ನಾನು ಬದುಕಿದ್ದೇನೆ: ವ್ಯಕ್ತಿ ಸತ್ತಿದ್ದಾರೆ ಅಂದುಕೊಂಡ 6 ತಿಂಗಳ ಬಳಿಕ ಪೊಲೀಸ್ ಠಾಣೆಗೆ ಬಂತೊಂದು ಪತ್ರ
ನಾನು ಬದುಕಿದ್ದೇನೆ ಸರ್ ಸತ್ತಿಲ್ಲ, ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ 6 ತಿಂಗಳ ಬಳಿಕ ಪೊಲೀಸ್ ಠಾಣೆಗೆ ಒಂದು ಪತ್ರ ಬಂದಿತ್ತು.
ನಾನು ಬದುಕಿದ್ದೇನೆ ಸರ್ ಸತ್ತಿಲ್ಲ, ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ 6 ತಿಂಗಳ ಬಳಿಕ ಪೊಲೀಸ್ ಠಾಣೆಗೆ ಒಂದು ಪತ್ರ ಬಂದಿತ್ತು. ಆರು ತಿಂಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾದ ಬಿಹಾರದ ವ್ಯಕ್ತಿ ಗಾಜಿಯಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಸೋನು ಕುಮಾರ್ ಶ್ರೀವಾಸ್ತವ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಜಿಪಿ, ಗೋಪಾಲ್ಗಂಜ್ ಹಾಗೂ ಎಸ್ಎಚ್ಒ ಡಿಯೋರಿಯಾ ಪೊಲೀಸ್ ಠಾಣೆಗೆ ಪತ್ರ ಬಂದಿತ್ತು. ನಾನು ಜೀವಂತವಾಗಿದ್ದೇನೆ ಮತ್ತು ಗಾಜಿಯಾಬಾದ್ನಲ್ಲಿ ಪತ್ನಿಯೊಂದಿಗೆ ವಾಸವಿದ್ದೇನೆ ಎಂದು ಬರೆದಿದ್ದಾರೆ, ಫೋಟೊವನ್ನು ಕೂಡ ಕಳುಹಿಸಿದ್ದಾರೆ.
ಪಕ್ಕದ ಹಳ್ಳಿಯ ನೀಲಂ ಕುಮಾರಿ ಎಂಬಾಕೆ ಜತೆಗೆ ಓಡಿ ಹೋಗಿ ಗಾಜಿಯಾಬಾದ್ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಹಾಗೂ ಕೊಲೆ ಪ್ರಕರಣ ಸುಳ್ಳು ಎಂದು ಹೇಳಿದ್ದಾರೆ. 5 ತಿಂಗಳ ಹಿಂದೆ ಸೋನು ನಾಪತ್ತೆಯಾಗಿದ್ದರು, ಕೆಲವು ವಸ್ತುಗಳನ್ನು ಖರೀದಿಸಲು ಪಾಟ್ನಾಗೆ ಹೋಗಿದ್ದರು, ಆದರೆ ಮನೆಗೆ ಹಿಂದಿರುಗಿರಲಿಲ್ಲ, ಎರಡು ದಿನಗಳ ನಂತರ ಡಿಯೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹವೊಂದು ಕತ್ತು ಸೀಳಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮತ್ತಷ್ಟು ಓದಿ: Bihar: 3 ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ
ಆತನ ತಂದೆ ಹಾಗೂ ಕುಟುಂಬ ಸದಸ್ಯರು ಶವವನ್ನು ಗುರುತಿಸಿ ಅಪಹರಣ ಹಾಗೂ ಕೊಲೆಯ ಎಫ್ಐಆರ್ ದಾಖಲಿಸಿದ್ದರು. ಸೋನು ಅವರು ಪೊಲೀಸರಿಗೆ ಬರೆದ ಪತ್ರದ ಪ್ರಕಾರ, ಪಾಟ್ನಾದಿಂದ ಕೆಲವು ಸರಕುಗಳನ್ನು ಖರೀದಿಸಲು 50 ಸಾವಿರ ರೂ, ತೆಗೆದುಕೊಂಡು ಬಸ್ ಹತ್ತಿದ್ದರು, ಡಿಯೋರಿಯಾ ಚೌಕ್ ತಲುಪಿದಾಗ ಯಾರೋ ಕರೆ ಮಾಡಿದ್ದಕ್ಕೆ ಅವರು ಬಸ್ ಇಂದ ಇಳಿದಿದ್ದರು.
ಕೆಲ ಮೀಟರ್ಗಳಷ್ಟು ನಡೆದ ನಂತರ ಕಣ್ಮರೆಯಾದರು, ಕೊನೆಯ ಮೊಬೈಲ್ ಕರೆ ಲೊಕೇಷನ್ ಆಧಾರದ ಮೇಲೆ ಶೋಧ ನಡೆಸಲಾಯಿತು, ಮೃತ ದೇಹವನ್ನು ಶ್ರೀವಾಸ್ತವ್ದು ಎಂದು ಪೋಷಕರು ಹೇಳಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈಗ ಅವರ ಸಂದೇಶವನ್ನು ಕುಟುಂಬಕ್ಕೆ ರವಾನಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:19 am, Tue, 2 May 23