‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ₹ 830 ಕೋಟಿ ಖರ್ಚು ಮಾಡಲಾಗಿದೆ ಎಂದ ಆಪ್ ನಾಯಕನ ವಿರುದ್ದ ಪೊಲೀಸ್ ಕೇಸು
ಈ ಟ್ವೀಟ್‌ನ್ನು ಗಮನಿಸಿದ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಪ್ರಿಲ್ 29 ರಂದು ಗಾಧ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಸೈಬರ್ ಕ್ರೈಂ, ಸಹಾಯಕ ಪೊಲೀಸ್ ಆಯುಕ್ತ ಜೆಎಂ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಮನ್ ಕಿ ಬಾತ್’ (Mann Ki Baat)ರೇಡಿಯೊದ 100 ಸಂಚಿಕೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ₹ 830 ಕೋಟಿ ತೆರಿಗೆದಾರರ ಹಣವನ್ನು ಖರ್ಚು ಮಾಡಿದೆ ಎಂದು ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ ಗುಜರಾತ್ ಅಧ್ಯಕ್ಷ ಇಸುದನ್ ಗಾಧ್ವಿ (Isudan Gadhvi) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಧ್ವಿ ಯಾವುದೇ ಸಂಬಂಧಿತ ಮಾಹಿತಿಯಿಲ್ಲದೆ ಈ ರೀತಿ ಆರೋಪ ಮಾಡಿದ ನಂತರ ಶನಿವಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಈ ಟ್ವೀಟ್ ಅನ್ನು ಗಾಧ್ವಿ ಅವರು ಅಳಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಇಂತಹ ಸುಳ್ಳು ಎಫ್‌ಐಆರ್‌ಗಳ ಮೂಲಕ ತನ್ನ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಆರೋಪಿಸಿದೆ.
ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಭಾಷಣದ 100 ನೇ ಸಂಚಿಕೆ ಭಾನುವಾರ ಪ್ರಸಾರವಾಯಿತು. ಏಪ್ರಿಲ್ 28 ರಂದು ಟ್ವೀಟ್ ಮಾಡಿದ್ದ ಗಾಧ್ವಿ, ಮನ್ ಕಿ ಬಾತ್‌ನ ಒಂದು ಸಂಚಿಕೆಗೆ ₹ 8.3 ಕೋಟಿ ವೆಚ್ಚವಾಗಿದೆ. ಅಂದರೆ ಕೇಂದ್ರವು ಇದುವರೆಗೆ 100 ಸಂಚಿಕೆಗಳಿಗೆ ₹ 830 ಕೋಟಿ ಖರ್ಚು ಮಾಡಿದೆ. ಇದು ತುಂಬಾ ಹೆಚ್ಚು. ಬಿಜೆಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆ ದಾಖಲಿಸಬೇಕು.ಏಕೆಂದರೆ ಅವರು ಹೆಚ್ಚಾಗಿ ಈ ಕಾರ್ಯಕ್ರಮವನ್ನು ಕೇಳುತ್ತಾರೆ ಎಂದಿದ್ದರು.
ಈ ಟ್ವೀಟ್‌ನ್ನು ಗಮನಿಸಿದ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಪ್ರಿಲ್ 29 ರಂದು ಗಾಧ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಸೈಬರ್ ಕ್ರೈಂ, ಸಹಾಯಕ ಪೊಲೀಸ್ ಆಯುಕ್ತ ಜೆಎಂ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಾಧ್ವಿಯ ವಿರುದ್ಧ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 500 (ಮಾನನಷ್ಟ), 505(1)(ಬಿ)ಮತ್ತು(ಸಿ) (ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ ವದಂತಿ ಅಥವಾ ವರದಿಯನ್ನು ಪ್ರಕಟಿಸುವುದು ಅಥವಾ ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಜನರನ್ನು ಪ್ರಚೋದಿಸುವುದು) ಮತ್ತು 505(2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದುಶ್ಚಟಗಳನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣದ ದಾಖಲಿಸಲಾಗಿದೆ.
ಪೊಲೀಸರು ಸರ್ಕಾರದ ಪರವಾಗಿ ದೂರುದಾರರಾಗಿದ್ದಾರೆ. ಗಾಧ್ವಿ ಯಾವುದೇ ವಿಶ್ವಾಸಾರ್ಹ ಮಾಹಿತಿಯಿಲ್ಲದೆ ‘ಮನ್ ಕಿ ಬಾತ್’ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ಕಂಡುಬಂದ ನಂತರ ಸೈಬರ್ ಕ್ರೈಂ ಬ್ರಾಂಚ್ ನಲ್ಲಿ ಏಪ್ರಿಲ್ 29 ರಂದು ಎಫ್ಐಆರ್ ದಾಖಲಿಸಲಾಗಿದೆ. ನಾವು ಸಾಕ್ಷ್ಯವನ್ನು ಸಂಗ್ರಹಿಸುತ್ತೇವೆ. ಮತ್ತು ನಂತರ ಮುಂದುವರಿಯುತ್ತೇವೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಯಾದವ್ ಹೇಳಿದರು.
ಭಾನುವಾರ ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ಗಾಧ್ವಿ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಟ್ಯಾಗ್ ಮಾಡಿ ‘ಮನ್ ಕಿ ಬಾತ್’ ಗೆ ₹ 830 ಕೋಟಿ ಖರ್ಚು ಮಾಡಲಾಗಿದೆ ಎಂಬ ಎಎಪಿ ನಾಯಕರ ಹೇಳಿಕೆಯು ತಪ್ಪು ಎಂದಿದೆ.
ಇದನ್ನೂ ಓದಿ: Fact Check: ಪ್ರಧಾನಿ ಮೋದಿಯವರ ಮನ್ ಕಿ ಬಾತ್ ನ ಪ್ರತಿ ಸಂಚಿಕೆಗೆ ₹8.3 ಕೋಟಿ ವೆಚ್ಚ? ವೈರಲ್ ಸಂದೇಶದ ಸತ್ಯಾಸತ್ಯತೆ ಇಲ್ಲಿದೆ
ಗಾಧ್ವಿಯ ವಿರುದ್ಧ ಸುಳ್ಳು ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಎಪಿಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮತ್ತು ಗುಜರಾತ್ ಪಕ್ಷದ ಮಾಜಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಹೇಳಿದ್ದಾರೆ.
ಗಾಧ್ವಿ ಟ್ವೀಟ್ ವಿರುದ್ಧ ಕೇಸು ದಾಖಲಾಗಿದೆ,. ಬಿಜೆಪಿಯು ಎಎಪಿಗೆ ಹೇಗೆ ಹೆದರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಬಿಜೆಪಿ ಮತ್ತು ಅದರ ಸರ್ಕಾರವು ನಮ್ಮನ್ನು ತಡೆಯಲು ಮತ್ತು ಒಡೆಯಲು ಪದೇ ಪದೇ ನಮ್ಮ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಆದರೆ, ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಇಟಾಲಿಯಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ