AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕ ಭಾರತ ಶ್ರೇಷ್ಠ ಭಾರತ: ದೇಶದಾದ್ಯಂತ ಇರುವ ರಾಜಭವನಗಳಲ್ಲಿ ಎಲ್ಲಾ ರಾಜ್ಯಗಳ ರಾಜ್ಯೋತ್ಸವ ಆಚರಣೆ

ಎಲ್ಲರ ಒಗ್ಗೂಡುವಿಕೆ ಮಂತ್ರ ಏಕ ಭಾರತ ಶ್ರೇಷ್ಠ ಭಾರತವನ್ನು ಉತ್ತೇಜಿಸುವ ಸಲುವಾಗಿ ಎಲ್ಲಾ ರಾಜ್ಯಗಳು ತಮ್ಮ ರಾಜ್ಯೋತ್ಸವವನ್ನು ಆಚರಿಸುವುದು ಮಾತ್ರವಲ್ಲದೆ ಬೇರೆ ರಾಜ್ಯಗಳ ರಾಜ್ಯೋತ್ಸವವನ್ನು ಆಚರಿಸಬೇಕು  ಕೇಂದ್ರ ಸರ್ಕಾರ ಹೇಳಿದೆ

ಏಕ ಭಾರತ ಶ್ರೇಷ್ಠ ಭಾರತ: ದೇಶದಾದ್ಯಂತ ಇರುವ ರಾಜಭವನಗಳಲ್ಲಿ ಎಲ್ಲಾ ರಾಜ್ಯಗಳ ರಾಜ್ಯೋತ್ಸವ ಆಚರಣೆ
ಏಕ ಭಾರತ, ಶ್ರೇಷ್ಠ ಭಾರತ
ನಯನಾ ರಾಜೀವ್
|

Updated on:May 01, 2023 | 12:07 PM

Share

ಎಲ್ಲರ ಒಗ್ಗೂಡುವಿಕೆ ಮಂತ್ರ ಏಕ ಭಾರತ ಶ್ರೇಷ್ಠ ಭಾರತವನ್ನು ಉತ್ತೇಜಿಸುವ ಸಲುವಾಗಿ ಎಲ್ಲಾ ರಾಜ್ಯಗಳು ತಮ್ಮ ರಾಜ್ಯೋತ್ಸವವನ್ನು ಆಚರಿಸುವುದು ಮಾತ್ರವಲ್ಲದೆ ಬೇರೆ ರಾಜ್ಯಗಳ ರಾಜ್ಯೋತ್ಸವವನ್ನು ಆಚರಿಸಬೇಕು  ಕೇಂದ್ರ ಸರ್ಕಾರ ಹೇಳಿದೆ.  ಹಾಗಾಗಿ ರಾಷ್ಟ್ರಾದ್ಯಂತ ಇರುವ ರಾಜಭವನಗಳು ಎಲ್ಲಾ ರಾಜ್ಯಗಳ ರಾಜ್ಯೋತ್ಸವ ದಿನಗಳನ್ನು ಸ್ಮರಿಸುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳು 1ನೇ ಮೇ 2023 ರಂದು ತಮ್ಮ ರಾಜ್ಯೋತ್ಸವದ ದಿನಗಳನ್ನು ಆಚರಿಸುತ್ತಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯಾ ರಾಜಭವನಗಳಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದ ರಾಜ್ಯೋತ್ಸವ ದಿನವನ್ನು ಆಚರಿಸುತ್ತಿವೆ.

ಗುಜರಾತ್ ಮತ್ತು ಮಹಾರಾಷ್ಟ್ರದ ನಿವಾಸಿಗಳನ್ನು ಇತರ ರಾಜ್ಯಗಳೊಂದಿಗೆ ಒಟ್ಟಾಗಿ ದಿನವನ್ನು ಆಚರಿಸಲು ರಾಜಭವನಕ್ಕೆ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಎರಡೂ ರಾಜ್ಯಗಳುಭಾಗವಹಿಸುವವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಾಷಣಗಳನ್ನು ಸಹ ಯೋಜಿಸಲಾಗಿದೆ.

ಮತ್ತಷ್ಟು ಓದಿ: ಸಿಖ್ ಸಮುದಾಯವು ‘ಏಕ ಭಾರತ, ಶ್ರೇಷ್ಠ ಭಾರತ’ದ ಆದರ್ಶಗಳನ್ನು ಒಳಗೊಂಡಿದೆ: ಪ್ರಧಾನಿ ಮೋದಿ

ಗುಜರಾತ್ ಮತ್ತು ಮಹಾರಾಷ್ಟ್ರಗಳು ಇಂದು ತಮ್ಮ ರಾಜ್ಯೋತ್ಸವದ ದಿನಗಳನ್ನು ಆಚರಿಸುತ್ತಿವೆ. ಇಪ್ಪತ್ತು ರಾಜ್ಯಗಳು ಮತ್ತು ಎಲ್ಲಾ ಎಂಟು ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ರಾಜಭವನಗಳಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದ ರಾಜ್ಯೋತ್ಸವ ದಿನವನ್ನು ಆಚರಿಸಲು ತಮ್ಮ ಸಮ್ಮತಿ ನೀಡಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Mon, 1 May 23