Covid Vaccine: ಸದ್ಯದಲ್ಲೇ ಭಾರತದಲ್ಲಿ 100 ಕೋಟಿ ಕೊವಿಡ್ ಲಸಿಕೆ ಗುರಿ ಪೂರ್ತಿಯಾಗಲಿದೆ; ಪ್ರಧಾನಿ ಮೋದಿ ವಿಶ್ವಾಸ
CoWIN App: ಭಾರತದಲ್ಲಿ ಈಗಾಗಲೇ 93 ಕೋಟಿ ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಸದ್ಯದಲ್ಲೇ ನಾವು 100 ಕೋಟಿ ಲಸಿಕೆಯ ಗುರಿಯನ್ನು ಮುಟ್ಟಲಿದ್ದೇವೆ ಎಂದು ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 35 ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಉದ್ಘಾಟಿಸಿದ್ದಾರೆ. ಉತ್ತರಾಖಂಡದ ಹೃಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಭಾರತದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ ಆಮ್ಲಜನಕದ ಘಟಕ ಸ್ಥಾಪನೆಯಾಗಿದೆ ಎಂದು ಹೇಳಿದ್ದಾರೆ.
ಇದುವರೆಗೂ ಪಿಎಂ ಕೇರ್ ಅನುದಾನದಡಿ ಒಟ್ಟಾರೆ 1,224 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನವೂ ಯಶಸ್ವಿಯಾಗುತ್ತಿದ್ದು, ಇದು ಜಗತ್ತಿನ ಅತ್ಯಂತ ದೊಡ್ಡ ಮತ್ತು ವೇಗವಾದ ಅಭಿಯಾನವಾಗಿದೆ. ಭಾರತದಲ್ಲಿ ಈಗಾಗಲೇ 93 ಕೋಟಿ ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಸದ್ಯದಲ್ಲೇ ನಾವು 100 ಕೋಟಿ ಲಸಿಕೆಯ ಗುರಿಯನ್ನು ಮುಟ್ಟಲಿದ್ದೇವೆ. ಕೋವಿನ್ ಆ್ಯಪ್ ಇಡೀ ಜಾಗತಿಕ ಮಟ್ಟದಲ್ಲೇ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Addressing a programme in Rishikesh. https://t.co/5YtlxMLaI9
— Narendra Modi (@narendramodi) October 7, 2021
ಇನ್ನು, ಭಾರತದ ಕೊವಿಡ್ ಲಸಿಕೆಯಾದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಿದೆ. ಈ ವೇಳೆ ಕೋವ್ಯಾಕ್ಸಿನ್ ಲಸಿಕೆಯ ಬಳಕೆಗೆ ತುರ್ತು ಅನುಮತಿ ನೀಡುವ ಬಗ್ಗೆ ಮುಂದಿನ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಡಬ್ಲುಎಚ್ಒ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸಭೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿರುವ ಭಾರತ್ ಬಯೋಟೆಕ್ ಕಂಪನಿಯ ಪ್ರತಿನಿಧಿಗಳು ಲಸಿಕೆಯ ಬಗ್ಗೆ ದಾಖಲೆ ಹಾಗೂ ದತ್ತಾಂಶಗಳನ್ನು ನೀಡಿದ್ದಾರೆ. ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಕೊರೊನಾ ವೈರಸ್ ವಿರುದ್ದ ಪರಿಣಾಮಕಾರಿತನ ಹಾಗೂ 1ರಿಂದ 3ನೇ ಹಂತದ ಪ್ರಯೋಗದವರೆಗಿನ ಫಲಿತಾಂಶದ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Covid Vaccine: ಕೊರೊನಾ ಲಸಿಕೆ ಬಳಿಕವೂ ಭಾರತದಲ್ಲಿ ಬೂಸ್ಟರ್ ಶಾಟ್ಸ್ ಅಗತ್ಯವಿದೆ; ಹಿರಿಯ ವಿಜ್ಞಾನಿ
Published On - 4:09 pm, Thu, 7 October 21