Gold Jewellery: ಈ ಒಂದು ವಸ್ತು ಬಳಸಿ ನಿಮ್ಮ ಚಿನ್ನ ಅಸಲಿಯೋ, ನಕಲಿಯೋ ಪತ್ತೆಹಚ್ಚಿ
ಚಿನ್ನಾಭರಣಗಳನ್ನು ಖರೀದಿಸುವ ಮೊದಲು ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಮೋಸ ಹೋಗುವ ಅಪಾಯವಿದೆ. ಅನೇಕ ಜನರಿಗೆ ನಕಲಿ ಚಿನ್ನಾಭರಣಗಳನ್ನು ಹೇಗೆ ಗುರುತಿಸುವುದು ಎಂದು ತಿಳಿದಿಲ್ಲ. ಆದ್ದರಿಂದ ಮನೆಯಲ್ಲಿದ್ದುಕೊಂಡೇ ನಿಮ್ಮ ಆಭರಣ ಅಸಲಿಯೇ ಅಥವಾ ನಕಲಿಯೇ ಎಂದು ತಿಳಿದುಕೊಳ್ಳಲು ಈ ಸಿಂಪಲ್ ಟಿಪ್ಸ್ ಅನುಸರಿಸಿ.
ಯಾವುದೇ ಅನುಮಾನ ಬಾರದಂತೆ ಅಸಲಿ ಉತ್ಪನ್ನಗಳನ್ನೇ ನಕಲಿ ಮಾಡಿ ಅಮಾಯಕರನ್ನು ವಂಚಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ವಿಶೇಷವಾಗಿ ಚಿನ್ನ ಖರೀದಿಸುವಾಗ ಜಾಗರೂಕರಾಗಿರುವುದು ತುಂಬಾ ಮುಖ್ಯ. ರೋಲ್ಡ್ ಗೋಲ್ಡ್ ಕೂಡ ನಿಜವಾದ ಚಿನ್ನದಂತೆ ಕಾಣುತ್ತದೆ. ಒರಿಜಿನಲ್ ಬಂಗಾರದ ಹೆಸರಲ್ಲಿ ನಕಲಿ ಚಿನ್ನ ನೀಡಿ ಅಮಾಯಕರನ್ನು ವಂಚಿಸುತ್ತಿರುವ ಹಲವು ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿ ಜನರು ಸದಾ ಜಾಗೃತರಾಗಿರಬೇಕು.
ಚಿನ್ನ ಮತ್ತು ಆಭರಣಗಳನ್ನು ಖರೀದಿಸುವ ಮೊದಲು ಬಹಳ ಜಾಗರೂಕರಾಗಿರಿ. ಇಲ್ಲದಿದ್ದರೆ ಮೋಸ ಹೋಗುವ ಅಪಾಯವಿದೆ. ಅನೇಕ ಜನರಿಗೆ ನಕಲಿ ಚಿನ್ನ ಮತ್ತು ಆಭರಣಗಳನ್ನು ಹೇಗೆ ಗುರುತಿಸುವುದು ಎಂದು ತಿಳಿದಿಲ್ಲ. ಮನೆಯಲ್ಲಿದ್ದರೂ ನಿಮ್ಮ ಆಭರಣ ಅಸಲಿಯೇ ಅಥವಾ ನಕಲಿಯೇ? ತಿಳಿಯುವುದು ಸುಲಭ.
ನಕಲಿ ಆಭರಣಗಳನ್ನು ಗುರುತಿಸುವುದು ಹೇಗೆ?
ನೀವೂ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ನಿಜವಾದ ಮತ್ತು ನಕಲಿ ಚಿನ್ನವನ್ನು ಗುರುತಿಸುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಚಿನ್ನ ಕೂಡ ಮಾರಾಟವಾಗುತ್ತಿದೆ. ಆಭರಣದ ಮೇಲೆ ಹಾಲ್ ಮಾರ್ಕ್ ಮಾರ್ಕ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಈಗ ಹಲವರು ಆಭರಣಗಳ ಮೇಲೆ ನಕಲಿ ಹಾಲ್‌ಮಾರ್ಕ್ ಹಾಕುತ್ತಿದ್ದಾರೆ. ಆದ್ದರಿಂದ ಚಿನ್ನವನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದಲ್ಲದೆ, ಮನೆಯಲ್ಲಿ ಇಡುವ ಚಿನ್ನದ ಶುದ್ಧತೆಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ಹಲವಾರು ಮಾರ್ಗಗಳಿವೆ.
ಇದನ್ನೂ ಓದಿ: 10 ವರ್ಷದ ಬಾಲಕ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದ 150 ಕೆಜಿ ತೂಕದ ದಡೂತಿ ತಾಯಿ
ಚಿನ್ನದ ಮೇಲೆ ವಿನೆಗರ್ನ ಕೆಲವು ಹನಿಗಳನ್ನು ಹಾಕಿ ಮತ್ತು ಕೆಲವು ನಿಮಿಷಗಳ ನಂತರ ಎಚ್ಚರಿಕೆಯಿಂದ ನೋಡಿ. ಚಿನ್ನದ ಬಣ್ಣ ಬದಲಾಗದಿದ್ದರೆ ಅದು ಶುದ್ಧ ಚಿನ್ನ ಎಂದು ಅರ್ಥ. ವಿನೆಗರ್ ಜೊತೆ ಬೆರೆತ ತಕ್ಷಣ ನಕಲಿ ಚಿನ್ನ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆಯಸ್ಕಾಂತಗಳನ್ನು ಬಳಸಿ ನೈಜ ಮತ್ತು ನಕಲಿ ಚಿನ್ನವನ್ನೂ ಪತ್ತೆ ಮಾಡಬಹುದು. ಚಿನ್ನವು ಆಯಸ್ಕಾಂತಗಳಿಗೆ ಅಂಟಿಕೊಳ್ಳುವುದಿಲ್ಲ. ನಿಮ್ಮ ಚಿನ್ನವು ಅಯಸ್ಕಾಂತಕ್ಕೆ ಅಂಟಿಕೊಂಡರೆ, ಅದು ನಕಲಿ ಎಂದು ಅರ್ಥಮಾಡಿಕೊಳ್ಳಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ