ನಿತ್ಯವೂ ಆಫೀಸ್​ಗಾಗಿ 320 ಕಿ.ಮೀ ಪ್ರಯಾಣಿಸುವ ವ್ಯಕ್ತಿ, ಹತ್ತಿರವೆಲ್ಲೂ ಮನೆ ಇರಲಿಲ್ಲವೇ?

ಚೀನಾದ ವ್ಯಕ್ತಿಯೊಬ್ಬರು ನಿತ್ಯವೂ 320 ಕಿ.ಮೀ ಪ್ರಯಾಣ ಮಾಡುತ್ತಾರೆ, ಅವರ ಮನೆಯಿಂದ ಅವರ ಕಚೇರಿ 160 ಕಿ.ಮೀ ಇದ್ದು ನಿತ್ಯ ಮನೆಯಿಂದ ಅಲ್ಲಿಗೆ ಸಾರ್ವಜನಿಕ ಸಾರಿಗೆ ಮೂಲಕ ಓಡಾಡುತ್ತಾರೆ.

ನಿತ್ಯವೂ ಆಫೀಸ್​ಗಾಗಿ 320 ಕಿ.ಮೀ ಪ್ರಯಾಣಿಸುವ ವ್ಯಕ್ತಿ, ಹತ್ತಿರವೆಲ್ಲೂ ಮನೆ ಇರಲಿಲ್ಲವೇ?
Image Credit source: Timesnow
Follow us
|

Updated on: Jul 20, 2024 | 12:45 PM

ದೆಹಲಿ ಅಥವಾ ಮುಂಬೈ ನಗರಗಳಲ್ಲಿ ವಾಸಿಸುವವರಿಗೆ ಮನೆಯಿಂದ ಕಚೇರಿಗೆ ಹೋಗುವುದು ಹಾಗೂ ಕಚೇರಿಯಿಂದ ಮನೆಗೆ ಹೋಗುವುದು ಎಷ್ಟು ಕಷ್ಟ ಎನ್ನುವ ಅನುಭವವಿರುತ್ತದೆ. ಏಕೆಂದರೆ ಈ ನಗರಗಳಲ್ಲಿ ಸಾಮಾನ್ಯವಾಗಿ ಜನರ ಮನೆ ಮತ್ತು ಕಚೇರಿ ನಡುವೆ ಬಹಳ ದೂರವಿರುತ್ತದೆ ಮತ್ತು ಅಲ್ಲಿಗೆ ತಲುಪಲು ಅವರು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕಾಗುತ್ತದೆ.

ಆದರೆ ಬಹುಶಃ ಈ ಚೀನಾದ ವ್ಯಕ್ತಿ ಪ್ರಯಾಣಿಸಿದಷ್ಟು ದೂರು ಯಾರೂ ನಿತ್ಯ ಪ್ರಯಾಣಿಸುವುದಿಲ್ಲ. ಏಕೆಂದರೆ ಈ ವ್ಯಕ್ತಿ ಪ್ರತಿದಿನ 320 ಕಿ.ಮೀನಷ್ಟು ಪ್ರಯಾಣಿಸುತ್ತಾನೆ. ಆದರೆ ಇದೆಲ್ಲವನ್ನೂ ತನ್ನ ಹೆಂಡತಿಗಾಗಿ ಮಾಡುವುದಾಗಿ ಹೇಳಿಕೊಂಡಿದ್ದಾನೆ.

31 ವರ್ಷದ ಲಿನ್ ಶು ಪೂರ್ವ ಚೀನಾದ ಶಾಂಡಾಂಗ್​ ಪ್ರಾಂತ್ಯದ ವೈಫಾಂಗ್ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುತ್ತಾರೆ, 5.20ಕ್ಕೆ ಮನೆಯಿಂದ ಹೊರಡುತ್ತಾರೆ. ಇ ಬೈಕ್​ ಮೂಲಕ ರೈಲ್ವೆ ನಿಲ್ದಾಣ ತಲುಪುತ್ತಾರೆ. ಬೆಳಗ್ಗೆ 6.15ಕ್ಕೆ ರೈಲನ್ನು ಹಿಡಿಯುತ್ತಾರೆ ನಂತರ 7.46ಕ್ಕೆ ಶಾಂಡಾಂಗ್ ಪ್ರಾಂತ್ಯದ ಚೆಂಗ್ಡುಗೆ ಪ್ರಯಾಣಿಸುತ್ತಾರೆ.

ಇದಾದ ನಂತರ ಅವರು 15 ನಿಮಿಷಗಳ ಕಾಲ ಸುರಂಗದಲ್ಲಿ ಪ್ರಯಾಣಿಸುತ್ತಾರೆ ಬಳಿಕ ಕಚೇರಿ ತಲುಪುತ್ತಾರೆ. ಸುಮಾರು 9 ಗಂಟೆಗೆ ಕೆಲಸವನ್ನು ಪ್ರಾರಂಭಿಸುತ್ತಾರೆ. ಅದಕ್ಕೂ ಮೊದಲು ನಾವು ಕಚೇರಿ ತಲುಪಿ ಬೆಳಗಿನ ತಿಂಡಿ ಸೇವಿಸುತ್ತಾರೆ.

ಮತ್ತಷ್ಟು ಓದಿ: ವಾಷಿಂಗ್​ ಮೆಷಿನ್​ನಲ್ಲಿತ್ತು ನಾಗರಹಾವು, ಸ್ವಲ್ಪದರಲ್ಲೇ ಕಡಿತದಿಂದ ತಪ್ಪಿಸಿಕೊಂಡ ವ್ಯಕ್ತಿ

ಒಂದು ಸುತ್ತಿನ ಪ್ರಯಾಣವು 160 ಕಿ.ಮೀದ್ದಾಗಿದೆ. ಮನೆಗೆ ಹಿಂದಿರುಗುವಾಗಲೂ ಅಷ್ಟೇ ಪ್ರಯಾಣಿಸಬೇಕು. ಸುಮಾರು 3 ಗಂಟೆಗಳಲ್ಲಿ 160 ಕಿ.ಮೀ ಪ್ರಯಾಣ ಮುಗಿಸಿ ಮನೆಗೆ ಬರುತ್ತಾರೆ. ಆದರೆ ಅವರೇಕೆ ಅಲ್ಲಿಂದಲೇ ಓಡಾಡುತ್ತಾರೆ ಆಫೀಸ್​ ಹತ್ತಿರ ಎಲ್ಲೂ ಮನೆ ಇರಲಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ.

ಲಿನ್ ಕಳೆದ 7 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು, ಈ ವರ್ಷದ ಮೇನಲ್ಲಿ ಮದುವೆಯಾಗಿದ್ದಾರೆ. ಹೆಂಡತಿಗಾಗಿ ಸ್ವಂತ ಫ್ಲ್ಯಾಟ್​ ಖರೀದಿಸಿದ್ದಾರೆ. ಈಗ ಆಕೆಯನ್ನು ಅಲ್ಲಿ ಒಬ್ಬಳನ್ನೇ ಬಿಟ್ಟು ತಾನು ಬೇರೆ ಊರಿನಲ್ಲಿ ವಾಸಿಸುವುದು ಸರಿ ಅನ್ನಿಸಲಿಲ್ಲ ಹಾಗಾಗಿ ಅಲ್ಲಿಯೇ ಇದ್ದಾರೆ.

ಅವರು ತಿಂಗಳ ಓಡಾಟಕ್ಕೆ ಬರೋಬ್ಬರಿ 20 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ. ಅವರ ಕಚೇರಿ ಇರುವ ನಗರದಲ್ಲಿ ಸಿಂಗಲ್ ಬಿಎಚ್​ಕೆ 20 ಸಾವಿರರೂ.ಗೆ ಲಭ್ಯವಾಗುತ್ತದೆ. ಈಗ ಅವರ ಪತ್ನಿ ಕೂಡ ಅದೇ ನಗರದಲ್ಲಿ ಕೆಲಸ ಹುಡುಕುತ್ತಿದ್ದಾರೆ.

ಅವರ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತುಂಬಾ ಬೆಂಬಲ ನೀಡುತ್ತಾರೆ, ಓವರ್​ ಟೈಂ ಕೆಲಸ ಮಾಡು ಎಂದು ಒತ್ತಡ ಹೇರುವುದಿಲ್ಲ, ಸಾರ್ವಜನಿಕ ಸಾರಿಗೆ ಉತ್ತಮವಾಗಿದ್ದು, ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ