Jammu And Kashmir Blast: ಜಮ್ಮು- ಕಾಶ್ಮೀರದ ಹೀರಾನಗರದಲ್ಲಿ IED ಸ್ಫೋಟ

|

Updated on: Mar 30, 2023 | 9:02 AM

ಜಮ್ಮು ಮತ್ತು ಕಾಶ್ಮೀರದ ಹೀರಾನಗರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.  ಜಮ್ಮು ಮತ್ತು ಕಾಶ್ಮೀರದ ಹಿರಾನಗರದ (ಕತುವಾ) ಸನ್ಯಾಲ್‌ನಲ್ಲಿರುವ ಭಾರತ-ಪಾಕ್ ಗಡಿಗಿಂತ ನಾಲ್ಕು ಕಿಲೋಮೀಟರ್ ಮೊದಲು ಗಡಿ ಪೊಲೀಸ್ ಪೋಸ್ಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಭಾರಿ ಸ್ಫೋಟ ಸಂಭವಿಸಿದೆ.

Jammu And Kashmir Blast: ಜಮ್ಮು- ಕಾಶ್ಮೀರದ ಹೀರಾನಗರದಲ್ಲಿ IED ಸ್ಫೋಟ
ಐಇಡಿ ಸ್ಫೋಟ
Follow us on

ಜಮ್ಮು ಮತ್ತು ಕಾಶ್ಮೀರದ ಹೀರಾನಗರದಲ್ಲಿ IED ಸ್ಫೋಟ ಸಂಭವಿಸಿದೆ.  ಜಮ್ಮು ಮತ್ತು ಕಾಶ್ಮೀರದ ಹಿರಾನಗರದ (ಕತುವಾ) ಸನ್ಯಾಲ್‌ನಲ್ಲಿರುವ ಭಾರತ-ಪಾಕ್ ಗಡಿಗಿಂತ ನಾಲ್ಕು ಕಿಲೋಮೀಟರ್ ಮೊದಲು ಗಡಿ ಪೊಲೀಸ್ ಪೋಸ್ಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಅದರ ಸದ್ದು ಹತ್ತಿರದ ನಾಲ್ಕೈದು ಹಳ್ಳಿಗಳಿಗೆ ಕೇಳಿಸಿತ್ತು.

ರಾತ್ರಿಯೇ ಕತುವಾಗೆ ಎಸ್‌ಎಸ್‌ಪಿ ಶಿವದೀಪ್ ಸಿಂಗ್ ಜಮ್ವಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು.
ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಸ್ಫೋಟ ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಗಡಿ ಪ್ರದೇಶವಾಗಿರುವುದರಿಂದ ಗಡಿಯಾಚೆಯಿಂದ ಡ್ರೋನ್ ದಾಳಿಯ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಮತ್ತಷ್ಟು ಓದಿ: ಮಂಗಳೂರು ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್​ನನ್ನು ಮಾರ್ಚ್‌ 15ರವರೆಗೆ ಕಸ್ಟಡಿಗೆ ಪಡೆದ NIA ಅಧಿಕಾರಿಗಳು

ಸದ್ಯ ತನಿಖೆ ನಡೆಯುತ್ತಿದೆ. ಸ್ಫೋಟದಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿರುವ ವರದಿ ಇದೆ, ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಸಿಆರ್‌ಪಿಎಫ್, ಪೊಲೀಸರು ಮತ್ತು ಎಸ್‌ಒಜಿ ಯೋಧರು ತಡರಾತ್ರಿ ಇಡೀ ಪ್ರದೇಶದಲ್ಲಿ ದಿಗ್ಬಂಧನದ ಮೂಲಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಳೆ ಕತುವಾ-ಸಾಂಬಾ ಮಾರ್ಗವನ್ನೂ ಮುಚ್ಚಲಾಗಿದೆ.

ರಾತ್ರಿ 9:30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಹೀರಾನಗರದ ಬಿಡಿಸಿ ಅಧ್ಯಕ್ಷ ರಾಮಲಾಲ್ ಕಾಲಿಯಾ ಮತ್ತು ಸ್ಥಳೀಯ ಜನರು ತಿಳಿಸಿದ್ದಾರೆ. ಸ್ಥಳದಿಂದ ಸುಮಾರು 20 ಮೀಟರ್ ದೂರದಲ್ಲಿ ಗಡಿ ಪೊಲೀಸ್ ಠಾಣೆ ಇದೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ದೊಡ್ಡ ಕುಳಿ ನಿರ್ಮಾಣವಾಗಿದೆ. ಸಮೀಪದಲ್ಲೇ ಸೇತುವೆಯೂ ಇದ್ದು, ಸುತ್ತಮುತ್ತಲಿನ ಹೊಲಗಳಲ್ಲಿ ಬೆಳೆ ಬೆಳೆಯಲಾಗಿದೆ. ಮೂಲಗಳ ಪ್ರಕಾರ, ಇದು ಐಇಡಿಯಂತೆ ಕಾಣುತ್ತದೆ, ಆದರೆ ಇದೀಗ ಏನನ್ನೂ ಖಚಿತವಾಗಿ ಹೇಳಲಾಗುವುದಿಲ್ಲ.

ಅಷ್ಟರಲ್ಲಿ ಸಮೀಪದ ಹಲವು ಗ್ರಾಮಗಳ ಜನರು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. .

ಸ್ಫೋಟದ ನಂತರ ಇಡೀ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ, ಸಮೀಪದ ಹೆದ್ದಾರಿಗಳಲ್ಲೂ ಅಲರ್ಟ್ ನೀಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ