AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ವ್ಯಕ್ತಿಯನ್ನು 3 ಕಿ.ಮೀ ಬಾನೆಟ್​ ಮೇಲೆ ಎಳೆದೊಯ್ದ ಸಂಸದರ ಕಾರು

ಸಂಸದರೊಬ್ಬರ ಕಾರು(Car) ವ್ಯಕ್ತಿಯನ್ನು 3 ಕಿ.ಮೀ ದೂರ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಬಾನೆಟ್​ ಮೇಲೆ ವ್ಯಕ್ತಿ ಇರುವುದು ತಿಳಿದೂ ಕೂಡ ಚಾಲಕ ಕಾರು ಓಡಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ದೆಹಲಿ: ವ್ಯಕ್ತಿಯನ್ನು 3 ಕಿ.ಮೀ ಬಾನೆಟ್​ ಮೇಲೆ ಎಳೆದೊಯ್ದ ಸಂಸದರ ಕಾರು
ಕಾರು
ನಯನಾ ರಾಜೀವ್
|

Updated on: May 01, 2023 | 11:08 AM

Share

ಸಂಸದರೊಬ್ಬರ ಕಾರು(Car) ವ್ಯಕ್ತಿಯನ್ನು 3 ಕಿ.ಮೀ ದೂರ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಬಾನೆಟ್​ ಮೇಲೆ ವ್ಯಕ್ತಿ ಇರುವುದು ತಿಳಿದೂ ಕೂಡ ಚಾಲಕ ಕಾರು ಓಡಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸ್​ ವಾಹನವು ಅವರನ್ನು ಹಿಂದಿಕ್ಕಿ, ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಬಳಿಕವಷ್ಟೇ ಆರೋಪಿ ಕಾರನ್ನು ನಿಲ್ಲಿಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆ ವೇಳೆಗೆ ಘಟನೆ ನಡೆದಿದೆ. ಕಾರು ಆಶ್ರಮ ಚೌಕದಿಂದ ನಿಜಾಮುದ್ದೀನ್ ದರ್ಗಾ ಕಡೆಗೆ ಹೋಗುತ್ತಿರುವಾಗ ಘಟನೆ ನಡೆದಿದೆ. ಆದರೆ ಘಟನೆ ವೇಳೆ ಸಂಸದರು ಕಾರಿನಲ್ಲಿ ಇರಲಿಲ್ಲ.

ಕಾರು ಚಾಲಕನನ್ನು ರಾಮಚಂದ್ರ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾದವರನ್ನು ಕ್ಯಾಬ್ ಚಾಲಕ ಚೇತನ್ ಎಂದು ಗುರುತಿಸಲಾಗಿದೆ. ಚೇತನ್ ಪ್ರಕಾರ, ಒಬ್ಬ ಪ್ರಯಾಣಿಕನನ್ನು ಇಳಿಸಿ ಹಿಂತಿರುಗುತ್ತಿದ್ದಾಗ, ಆರೋಪಿಯ ಕಾರು ಅವನ ವಾಹನವನ್ನು ಮೂರು ಬಾರಿ ಡಿಕ್ಕಿ ಹೊಡೆದಿತ್ತು. ಬಳಿಕ ಪ್ರಶ್ನಿಸಲು ಕಾರಿನ ಎದುರು ಬಂದಾಗ, ಆರೋಪಿಯನ್ನು ಪ್ರಶ್ನೆ ಮಾಡಲು ಕಾರಿಂದ ಇಳಿದಿದ್ದರು, ಆದರೆ ಸಂಸದರ ಕಾರಿನ ಚಾಲಕ ಕ್ಯಾಬ್​ ಚಾಲಕನನ್ನು ಬಾನೆಟ್​ ಮೇಲೆ ತಳ್ಳಿ 3 ಕಿ.ಮೀ ದೂರ ಎಳೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್

ಚಾಲಕ ಕುಡಿದಿರುವುದಾಗಿ ತಿಳಿಸಿದ್ದಾರೆ. ಆದರೆ ಇದೆಲ್ಲವನ್ನೂ ಕಾರಿನ ಚಾಲಕ ಸುಳ್ಳು ಎಂದು ಹೇಳಿದ್ದು, ನಾನು ಯಾವುದೇ ಕಾರಿಗೆ ಗುದ್ದಿಲ್ಲ, ಆತ ಉದ್ದೇಶಪೂರ್ವಕವಾಗಿಯೇ ನನ್ನ ಕಾರಿನ ಮೇಲೆ ಹಾರಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ