IIT ಮದ್ರಾಸ್ ಸೀಲ್ಡೌನ್! 66 ವಿದ್ಯಾರ್ಥಿ, 5 ಸಿಬ್ಬಂದಿಗೆ ಕೊರೊನಾ..
IIT ಮದ್ರಾಸ್ ಕಾಲೇಜಿನಲ್ಲಿ ಸುಮಾರು 66 ವಿದ್ಯಾರ್ಥಿ ಹಾಗೂ 5 ಶಿಕ್ಷಣ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ, ಕೊರೊನಾ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ IIT ಮದ್ರಾಸ್ನಲ್ಲಿ ರಜೆ ಘೋಷಣೆಯಾಗಿದೆ.
ಚೆನ್ನೈ: IIT ಮದ್ರಾಸ್ ಕಾಲೇಜಿನಲ್ಲಿ ಸುಮಾರು 66 ವಿದ್ಯಾರ್ಥಿ ಹಾಗೂ 5 ಶಿಕ್ಷಣ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ, ಕೊರೊನಾ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ IIT ಮದ್ರಾಸ್ನಲ್ಲಿ ರಜೆ ಘೋಷಣೆಯಾಗಿದೆ.
ಅಂದ ಹಾಗೆ, ಶಿಕ್ಷಣ ಸಂಸ್ಥೆಯಲ್ಲಿ ಮೊದಲನೇ ಕೇಸ್ ಡಿಸೆಂಬರ್ 1ರಂದು ಪತ್ತೆಯಾಗಿತ್ತು. ಇದೀಗ, ಕಳೆದ ಮೂರು ದಿನದಲ್ಲಿ ಸುಮಾರು 55 ಜನರಿಗೆ ಸೋಂಕು ದೃಢಪಟ್ಟಿದೆ.
ಸದ್ಯ, ಸೋಂಕಿನ ಲಕ್ಷಣವಿದ್ದರೆ ತಕ್ಷಣ ಪರೀಕ್ಷೆ ಮಾಡಿಸುವಂತೆ ಎಲ್ಲರಿಗೂ ಸೂಚನೆ ಸಹ ನೀಡಲಾಗಿದೆ. ಜೊತೆಗೆ, ಶಿಕ್ಷಣ ಸಂಸ್ಥೆಯ ಲ್ಯಾಬ್, ಗ್ರಂಥಾಲಯ ಹಾಗೂ ಎಲ್ಲಾ ವಿಭಾಗಗಳನ್ನು ಮುಚ್ಚಲಾಗಿದೆ. IIT ಮದ್ರಾಸ್ನ ಕ್ಯಾಂಪಸ್ನಲ್ಲಿ ಒಟ್ಟು 774 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿದುಬಂದಿದೆ. ಇದೀಗ, ಎಲ್ಲರಿಗೂ ತಮ್ಮ ಹಾಸ್ಟೆಲ್ಗಳಲ್ಲೇ ಕ್ವಾರಂಟೈನ್ ಆಗಲು ಸೂಚಿಸಲಾಗಿದ್ದು ಜೊತೆಗೆ ನಗರದಿಂದ ಬರುತ್ತಿದ್ದ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ನೀಡಲಾಗಿದೆ.
ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶದ ಮೇರೆಗೆ ಡಿಸೆಂಬರ್ 7ರಂದು IIT ಮದ್ರಾಸ್ನಲ್ಲಿ ಫೈನಲ್ ಇಯರ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ, ಕಾಲೇಜಿನಲ್ಲಿ ಸೋಂಕು ಹೇಗೆ ಹಬ್ಬಿತು ಎಂದು ತಿಳಿದುಬಂದಿಲ್ಲ. ಬಟ್, ಎಲ್ಲಾ ವಿದ್ಯಾರ್ಥಿಗಳು ಕಾಲೀಜಿನ ಕ್ಯಾಂಟೀನ್ಗೆ ಭೇಟಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಕೊರೊನಾ ಅಲ್ಲಿಂದ ಹರಡಿರುವ ಗುಮಾನಿ ವ್ಯಕ್ತವಾಗಿದೆ.
ಚಿರತೆಗೂ ಕೋವಿಡ್: ಹಿಮಚಿರತೆಗೆ ಕೊರೊನಾ ಸೋಂಕು, ಎರಡು ಚಿರತೆಗಳಲ್ಲಿ ರೋಗ ಲಕ್ಷಣ
Published On - 10:35 am, Mon, 14 December 20