ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ, ವಾಯುವ್ಯ ಭಾರತದಲ್ಲಿ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ

|

Updated on: May 01, 2023 | 7:00 PM

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟದ ಪ್ರಕ್ಷುಬ್ಧತೆಗಳಿಂದ ಬರುವ ಗಾಳಿಯ ಸಂಗಮದಿಂದಾಗಿ ಕೆಲವೆಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಕುಮಾರ್  ಹೇಳಿದ್ದಾರೆ. ಆದ್ದರಿಂದ ಐಎಂಡಿ ವಾಯುವ್ಯ ಭಾರತಕ್ಕೆ ಯೆಲ್ಲೋ ಮತ್ತು ಆರಂಜ್ ಎಚ್ಚರಿಕೆಗಳನ್ನು ನೀಡಿದೆ.

ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆ, ವಾಯುವ್ಯ ಭಾರತದಲ್ಲಿ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ
ಮಳೆ
Follow us on

ವಾಯುವ್ಯ ಭಾರತದ (Northwest India) ಬಹುತೇಕ ಭಾಗದಲ್ಲಿ ಮಳೆಯಾಗಲಿದ್ದು, ಭಾರತದ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ನೀಡಿದೆ. ಅದೇ ರೀತಿ ಮುಂದಿನ ಮೂರು ದಿನಗಳ ಕಾಲ ದೆಹಲಿಯಲ್ಲಿಯೂ (Delhi Rain) ಮಳೆಯಾಗಲಿದೆ. ಐಎಂಡಿ ಹಿರಿಯ ವಿಜ್ಞಾನಿ ನರೇಶ್ ಕುಮಾರ್ ಅವರ ಪ್ರಕಾರ, ಪಶ್ಚಿಮ ದಿಕ್ಕಿನಲ್ಲಿ ಹವಾಮಾನ ವ್ಯತ್ಯಾಸದಿಂದಾಗಿ ಪಾಕಿಸ್ತಾನ ಮತ್ತು ಪಕ್ಕದ ಪ್ರದೇಶಗಳ ಜೊತೆಗೆ ಹರ್ಯಾಣದಲ್ಲಿ ಮಳೆಯಾಗಲಿದೆ. ಅದೇ ವೇಳೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪಂಜಾಬ್ ಮತ್ತು ಹರ್ಯಾಣಕ್ಕೂ ಎಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟದ ಪ್ರಕ್ಷುಬ್ಧತೆಗಳಿಂದ ಬರುವ ಗಾಳಿಯ ಸಂಗಮದಿಂದಾಗಿ ಕೆಲವೆಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಕುಮಾರ್  ಹೇಳಿದ್ದಾರೆ. ಆದ್ದರಿಂದ ಐಎಂಡಿ ವಾಯುವ್ಯ ಭಾರತಕ್ಕೆ ಯೆಲ್ಲೋ ಮತ್ತು ಆರಂಜ್ ಎಚ್ಚರಿಕೆಗಳನ್ನು ನೀಡಿದೆ.

ಬಿಹಾರ, ಜಾರ್ಖಂಡ್ ಒಡಿಶಾ ಮತ್ತು ಗಂಗಾ ಪಶ್ಚಿಮ ಬಂಗಾಳ (GWB) ಸೇರಿದಂತೆ ಭಾರತದ ಪೂರ್ವ ಭಾಗಗಳಲ್ಲಿ ಮಳೆಯಾಗುತ್ತದೆ. ಈಶಾನ್ಯ ಭಾರತದಲ್ಲಿ ಶೇ 75% ಕ್ಕಿಂತ ಹೆಚ್ಚು ಮಳೆ ಮತ್ತು 6.5 ಸೆಂ.ಮೀ ಗಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ. ಇದನ್ನು ಭಾರೀ ಮಳೆ ಎಂದೂ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.


ಚಂಡಮಾರುತದ ಚಟುವಟಿಕೆಗಳಿಂದಾಗಿ ದೆಹಲಿ ಎನ್‌ಸಿಆರ್, ಪಂಜಾಬ್ ಮತ್ತು ಹರ್ಯಾಣ ಸೇರಿದಂತೆ ದೇಶದಾದ್ಯಂತ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ, ಅಲ್ಲಿ ತಾಪಮಾನದಲ್ಲಿ 9-10 ಡಿಗ್ರಿ ಕುಸಿತ ದಾಖಲಾಗಿದೆ ಎಂದು ಕುಮಾರ್ ಹೇಳಿದ್ದಾರೆ. ಎರಡು ದಿನಗಳ ನಂತರ ಮೋಡಗಳು ತೆರವುಗೊಳ್ಳಲು ಪ್ರಾರಂಭವಾಗುವ ಈ ಪ್ರದೇಶಗಳಲ್ಲಿ ತಾಪಮಾನದಲ್ಲಿ ಎರಡು-ಮೂರು ಡಿಗ್ರಿ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಕೆರೆಯಂತಾದ ರಸ್ತೆಗಳು

ದೆಹಲಿ-ಎನ್‌ಸಿಆರ್‌ನಾದ್ಯಂತ ಭಾರೀ ಮಳೆ, ರಸ್ತೆಗಳು ಜಲಾವೃತ

ಸೋಮವಾರ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿವೆ. ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದಂತೆ ತಮ್ಮ ನಿಯಂತ್ರಣ ಕೊಠಡಿಗೆ 31 ಕರೆಗಳು ಬಂದಿವೆ, ಜೊತೆಗೆ ಜಲಾವೃತಕ್ಕೆ ಸಂಬಂಧಿಸಿದ ಮೂರು ಕರೆಗಳು ಬಂದಿವೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಝಂಡೆವಾಲನ್ ಮಂದಿರ, ಪಶ್ಚಿಮ ವಿಹಾರ್, ರೋಹಿಣಿ ಮತ್ತು ದಕ್ಷಿಣ ದೆಹಲಿ ಸೇರಿದಂತೆ ಪ್ರದೇಶಗಳಲ್ಲಿ ಪ್ರಯಾಣಿಕರು ಟ್ರಾಫಿಕ್ ದಟ್ಟಣೆಯನ್ನು ಅನುಭವಿಸಿದರು ಎಂದು ಅವರು ಹೇಳಿದರು.


ಐಐಟಿಯಿಂದ ಅಧ್ಚಿನಿ ಕಡೆಗೆ ಹೋಗುವ ಗಾಡಿಯಲ್ಲಿ ಅರಬಿಂದೋ ಮಾರ್ಗದಲ್ಲಿ ಅಧ್ಚಿನಿ ಬಳಿ ಜಲಾವೃತವಾಗಿರುವ ಕಾರಣ ಸಂಚಾರ ದಟ್ಟಣೆ ಹೆಚ್ಚಿದೆ ಎಂದು ದೆಹಲಿ ಸಂಚಾರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ