ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಪೂಜಾರಿಯ ಬರ್ಬರ ಕೊಲೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಆಗಿದೆ. ಹುಬ್ಬಳ್ಳಿಯ ಈಶ್ವರನಗರದಲ್ಲಿ ವೈಷ್ಣವಿ ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವಂತಹ ಘಟನೆ ಇಂದು ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹುಬ್ಬಳ್ಳಿ, ಜುಲೈ 21: ಚಾಕುವಿನಿಂದ (knife) ಇರಿದು ದುಷ್ಕರ್ಮಿಗಳು ಪೂಜಾರಿಯನ್ನು (priest) ಹತ್ಯೆಗೈದಿರುವಂತಹ ಘಟನೆ ಈಶ್ವರ ನಗರದಲ್ಲಿ ನಡೆದಿದೆ. ವೈಷ್ಣವಿ ದೇವಸ್ಥಾನದ ಪೂಜಾರಿ ದೇವಪ್ಪಜ್ಜ ಬರ್ಬರ ಹತ್ಯೆಗೊಳಗಾದ ವ್ಯಕ್ತಿ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ಒಂದು ವರ್ಷದ ಹಿಂದೆ ಕೂಡ ಸ್ವಾಮೀಜಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಟೈರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವು
ಟೈರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಗದಗ ಹುಬ್ಬಳ್ಳಿಯ ಬಂಡಿವಾಡ ಬ್ರಿಡ್ಜ್ ಬಳಿ ನಡೆದಿದೆ. ಕೋಳಿವಾಡ ಗ್ರಾಮದ 30 ವರ್ಷದ ಪ್ರವೀಣ್ ಜಂತ್ಲಿ ಮೃತ ವ್ಯಕ್ತಿ. ಹುಬ್ಬಳ್ಳಿಯ ರಾಜ ನಗರದ ಎಟಿಎಮ್ನಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಗುಂಡು ಹಾರಿಸಿದರೂ ಪೊಲೀಸ್ ಜೀಪ್ ಮೇಲೆ ಕಲ್ಲು ಎಸೆದು ಪರಾರಿಯಾದ ಕಳ್ಳರು
ನಿನ್ನೆ ಮನೆಯಿಂದ ಕೆಲಸಕ್ಕೆ ಹೊಗುವಾಗ ಬೈಕ್ ಟೈರ್ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
OTP ಪಡೆದು 98 ಸಾವಿರಕ್ಕೂ ಹೆಚ್ಚು ಹಣ ಎಗರಿಸಿದ ಖದೀಮರು
ನೆಲಮಂಗಲ: ಪಾರ್ಸಲ್ ಬಂದಿದೆ ಎಂದು ಸಾವಿರಾರು ರೂ. ಖದೀಮರು ಎಗರಿಸಿರುವಂತಹ ಘಟನೆ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಪುನೀತ್ ಎಂಬುವವರು 98 ಸಾವಿರಕ್ಕೂ ಹೆಚ್ಚು ಹಣ ವಂಚನೆ ಆಗಿದೆ. ಫೆಡೆಕ್ಸ್ ಕೊರಿಯರ್ ಸೆರ್ವಿಸ್ ಕಡೆಯಿಂದ ಪಾರ್ಸಲ್ ಬಂದಿದೆ ಕರೆ ಮಾಡಿ ದುಷ್ಕರ್ಮಿಗಳು ಹಣ ಎಗರಿಸಿದ್ದಾರೆ.
ಇದನ್ನೂ ಓದಿ: ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ
ಮುಂಬೈನ ಕಸ್ಟಮ್ಸ್ ಕಚೇರಿಯಲ್ಲಿ ನಿಮ್ಮ ಹೆಸರಿನಲ್ಲಿ ಪಾಸ್ಪೋರ್ಟ್, 4 ಕೆಜಿ ಬಟ್ಟೆ, 2 ಡೆಬಿಟ್ ಕಾರ್ಡ್, 480 ಗ್ರಾಂ ಡ್ರಗ್ಸ್ ಸಿಕ್ಕಿದೆ ಎಂದು ಖದೀಮರು ಕರೆ ಮಾಡಿದ್ದು, ಪಾರ್ಸಲ್ ನಿಮ್ಮದಲ್ಲ ಅಂದರೆ ಆನ್ಲೈನ್ನಲ್ಲಿ ಕೇಸ್ ದಾಖಲಿಸಬಹುದು ಎಂದು ಧಮ್ಕಿ ಹಾಕಿದ್ದಾರೆ. ಬಳಿಕ ಲಾಗಿನ್ ಆಗಿ ಕೇಸ್ ದಾಖಲು ಮಾಡುವಾಗ ಒಟಿಪಿ ಪಡೆದು 98 ಸಾವಿರ ರೂ. ವಂಚನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.