AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೊ ವೈರಲ್

ಸ್ಮೃತಿ ಇರಾನಿ ಅವರು 25 ವರ್ಷಗಳ ಹಿಂದೆ 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು

ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೊ ವೈರಲ್
ಸ್ಮೃತಿ ಇರಾನಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Mar 24, 2023 | 1:59 PM

Share

ಮುಖ್ಯಾಂಶಗಳು

  • ಕ್ಯೂಂಕೀ ಸಾಸ್ ಭೀ ಕಭೀ ಬಹೂ ಥೀ ಎಂಬ ಧಾರಾವಾಹಿಯಲ್ಲಿ ಸ್ಮೃತಿ, ತುಳಸಿ ವಿರಾನಿ ಎಂಬ ಕಥಾಪಾತ್ರವನ್ನು ನಿರ್ವಹಿಸಿ ಜನಮನಸ್ಸು ಗೆದ್ದ ಸ್ಮೃತಿ
  • 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಮೃತಿ ಇರಾನಿ ಕಿತ್ತಳೆ ಬಣ್ಣದ ಸ್ಲೀವ್ ಲೆಸ್ ಟಾಪ್, ಮಿನಿಸ್ಕರ್ಟ್ ಧರಿಸಿದ್ದರು
  • 2003ರಲ್ಲಿ ಬಿಜೆಪಿ ಸೇರಿದ ಸ್ಮೃತಿ ಅಮೇಠಿ ಕ್ಷೇತ್ರದ ಸಂಸದೆ

ದೆಹಲಿ: ಮಾಡೆಲ್ (model) ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಸ್ಮೃತಿ ಇರಾನಿ (Smriti Irani)ರಾಜಕೀಯಕ್ಕೆ ಬರುವ ಮೊದಲು ಕಿರುತೆರೆ ನಟಿಯಾಗಿ ಜನಪ್ರಿಯರಾಗಿದ್ದರು. ಏಕ್ತಾ ಕಪೂರ್‌ ಅವರ ಬಾಲಾಜಿ ಟೆಲಿಫಿಲ್ಮ್ಸ್‌ ನಿರ್ಮಾಣದ ಕ್ಯೂಂಕೀ ಸಾಸ್ ಭೀ ಕಭೀ ಬಹೂ ಥೀ ಎಂಬ ಧಾರಾವಾಹಿಯಲ್ಲಿ ಸ್ಮೃತಿ, ತುಳಸಿ ವಿರಾನಿ ಎಂಬ ಕಥಾಪಾತ್ರವನ್ನು ನಿರ್ವಹಿಸಿ ಜನಮನಸ್ಸು ಗೆದ್ದಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇಂದ್ರ ಸಚಿವೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿದ್ದು ಆಗಾಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಿನ್ನೆ ಮಾರ್ಚ್ 23ರಂದು ಸ್ಮೃತಿ ಇರಾನಿಯ ಜನ್ಮದಿನವಾಗಿತ್ತು. ಈ ವೇಳೆ ಅವರ ಹಳೇ ವಿಡಿಯೊವೊಂದು ಮತ್ತೆ ವೈರಲ್ ಆಗಿದೆ.

ಸ್ಮೃತಿ ಇರಾನಿ ಅವರು 25 ವರ್ಷಗಳ ಹಿಂದೆ 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಟಿವಿ ನಟಿ ಗೌರಿ ಪ್ರಧಾನ್ ತೇಜ್ವಾನಿ ಅವರೊಂದಿಗೆ ಅಗ್ರ 9 ರೊಳಗೆ ತಲುಪಲು ಸಾಧ್ಯವಾಗದ ಸ್ಪರ್ಧಿಗಳಲ್ಲಿ ಸ್ಮೃತಿ ಕೂಡಾ ಒಬ್ಬರು. ಅದೇ ವರ್ಷ ಅವರು ಮಿಖಾ ಸಿಂಗ್ ಅವರೊಂದಿಗೆ ‘ಸಾವನ್ ಮೇ ಲಗ್ ಗಯಿ ಆಗ್’ ಆಲ್ಬಂನ ‘ಬೋಲಿಯಾ’ ಹಾಡಿನಲ್ಲಿ ಕಾಣಿಸಿಕೊಂಡರು.

ಸ್ಮೃತಿ ಇರಾನಿ 2003ರಲ್ಲಿ ಬಿಜೆಪಿ ಸೇರಿದರು. ಅವರು 2004 ರಲ್ಲಿ ಮಹಾರಾಷ್ಟ್ರ ಯುವ ಘಟಕದ ಉಪಾಧ್ಯಕ್ಷರಾದರು. ಸ್ಮೃತಿ ಅಮೇಠಿ ಕ್ಷೇತ್ರದಿಂದ ಸಂಸದರಾಗಿದ್ದಾರೆ. 2019 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸುವ ಮೂಲಕ ಅವರು ಲೋಕಸಭೆಗೆ ಪ್ರವೇಶಿಸಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ

2000 ರಲ್ಲಿ ಸ್ಮೃತಿ ಇರಾನಿ ಆತಿಶ್ ಮತ್ತು ಹಮ್ ಹೇ ಕಲ್ ಆಜ್ ಔರ್ ಕಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅವರು ಡಿಡಿ ಮೆಟ್ರೋದಲ್ಲಿ ಪ್ರಸಾರವಾಗುತ್ತಿದ್ದ ಕವಿತಾ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಆದರೆ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ನ ಕ್ಯೂಂಕೀ ಸಾಸ್ ಭೀ ಕಭೀ ಬಹೂ ಥೀ ಸೀರಿಯಲ್ ನಲ್ಲಿ ಅವರು ಮಿಂಚಿ ಜನಮನ್ನಣೆ ಪಡೆದರು. ಶ್ರೇಷ್ಠ ನಟಿಗಾಗಿ ಸತತ ಐದು ಬಾರಿ ಭಾರತೀಯ ದೂರದರ್ಶನ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಸ್ಮೃತಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ