು ಪೊಲೀಸ್​​ ತನಿಖೆಯ ವೇಳೆ ತಿಳಿದುಬಂದಿದೆ. ಸ್ಟೀವನ್ ನೆರೆಯ ಮನೆಗೆ ಆಟವಾಡಲು ಹೋಗುತ್ತಿರುವ ವೇಳೆ ಅದನ್ನು ತಪ್ಪಿಸಲು ಜೆನಿಫರ್ ಮುಂದಾಗಿದ್ದಾಳೆ. ಇದಕ್ಕಾಗಿ ಬಾಲಕನನ್ನು ನೆಲಕ್ಕೆ ಒತ್ತಿ ಹಿಡಿದಿಟ್ಟು ಆತನ ಮೇಲೆ ಕುಳಿತಿದ್ದಾಳೆ. ಬಾಲಕ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಗೋಳಾಡಿದರೂ 150 ಕೆಜಿ ತೂಕದ ಈ ಮಹಿಳೆ ಎದ್ದೇಳಲ್ಲಿಲ್ಲ. ಸುಮಾರು 5 ನಿಮಿಷಗಳ ಕಾಲ ಕುಳಿತ ನಂತರ ಬಾಲಕನ ಚಲನೆಯನ್ನು ನಿಲ್ಲಿಸಿರುವುದನ್ನು ಗಮನಿಸಿದ್ದಾಳೆ. ಕೂಡಲೆ ಮಗುವನ್ನು ಸೌತ್ ಬೆಂಡ್ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವುನಪ್ಪಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ತರಗತಿಯಲ್ಲಿ ಮಕ್ಕಳು ಕುಳಿತಿರುವಾಗಲೇ ಖಾಸಗಿ ಶಾಲೆಯ ಗೋಡೆ ಕುಸಿತ; ಸಿಸಿಟಿವಿಯಲ್ಲಿ ಸೆರೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ವಾಯವ್ಯ ಇಂಡಿಯಾನಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ