ಶ್ರೀನಗರ: ಪ್ರಮುಖ ಕಾಶ್ಮೀರಿ ಪಂಡಿತ್ ಉದ್ಯಮಿ ಮಖನ್ ಲಾಲ್ ಬಿಂದ್ರೂ (Makhan Lal Bindroo) ಅವರನ್ನು ಶ್ರೀನಗರದಲ್ಲಿ ಶಂಕಿತ ಉಗ್ರರು ಗುಂಡಿಕ್ಕಿ ಹತ್ಯೆಗೈದ ಒಂದು ದಿನದ ನಂತರ, ಅವರ ಪುತ್ರಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು ಅಪರಾಧಿಗಳನ್ನು ಸಾರ್ವಜನಿಕವಾಗಿ ಹೊರಗೆ ಬಂದು ಆಕೆಯೊಂದಿಗೆ ಮುಖಾಮುಖಿ ಚರ್ಚೆ ನಡೆಸುವಂತೆ ಸವಾಲು ಹಾಕಿದ್ದಾರೆ. ನನ್ನ ಅಪ್ಪ ಕಾಶ್ಮೀರಿ ಪಂಡಿತ್ , ಕಾಶ್ಮೀರಿ ಪಂಡಿತ್ ಹಿಂದೂ ಮಗಳು ನಾನು ಎಂದು ಹೇಳಿದ ಡಾ ಸಮೃದ್ಧಿ ಬಿಂದ್ರೂ( Dr Samridhi bindroo) ಅಲಿಯಾಸ್ ಶ್ರದ್ಧಾ ಬಿಂದ್ರೂ(Shraddha Bindroo) ತನ್ನ ತಂದೆ ಈ ಉತ್ಸಾಹದಿಂದ ಜೀವಂತವಾಗಿರುತ್ತಾನೆ. ಅವರು ಕೇವಲ ದೇಹವನ್ನು ಕೊಂದಿದ್ದಾರೆ ಎಂದು ಹೇಳಿದರು. “ಹೊರಗೆ ಬಂದು ಮುಖಾಮುಖಿಯಾಗಿ ಎಂದು ಉಗ್ರರಿಗೆ ಸವಾಲೆಸೆದ ಬಿಂದ್ರೂ , ಅಂತಹ ಜನರಿಗೆ “ಕಲ್ಲು ತೂರಾಟ ಮತ್ತು ಹಿಂದಿನಿಂದ ದಾಳಿ ಮಾಡುವ ಸಾಮರ್ಥ್ಯ ಮಾತ್ರ ಇರುವುದು ಎಂದಿದ್ದಾರೆ.
1947 ಆರಂಭಿಸಿದ ಒಂದು ಮೆಡಿಕಲ್ ಸ್ಟೋರ್ಸ್ ಸೇರಿದಂತೆ ಶ್ರೀನಗರದಲ್ಲಿ ಎರಡು ಮೆಡಿಕಲ್ ಸ್ಟೋರ್ಸ್ ನಡೆಸುತ್ತಿದ್ದ ಮಖನ್ ಲಾಲ್ ಬಿಂದ್ರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶಂಕಿತ ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಬಿಂದ್ರೂ ಸೇರಿದಂತೆ ಮೂವರು ಬಲಿಯಾಗಿದ್ದರು. ಏತನ್ಮಧ್ಯೆ, ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಮತ್ತು ಹಲವಾರು ನೆಟಿಜನ್‌ಗಳು ಶ್ರದ್ಧಾ ಬಿಂದ್ರೂ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀನಗರದ ಇಕ್ಬಾಲ್ ಪಾರ್ಕ್ ಬಳಿ ತಮ್ಮದೇ ಅಂಗಡಿ ಬಿಂದ್ರೂ ಹೆಲ್ತ್ ಜೋನ್ ಹೊರಗೆ ಬಿಂದ್ರೂ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಿಂದ್ರೂ ಅವರ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ, ಉಗ್ರರು ರಸ್ತೆಬದಿಯಲ್ಲಿ ಮಾರಾಟಮಾಡುತ್ತಿದ್ದ ಬಿಹಾರದ ಭಾಗಲ್ಪುರದ ನಿವಾಸಿ ವೀರೇಂದ್ರ ಪಾಸ್ವಾನ್ ಎಂಬವರ ಮೇಲೆ ಗುಂಡು ಹಾರಿಸಿದರು.ಆನಂತರ ಕೆಲವೇ ಕ್ಷಣಲ್ಲಿ ಮೊಹಮ್ಮದ್ ಶಾಫಿ ಲೋನ್ ನನ್ನು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ನೈದ್ಖೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದರು.
The spirit … ? pic.twitter.com/TXIzvAayfG
— Ram Madhav (@rammadhav_rss) October 6, 2021
ಶಂಕಿತ ಉಗ್ರರಿಂದ ಹತ್ಯೆಯಾಗುವ ಪ್ರಕರಣಗಳ ಜಾಸ್ತಿಯಾಗುತ್ತಿದ್ದು ಕಳೆದ ಶನಿವಾರ ಶ್ರೀನಗರದಲ್ಲಿ ಇಬ್ಬರು ನಾಗರಿಕರ ಹತ್ಯೆ ನಂತರ ಹೆಚ್ಚಿನ ಭದ್ರತೆ ವಹಿಸಲಾಗಿದೆ .
ಅಧಿಕಾರಿಗಳ ಪ್ರಕಾರ 1990 ರ ದಶಕದಲ್ಲಿ ಉಗ್ರರ ಅಟ್ಟಹಾಸ ಉತ್ತುಂಗಕ್ಕೇರಿದಾಗಲೂ ಮತ್ತು ಕಾಶ್ಮೀರಿ ಪಂಡಿತ್ ಸಮುದಾಯದ ಹೆಚ್ಚಿನ ಸದಸ್ಯರು ಕಣಿವೆಯನ್ನು ತೊರೆದಾಗಲೂ ಬಿಂದ್ರೂ ಕುಟುಂಬವು ಶ್ರೀನಗರದಲ್ಲೇ ಉಳಿಯಿತು. ಕೆಲವು ವರ್ಷಗಳ ಹಿಂದೆಯಷ್ಟೇ ಬಿಂದ್ರೂ ಹೆಲ್ತ್ ಜೋನ್ ಆರಂಭವಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ದಾಳಿಯನ್ನು ಖಂಡಿಸಿದರು ಮತ್ತು ಬಿಂದ್ರೂ ಅವರ ಹತ್ಯೆಯಿಂದ “ತೀವ್ರವಾಗಿ ನೊಂದಿದ್ದೇನೆ” ಎಂದು ಹೇಳಿದರು. “ಈ ಹೇಡಿತನದ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಘೋರ ಕೃತ್ಯದ ಅಪರಾಧಿಗಳನ್ನು ಶೀಘ್ರದಲ್ಲಿಯೇ ಕಾನೂನಿನ ಮುಂದೆ ತರಲಾಗುವುದು ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಿರ್ವಾಯ್ಜ್ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್, ಕಾಶ್ಮೀರಿ ಪಂಡಿತ್ ಉದ್ಯಮಿ ಮತ್ತು ಇನ್ನಿಬ್ಬರ ಹತ್ಯೆಗೆ ದುಃಖ ವ್ಯಕ್ತಪಡಿಸಿತು. ಪ್ರತ್ಯೇಕತಾವಾದಿ ಒಕ್ಕೂಟವು ಅಂತರರಾಷ್ಟ್ರೀಯ ಸಮುದಾಯವನ್ನು ಕಾಶ್ಮೀರದಲ್ಲಿ ದಿನನಿತ್ಯದ ಹಿಂಸಾಚಾರ ಮತ್ತು ದುರಂತದ ಜೀವಹಾನಿಯನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ಇದನ್ನೂ ಓದಿ: ಬಿಜೆಪಿಯ ಹೊಸ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ: ವರುಣ್ ಗಾಂಧಿ ಕೈಬಿಟ್ಟ ಪಕ್ಷ
ಇದನ್ನೂ ಓದಿ: Pandora Papers ಪಂಡೋರಾ ಪೇಪರ್ಸ್: ಬಿವಿಐ ಸಂಸ್ಥೆಗಳ ಜಾಲದೊಂದಿಗೆ ದಿವಾಳಿಯಾದ ಕೋಟ್ಯಾಧಿಪತಿ ಬಿಆರ್ ಶೆಟ್ಟಿ
Published On - 4:10 pm, Thu, 7 October 21