ಸಿಖ್ ಸಮುದಾಯವು ‘ಏಕ ಭಾರತ, ಶ್ರೇಷ್ಠ ಭಾರತ’ದ ಆದರ್ಶಗಳನ್ನು ಒಳಗೊಂಡಿದೆ: ಪ್ರಧಾನಿ ಮೋದಿ
PM Modi | Sikh Delegation: ಸಿಖ್ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶ ಮತ್ತು ವಿದೇಶಗಳಲ್ಲಿ ಸಿಖ್ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದರು. ಸಿಖ್ ಸಮುದಾಯವು ಏಕ ಭಾರತ, ಶ್ರೇಷ್ಠ ಭಾರತದ ಆದರ್ಶಗಳನ್ನು ಒಳಗೊಂಡಿದೆ ಎಂದ ಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿಖ್ಖರು ನೀಡಿದ ಕೊಡುಗೆಗಳಿಗಾಗಿ ಇಡೀ ದೇಶವು ಅವರಿಗೆ ಕೃತಜ್ಞವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ಶುಕ್ರವಾರ ಸಿಖ್ ನಿಯೋಗವನ್ನು (Sikh Delegation) ಭೇಟಿ ಮಾಡಿ ಸಂವಾದ ನಡೆಸಿದರು. ಚಂಡೀಗಢ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಎನ್‌ಐಡಿ ಫೌಂಡೇಶನ್‌ನ ಮುಖ್ಯ ಪೋಷಕರಾದ ಸತ್ನಾಮ್ ಸಿಂಗ್ ಸಂಧು ನೇತೃತ್ವದ 100 ಸದಸ್ಯರ ಸಿಖ್ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶ ಮತ್ತು ವಿದೇಶಗಳಲ್ಲಿ ಸಿಖ್ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದರು. ಸಿಖ್ ಸಮುದಾಯವು ಏಕ ಭಾರತ, ಶ್ರೇಷ್ಠ ಭಾರತದ ಆದರ್ಶಗಳನ್ನು ಒಳಗೊಂಡಿದೆ ಎಂದ ಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿಖ್ಖರು ನೀಡಿದ ಕೊಡುಗೆಗಳಿಗಾಗಿ ಇಡೀ ದೇಶವು ಅವರಿಗೆ ಕೃತಜ್ಞವಾಗಿದೆ ಎಂದು ಹೇಳಿದರು. ವಿಶೇಷವೆಂದರೆ ಪ್ರಧಾನಿ ಮೋದಿ ಈ ಭೇಟಿಯ ಸಂದರ್ಭದಲ್ಲಿ ಕೆಂಪು ಸಿಖ್ ಪೇಟವನ್ನು ಧರಿಸಿದ್ದರು.
ಕಾಲಕಾಲಕ್ಕೆ ಹಲವಾರು ವಿಷಯಗಳ ಕುರಿತು ಸಿಖ್ ಸಮುದಾಯದಿಂದ ಸಲಹೆಗಳನ್ನು ಪಡೆಯುವ ಅದೃಷ್ಟ ನನಗೆ ಸಿಕ್ಕಿದೆ ಎಂದ ಪ್ರಧಾನಿ, ಆ ಸಲಹೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು. ‘‘ಗುರುದ್ವಾರಗಳಿಗೆ ಹೋಗುವುದು, ಸೇವೆಯಲ್ಲಿ ಸಮಯ ಕಳೆಯುವುದು, ಸಿಖ್ ಕುಟುಂಬಗಳ ಮನೆಗಳಲ್ಲಿ ಉಳಿಯುವುದು ನನ್ನ ಜೀವನದ ಒಂದು ಭಾಗವಾಗಿದೆ. ಕಾಲಕಾಲಕ್ಕೆ ಪ್ರಧಾನಿ ನಿವಾಸದಲ್ಲಿ ಸಿಖ್ ನಿಯೋಗಗಳನ್ನು ಭೇಟಿ ಮಾಡುವ ಅದೃಷ್ಟ ಸಿಕ್ಕಿದೆ. ನಾನು ಅದಕ್ಕಾಗಿ ಹೆಮ್ಮೆಪಡುತ್ತೇನೆ’’ ಎಂದು ಪ್ರಧಾನಿ ನುಡಿದರು.
ಸಿಖ್ ಸಮುದಾಯವು ಏಕ ಭಾರತ, ಶ್ರೇಷ್ಠ ಭಾರತದ ಆದರ್ಶಗಳನ್ನು ಒಳಗೊಂಡಿದೆ ಎಂದ ಪ್ರಧಾನಿ ಸಮುದಾಯದ ಧೈರ್ಯ, ಪರಾಕ್ರಮ ಮತ್ತು ಶ್ರದ್ಧೆಯು ರಾಷ್ಟ್ರೀಯ ಮನೋಭಾವಕ್ಕೆ ಸಮಾನಾರ್ಥಕವಾಗಿದೆ ಎಂದು ಹೇಳಿದರು.
ಸಿಖ್ ನಿಯೋಗದ ಜತೆಗಿನ ಮಾತುಕತೆಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ:
Sharing highlights from today’s interaction with a Sikh delegation. We had extensive discussions on various subjects and I was glad to receive their insights. pic.twitter.com/CwMCBfAMyh
— Narendra Modi (@narendramodi) April 29, 2022
ಇದೇ ವೇಳೆ ಕೊರೊನಾ ಸಾಂಕ್ರಮಿಕದ ಬಗ್ಗೆ ಮಾತನಾಡಿದ ಪ್ರಧಾನಿ, ‘‘ಭಾರತವು ದೊಡ್ಡ ಮಟ್ಟದ ಜನಸಂಖ್ಯೆಯನ್ನು ಹೊಂದಿರುವುದರಿಂದ ಲಸಿಕೆ ನೀಡುವುದು ಸವಾಲಾಗಿತ್ತು. ಆದರೆ ಇಂದು ನಾವು ಅತಿದೊಡ್ಡ ಲಸಿಕೆ ಪೂರೈಕೆದಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದೇವೆ’’ ಎಂದು ಹೇಳಿದರು. ಭಾರತದಲ್ಲಿ ಸ್ಟಾರ್ಟಪ್ ಬೆಳವಣಿಗೆಯ ಬಗ್ಗೆಯೂ ಅವರು ಮಾತನಾಡಿದರು. ಇದೇ ವೇಳೆ ಗುರು ತೇಜ್ ಬಹದ್ದೂರ್ ಅವರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಒಂದು ತಿಂಗಳ ಅವಧಿಯಲ್ಲಿ ಪ್ರಧಾನಿ ಭೇಟಿ ಮಾಡಿದ ಎರಡನೇ ಸಿಖ್ ನಿಯೋಗ ಇದಾಗಿದೆ.
ಇನ್ನೂ ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PM Modi: ‘ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು’: ಪ್ರಧಾನಿ ನರೇಂದ್ರ ಮೋದಿ
Published On - 12:40 pm, Sat, 30 April 22