ಖರ್ಗೆಯವರೇ ಈಗ ನಾನು ನಿಮ್ಮನ್ನು ಮುಟ್ಟಿದ್ರೆ, ನಿಮ್ಮ ಬೆನ್ನಿಗೆ ಮೂಗು ಒರೆಸುತ್ತಿದ್ದೀನಿ ಅಂತಾರೇನೋ: ರಾಹುಲ್ ಗಾಂಧಿ

ಖರ್ಗೆಯವರೇ ಈಗ ನಾನು ನಿಮ್ಮನ್ನು ಮುಟ್ಟಿದರೆ ನಿಮ್ಮ ಬೆನ್ನಿಗೆ ಮೂಗುವರೆಸುತ್ತಿದ್ದೀನಿ ಅಂತಾರೇನೋ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಖರ್ಗೆಯವರೇ ಈಗ ನಾನು ನಿಮ್ಮನ್ನು ಮುಟ್ಟಿದ್ರೆ, ನಿಮ್ಮ ಬೆನ್ನಿಗೆ ಮೂಗು ಒರೆಸುತ್ತಿದ್ದೀನಿ ಅಂತಾರೇನೋ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Edited By:

Updated on: Mar 24, 2023 | 1:29 PM

ಖರ್ಗೆಯವರೇ ಈಗ ನಾನು ನಿಮ್ಮನ್ನು ಮುಟ್ಟಿದರೆ ನಿಮ್ಮ ಬೆನ್ನಿಗೆ ಮೂಗುವರೆಸುತ್ತಿದ್ದೀನಿ ಅಂತಾರೇನೋ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇಂದು ರಾಹುಲ್ ಗಾಂಧಿ(Rahul Gandhi)  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಛೇಂಬರ್​ನಲ್ಲಿ ನಡೆಯುವ ಪಕ್ಷದ ಸಭೆಗೆ ಹಾಜರಾಗಲು ಸಂಸತ್ತಿಗೆ ಆಗಮಿಸಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಭೆ ಮುಗಿಸಿ ನಿರ್ಗಮಿಸುತ್ತಿದ್ದಂತೆ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೆಟ್ಟಿಲಿನಿಂದ ಇಳಿಯುವಾಗ ಸಹಾಯ ಮಾಡಿದರು.

ಮತ್ತಷ್ಟು ಓದಿ: ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾರಂತಹ ಉತ್ತಮ ನಾಯಕನನ್ನು ಕಳೆದುಕೊಂಡಿದ್ದು ಹೇಗೆ? ಆಜಾದ್ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳಿವು

ರಾಹುಲ್ ಗಾಂಧಿಗೆ 2019ರ ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಸೂರತ್ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ನಾನು ಈಗ ನಿಮ್ಮನ್ನು ಮುಟ್ಟಿದರೆ ಅವರು ನಾನು ನಿಮ್ಮ ಬೆನ್ನಿನ ಮೇಲೆ ನನ್ನ ಮೂಗು ವರೆಸುತ್ತಿದ್ದೇನೆ ಎಂದು ಹೇಳುತ್ತಾರೆ ಆದರೆ ನಾನು ನಿಮಗೆ ಸಹಾಯ ಮಾಡುತ್ತಿದ್ದೇನಷ್ಟೆ ಎಂದಿದ್ದಾರೆ.

ಈ ಹಿಂದೆ ಕಾರಿನಿಂದ ಇಳಿದು ಹೋಗುತ್ತಿರುವಾಗ ಮಲ್ಲಿಕಾರ್ಜುನ ಖರ್ಗೆಯವರು ಮುಂದಿದ್ದರು ಆಗ ರಾಹುಲ್ ಗಾಂಧಿ ಮುಖದ ಮೇಲೆ ಬೆರಳಿಟ್ಟು ಬಳಿಕ ಖರ್ಗೆಯವರನ್ನು ಮುಟ್ಟಿದ್ದರು ಆಗ ಬಿಜೆಪಿಯು ರಾಹುಲ್ ಗಾಂಧಿಯವರು ಖರ್ಗೆಯವರನ್ನು ಟಿಶ್ಯೂ ಪೇಪರ್​ನಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿ ವಿಡಿಯೋ ಶೇರ್ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 1:08 pm, Fri, 24 March 23