Viral News: 32 ಹಲ್ಲುಗಳೊಂದಿಗೆ ಜನಿಸಿದ ಮಗು; ವಿಡಿಯೋ ವೈರಲ್
ಅಮೆರಿಕದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಈ ಮಗುವಿನ ವಿಶೇಷತೆ ಎಂದರೆ ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದೆ. ಸದ್ಯ ತನ್ನ ಮಗುವಿನ ಬಗ್ಗೆ ಸ್ವತಃ ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಸಾಮಾನ್ಯವಾಗಿ ಮಗುವಿಗೆ ಹಲ್ಲು ಹುಟ್ಟಲು ಪ್ರಾರಂಭವಾಗುವುದು ಆರು ತಿಂಗಳಿಂದ 12 ತಿಂಗಳ ನಡುವೆ . ಆದಾಗ್ಯೂ, ಹಲ್ಲುಗಳು ಸಂಪೂರ್ಣವಾಗಿ ಬರಲು ಹಲವು ವರ್ಷಗಳು ಬೇಕಾಗುತ್ತದೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದೆ. ನಂಬಲು ಸಾಧ್ಯವೇ ಇಲ್ಲ ಅಂತ ನಿಮಗೆ ಅನಿಸಬಹುದು. ಆದರೆ ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ಹೇಳುತ್ತಾರೆ.
ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಕುರಿತು ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ತನ್ನ ಮಗಳನ್ನು ಮೊದಲ ಬಾರಿಗೆ ನೋಡಿದಾಗ , ಬಾಯಿಯಲ್ಲಿ ಎಲ್ಲಾ ಹಲ್ಲುಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. @ika.diwa ಅವರ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಕ್ಲಿಪ್ ಅನ್ನು ಈಗಾಗಲೇ ಮೂರು ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ತರಗತಿಯಲ್ಲಿ ಮಕ್ಕಳು ಕುಳಿತಿರುವಾಗಲೇ ಖಾಸಗಿ ಶಾಲೆಯ ಗೋಡೆ ಕುಸಿತ; ಸಿಸಿಟಿವಿಯಲ್ಲಿ ಸೆರೆ
ncbi.nlm.nih.gov ಪ್ರಕಾರ, ಈ ರೀತಿ ಹುಟ್ಟಲು ಹಲವು ಕಾರಣಗಳಿರಬಹುದು. ಆನುವಂಶಿಕ ಅಂಶಗಳು, ಕೆಲವು ವೈದ್ಯಕೀಯ ಪರಿಸ್ಥಿತಿಗಳು ಅಥವಾ ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯದ ಸ್ಥಿತಿಯು ಸಂಭವನೀಯ ಕಾರಣಗಳೆಂದು ಹೇಳಲಾಗುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ಮಗುವಿಗೆ ಯಾವುದೇ ಗಂಭೀರ ತೊಂದರೆಯನ್ನು ಉಂಟುಮಾಡುವುದಿಲ್ಲವಾದರೂ, ತಾಯಿ ಹಾಲುಣಿಸುವಾಗ ತೊಂದರೆ ಎದುರಿಸಬಹುದು ಎಂದು ಹೇಳಲಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




