ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು

ನಿನ್ನೆ ರಾತ್ರಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಬಳಿ ಪೊಲೀಸ್ ಜೀಪ್ ಮೇಲೆ ಕಳ್ಳರಿಂದ ಕಲ್ಲೆಸೆದಿರುವಂತಹ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರೆಂಬ ಶಂಕಿಸಿ ಪೊಲೀಸರು ಚೇಸ್​ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆಯಲಾಗಿದೆ. ಪಿಎಸ್ಐ ಶಿವಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ​

ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು
ಗುಂಡು ಹಾರಿಸಿದರೂ ಪೊಲೀಸ್ ಜೀಪ್​ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2024 | 6:08 PM

ಚಿತ್ರದುರ್ಗ, ಜುಲೈ 21: ಕುದಾಪುರ ಬಳಿ ಪೊಲೀಸ್ ಜೀಪ್ (police jeep) ಮೇಲೆ ಕಳ್ಳರು ಕಲ್ಲೆಸೆದಿರುವಂತಹ (stone) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ನಿನ್ನೆ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸರು ತಡೆದರೂ ಬೊಲೆರೊ ವಾಹನ ನಿಲ್ಲಿಸದೆ ಹೋಗಿದ್ದಾರೆ. ಕಳ್ಳರೆಂಬ ಶಂಕೆ ಮೇಲೆ ನಾಯಕನಹಟ್ಟಿ ಠಾಣೆ ಪೊಲೀಸರು ಚೇಸ್​ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದಿದ್ದಾರೆ.

ಈ ವೇಳೆ ನಾಯಕನಹಟ್ಟಿ ಠಾಣೆ ಪಿಎಸ್​ಐ ಶಿವಕುಮಾರರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕುದಾಪುರ ಬಳಿಯಿಂದ ಕಳ್ಳರ ಗ್ಯಾಂಗ್ ಪರಾರಿ ಆಗಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಎಸ್​ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಂದಿ, ಕುರಿಗಳ್ಳರೆಂಬ ಶಂಕೆ

ಘಟನೆ ಬಗ್ಗೆ ಚಿತ್ರದುರ್ಗ ಎಸ್​ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದು, ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗಾಳಿಯಲ್ಲಿ 2 ಗುಂಡು ಹಾಗೂ ಬೊಲೆರೊ ವಾಹನದ ಟೈರ್​ಗೆ 3 ಗುಂಡು ಫೈರ್ ಮಾಡಲಾಗಿದೆ. ಪಿಎಸ್​ಐ ಗುಂಡು ಹಾರಿಸಿದರೂ ಲೆಕ್ಕಿಸದೆ ಕಳ್ಳರು ಪರಾರಿಯಾಗಿದ್ದಾರೆ. ಆಂಧ್ರಪ್ರದೇಶದ ಕಡೆ ಎಸ್ಕೇಪ್ ಆಗಿದ್ದು, ಹಂದಿ, ಕುರಿಗಳ್ಳರೆಂದು ಶಂಕಿಸಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿಸಲು ತೆರಳಿದ್ದ ವೇಳೆ ಪೊಲೀಸ್​ ಪದೆ ಮೇಲೆ: ರೌಡಿ ಶೀಟರ್​ ಕಾಲಿಗೆ ಗುಂಡೇಟು

ಕೋಲಾರ: ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾಂಟೆಡ್ ಆಗಿರುವ ರೌಡಿ ಶೀಟರ್ ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪರಿಣಾಮ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಕೋಲಾರದಲ್ಲಿ ನಡೆದಿತ್ತು. ಜಿಲ್ಲೆಯ ಕೆಜಿಎಫ್ ನಗರದ ಅಂಡರ್‌ಸನ್ ಪೇಟೆಯಲ್ಲಿಂದು 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅಂಡರ್‌ಸನ್ ಪೇಟೆಯ ರೌಡಿ ಶೀಟರ್ ಸ್ಟಾಲಿನ್ ಬಲ ಕಾಲಿಗೆ ಗಂಡು ಹಾರಿಸಲಾಗಿತ್ತು.

ಇದನ್ನೂ ಓದಿ: ಮೊಬೈಲ್​ನಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಭಾಷಣೆ; ಪ್ರೀತಿಸಿ ಮದುವೆಯಾದವಳನ್ನೇ ಗುಂಡಿಕ್ಕಿ ಕೊಂದ ಗಂಡ

ಸುಲಿಗೆ ಪ್ರಕರಣದಲ್ಲಿ ಅಂಡರ್‌ಸನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಪೇದೆ ಸುನಿಲ್ ಬಂಧಿಸುವ ವೇಳೆ ಸುನಿಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಪರಿಣಾಮ ಸ್ಥಳದಲ್ಲಿದ್ದ ಪೊಲೀಸರು ರೌಡಿ ಶೀಟರ್ ಬಲ ಕಾಲಿಗೆ ಗುಂಡು ಹಾರಿಸಿದ್ದರು. ಇನ್ನೂ ಪೊಲೀಸ್ ಪೇದೆ ಸುನಿಲ್​ ಮತ್ತು ಗಾಯಾಳು ರೌಡಿ ಶೀಟರ್ ಸ್ಟಾಲಿನ್​ ನನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ‌ ಕಳವು, ಇಬ್ಬರ ಬಂಧನ

ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇನ್ನೂ ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ಪಾಂಡುರಂಗ ಭೇಟಿ ನೀಡಿದ್ದರು. ಅಂಡರ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.