ದೆಹಲಿ ಫೆಬ್ರುವರಿ 13: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ವಿರೋಧ ಪಕ್ಷದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತ್ರಿಪಡಿಸುವ ಕಾನೂನನ್ನು I.N.D.I.A ಬ್ಲಾಕ್ ತರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ದೇಶಾದ್ಯಂತ ರೈತರ ಬಹುಕಾಲದ ಬೇಡಿಕೆಯಾಗಿದೆ. ವಿವಿಧ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿಯನ್ನು ರಕ್ಷಿಸುವ ಕಾನೂನನ್ನು ಜಾರಿಗೊಳಿಸುವ ಭರವಸೆಯು ಕಾಂಗ್ರೆಸ್ ನಾಯಕತ್ವದಿಂದ ನಿರ್ಣಾಯಕ ಭರವಸೆಯಾಗಿದೆ. ದೇಶದ ಆರ್ಥಿಕತೆಯಲ್ಲಿ ಅವರು ವಹಿಸುವ ಮಹತ್ವದ ಪಾತ್ರವನ್ನು ಎತ್ತಿ ಹಿಡಿದ ಖರ್ಗೆ ಅವರು ರೈತರ ಕಾಳಜಿ ಮತ್ತು ಕಲ್ಯಾಣವನ್ನು ಪರಿಹರಿಸಲು ಪಕ್ಷದ ಬದ್ಧತೆಯನ್ನು ಒತ್ತಿ ಹೇಳಿದರು.
ಕಾಂಗ್ರೆಸ್ ಐತಿಹಾಸಿಕ ಪ್ರತಿಜ್ಞೆ ತೆಗೆದುಕೊಂಡಿದೆ. ಸ್ವಾಮಿನಾಥನ್ ಸಮಿತಿ ವರದಿ ಪ್ರಕಾರ ಎಂಎಸ್‌ಪಿ ಕಾನೂನು ರೂಪಿಸುವ ಮೂಲಕ ರೈತರಿಗೆ ನ್ಯಾಯಯುತ ಬೆಲೆಯನ್ನು ಖಾತರಿಪಡಿಸುತ್ತೇವೆ. ಇದರಿಂದ 15 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
कांग्रेस ने ऐतिहासिक प्रण लिया है —
हम स्वामीनाथन कमेटी की रिपोर्ट के मुताबिक़, किसानों को MSP क़ानून बनाकर उचित मूल्य की गारंटी देंगे।
इससे 15 करोड़ किसान परिवारों को फ़ायदा पहुँचेगा। #KisaanNYAYGuarantee
📍अंबिकापुर, छत्तीसगढ़ pic.twitter.com/weR0pNKkGK
— Mallikarjun Kharge (@kharge) February 13, 2024
ಇಂದು “ರೈತ ಸಹೋದರರಿಗೆ ಐತಿಹಾಸಿಕ ದಿನ” ಎಂದು ಹೇಳಿದರು. ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್‌ಪಿ ಕಾನೂನುಬದ್ಧ ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಖಾತ್ರಿಪಡಿಸುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತದೆ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನ್ಯಾಯ್ (ನ್ಯಾಯ) ಹಾದಿಯಲ್ಲಿ ಇದು ಕಾಂಗ್ರೆಸ್‌ನ ಮೊದಲ ಖಾತರಿಯಾಗಿದೆ ಎಂದಿದ್ದಾರೆ ರಾಹುಲ್.
कांग्रेस की गारंटी 📢
किसानों को स्वामीनाथन कमीशन के अनुसार MSP की गारंटी देंगे।
: @RahulGandhi जी
📍 छत्तीसगढ़ pic.twitter.com/6J9jImKSIi
— Congress (@INCIndia) February 13, 2024
ಇದೇ ದನಿಯನ್ನು ಪ್ರತಿಧ್ವನಿಸಿದ ಪಕ್ಷದ ಶಾಸಕ ರಣದೀಪ್ ಸಿಂಗ್ ಸುರ್ಜೆವಾಲಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷ ನ್ಯಾಯಕ್ಕಾಗಿ ರೈತರ ಬೇಡಿಕೆಯನ್ನು ಬೆಂಬಲಿಸುತ್ತದೆ. ರೈತರೊಂದಿಗೆ ಪ್ರಧಾನಿ ಅವರೇ ಮಾತನಾಡಿ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ರಾಹುಲ್ ಗಾಂಧಿ ಕೂಡ ರೈತರ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.
“ದೇಶದ ಆಹಾರ ಪೂರೈಕೆದಾರರು ನ್ಯಾಯಕ್ಕಾಗಿ ಬೇಡಿಕೆಯಿಡಲು ದೆಹಲಿಗೆ ಬರಲು ಸಾಧ್ಯವಿಲ್ಲವೇ? ಅವರು ಪ್ರಧಾನಿ ಮತ್ತು ಸರ್ಕಾರದಿಂದ ನ್ಯಾಯ ಕೇಳದಿದ್ದರೆ, ಅವರು ಎಲ್ಲಿಗೆ ಹೋಗಬೇಕು? ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳು ರೈತರ ಹಾದಿಯಲ್ಲಿ ಏಕೆ ಇವೆ?. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ, “ಮೋದಿ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯನ್ನು ರೈತರ ಮೇಲಿನ ಕ್ರೌರ್ಯದ ಅವಧಿ ಎಂದು ಕರೆಯಲಾಗುತ್ತದೆ. ರೈತರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ದೆಹಲಿಯನ್ನು ಕೋಟೆಯನ್ನಾಗಿ ಪರಿವರ್ತಿಸಿದೆ ಎಂದಿದ್ದಾರೆ.
ಇದನ್ನೂ ಓದಿ: 6 ತಿಂಗಳ ಪಡಿತರ, ಟ್ರಾಲಿಗಳಲ್ಲಿ ಡೀಸೆಲ್: ದೀರ್ಘಕಾಲದ ಆಂದೋಲನಕ್ಕೆ ಸಜ್ಜಾಗಿ ಬಂದ ಪಂಜಾಬ್ ರೈತರು
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಧ್ವನಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ರೈತರಿಗೆ ನೀಡಿದ್ದ ಭರವಸೆಗಳಿಂದ ಆಡಳಿತ ಮಂಡಳಿ ಹಿಂದೆ ಸರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ,
ಪ್ರತಿಭಟನೆ ಹತ್ತಿಕ್ಕಲು ಗಡಿಗಳಲ್ಲಿ ಮುಳ್ಳುತಂತಿಗಳು ಮತ್ತು ಕಬ್ಬಿಣದ ಮೊಳೆಗಳನ್ನು ಅಳವಡಿಸಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖ್ಯಸ್ಥರು ಸರ್ವಾಧಿಕಾರಿ ಮೋದಿ ಸರ್ಕಾರವು ರೈತರ ಧ್ವನಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.10 ವರ್ಷಗಳಲ್ಲಿ, ಮೋದಿ ಸರ್ಕಾರವು ದೇಶದ ಅನ್ನದಾತರಿಗೆ ನೀಡಿದ ಮೂರು ಭರವಸೆಗಳಿಂದ ಹಿಂದೆ ಸರಿದಿದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಈಗ ಹಿಂದೆ ಸರಿದಿದೆ. ಈಗ 62 ಕೋಟಿ ರೈತರ ಧ್ವನಿ ಎತ್ತುವ ಸಮಯ ಬಂದಿದೆ ಎಂದು ಖರ್ಗೆ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Tue, 13 February 24