ಭಾರತದ ಸಂತ ಸಂಪ್ರದಾಯವು ಯಾವಾಗಲೂ ಏಕ್ ಭಾರತ್, ಶ್ರೇಷ್ಠ ಭಾರತ್ ಎಂದು ಸಾರುತ್ತಿದೆ: ಮೋದಿ
ಈ ಇಡೀ ಜಗತ್ತು, ಈ ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಪ್ರಜ್ಞೆಯಿಂದ ವ್ಯಾಪಿಸಿದೆ. ಈ ಪ್ರಜ್ಞೆಯು ಬಂಗಾಳದ ಕಾಳಿ ಪೂಜೆಯಲ್ಲಿ ಕಂಡುಬರುತ್ತದೆ. ಈ ಪ್ರಜ್ಞೆ ಮತ್ತು ಶಕ್ತಿಯ ಕಿರಣವನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಂಥಾ ಯುಗಪುರುಷರ ರೂಪದಲ್ಲಿ ಬೆಳಗಿಸಿದರು
ದೆಹಲಿ: ನೂರಾರು ವರ್ಷಗಳ ಹಿಂದಿನ ಆದಿ ಶಂಕರಾಚಾರ್ಯರು ಅಥವಾ ಆಧುನಿಕ ಕಾಲದ ಸ್ವಾಮಿ ವಿವೇಕಾನಂದರೇ (Swami Vivekananda )ಇರಲಿ ಭಾರತದಲ್ಲಿನ ಸಂತ ಸಂಪ್ರದಾಯವು ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬುದನ್ನು ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.ಸ್ವಾಮಿ ಆತ್ಮಸ್ಥಾನಂದ (Swami Atmasthananda) ಅವರ ನೂರನೇ ಜಯಂತ್ಯುತ್ಸವದ ಸಂದರ್ಭದಲ್ಲಿ ವಿಡಿಯೊ ಸಂವಾದ ಮೂಲಕ ಮಾತನಾಡಿದ ಮೋದಿ, ಈ ಕಾರ್ಯಕ್ರಮ ಹಲವಾರು ನೆನಪುಗಳು ಮತ್ತು ಭಾವನಾತ್ಮಕ ವಿಷಯಗಳಿಂದ ಕೂಡಿದೆ. ಸ್ವಾಮಿ ಆತ್ಮಸ್ಥಾನಂದ ಅವರ ಆಶೀರ್ವಾದ ನನಗೆ ಸಿಕ್ಕಿದೆ. ಅವರೊಂದಿಗೆ ಇರಲು ನನಗೆ ಅವಕಾಶವೂ ಲಭಿಸಿದೆ. ಅವರ ಕೊನೇ ಕ್ಷಣದವರೆಗೆ ನಾನು ಅವರ ಸಂಪರ್ಕದಲ್ಲಿದ್ದೆ ಎಂದು ಮೋದಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವಾಮೀಜಿ ಅವರ ಮಿಷನ್‌ನ ಕಾರ್ಯಗಳನ್ನು ಜನರಿಗೆ ತಲುಪಲು ಸಹಾಯ ಮಾಡುವ ಸ್ವಾಮೀಜಿಯವರ ಕುರಿತಾದ ಡ್ಯಾಕ್ಯುಮೆಂಟರಿ ಮತ್ತು ಫೋಟೊ ಬಯೋಗ್ರಫಿ ಬಿಡುಗಡೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಸನ್ಯಾಸದ ದೊಡ್ಡ ಸಂಪ್ರದಾಯವನ್ನು ಆಧುನಿಕ ರೀತಿಗೆ ತಂದಿದ್ದಾರೆ.ಸ್ವಾಮೀಜಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ್ದರು. ಬೇಲೂರ್ ಮಠ ಮತ್ತು ರಾಮಕೃಷ್ಣ ಮಿಷನ್ ಅವರ ನಿರ್ದೇಶನದಡಿಯಲ್ಲಿ ಭಾರತದಲ್ಲಿ ಮಾತ್ರವಲ್ಲದೆ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿಯೂ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ಮೋದಿ ಹೇಳಿದ್ದಾರೆ. ಸ್ವಾಮೀಜಿಯವರ ಸಂಸ್ಥೆಗಳು ಬಡವರಿಗೆ ಬದುಕು ಮತ್ತು ಉದ್ಯೋಗದಲ್ಲಿಯೂ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.
ರಾಮಕೃಷ್ಣ ಮಿಷನ್‌ನ ಆದರ್ಶಗಳು ಹೊಸ ಸಂಸ್ಥೆಗಳನ್ನು ರಚಿಸುವುದು ಮಾತ್ರವಲ್ಲದೆ ಸಂಸ್ಥೆಗಳನ್ನು ಬಲಪಡಿಸುತ್ತದೆ. ಅಂತಹ ಸಂತರು ಇರುವಲ್ಲೆಲ್ಲಾ ಮಾನವೀಯತೆಯ ಸೇವೆಯ ಕೇಂದ್ರಗಳು ತಾನಾಗಿಯೇ ಹುಟ್ಟಿಕೊಳ್ಳುತ್ತವೆ, ಸ್ವಾಮೀಜಿಯವರು ತಮ್ಮ ಸನ್ಯಾಸ ಜೀವನದಿಂದ ಇದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
Tributes to Swami Atmasthananda Ji on his birth centenary. https://t.co/EKKExOGbll
— Narendra Modi (@narendramodi) July 10, 2022
“ನೂರಾರು ವರ್ಷಗಳ ಹಿಂದಿನ ಆದಿ ಶಂಕರಾಚಾರ್ಯರಾಗಲಿ ಅಥವಾ ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರಾಗಲಿ, ಭಾರತದ ಸಂತ ಸಂಪ್ರದಾಯವು ಯಾವಾಗಲೂ ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂದು ಸಾರುತ್ತಿದೆ. ರಾಮಕೃಷ್ಣ ಮಿಷನ್ ಸ್ಥಾಪನೆಯು ‘ಏಕ್ ಭಾರತ್ ಶೇಷ್ಠ ಭಾರತ್,’ ಕಲ್ಪನೆಯೊಂದಿಗೆ ಸಂಬಂಧಿಸಿದೆ.
ಸ್ವಾಮಿ ಆತ್ಮಸ್ಥಾನಂದರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡ ಪ್ರಧಾನಿ, ಅವರೊಂದಿಗೆ ಗುಜರಾತಿ ಭಾಷೆಯಲ್ಲಿ ಮಾತನಾಡುವ ಭಾಗ್ಯ ನನಗೆ ಲಭಿಸಿದೆ. ಕಛ್ ಭೂಕಂಪದ ಸಮಯದಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ಸ್ಮರಿಸಿದ್ದಾರೆ.
ರಾಮಕೃಷ್ಣ ಮಿಷನ್‌ನ ಸಂತರು ದೇಶದಲ್ಲಿ ರಾಷ್ಟ್ರೀಯ ಏಕತೆಯ ವಾಹಕಗಳೆಂದು ಎಲ್ಲರಿಗೂ ತಿಳಿದಿದೆ . ಅವರು ವಿದೇಶಕ್ಕೆ ಹೋದಾಗ ಅವರು ಅಲ್ಲಿ ಭಾರತೀಯತೆಯನ್ನು ಪ್ರತಿನಿಧಿಸುತ್ತಾರೆ. ಸ್ವಾಮಿ ರಾಮಕೃಷ್ಣ ಪರಮಹಂಸರು ಮಾ ಕಾಳಿಯ ಸ್ಪಷ್ಟ ದೃಷ್ಟಿಯನ್ನು ಹೊಂದಿದ್ದ ಅಂತಹ ಸಂತರಲ್ಲಿ ಒಬ್ಬರು , ಅವರು ತಮ್ಮ ಸಂಪೂರ್ಣ ಅಸ್ತಿತ್ವವನ್ನು ಮಾ ಕಾಳಿಯ ಪಾದದಲ್ಲಿ ಅರ್ಪಿಸಿದರು.
“ಈ ಇಡೀ ಜಗತ್ತು, ಈ ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಪ್ರಜ್ಞೆಯಿಂದ ವ್ಯಾಪಿಸಿದೆ. ಈ ಪ್ರಜ್ಞೆಯು ಬಂಗಾಳದ ಕಾಳಿ ಪೂಜೆಯಲ್ಲಿ ಕಂಡುಬರುತ್ತದೆ. ಈ ಪ್ರಜ್ಞೆ ಮತ್ತು ಶಕ್ತಿಯ ಕಿರಣವನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಂಥಾ ಯುಗಪುರುಷರ ರೂಪದಲ್ಲಿ ಬೆಳಗಿಸಿದರು. ಸ್ವಾಮಿ ವಿವೇಕಾನಂದರು ಕಾಳಿಮಾತೆಯ ಬಗ್ಗೆ ಹೊಂದಿದ್ದ ಆಧ್ಯಾತ್ಮಿಕ ದೃಷ್ಟಿ ಅವರಲ್ಲಿ ಅಸಾಧಾರಣ ಶಕ್ತಿ ತುಂಬಿದೆ. ಸ್ವಾಮಿ ವಿವೇಕಾನಂದರಂತಹ ಧೀಮಂತ ವ್ಯಕ್ತಿತ್ವ ಜಗನ್ಮಾತೆ ಕಾಳಿಯ ಸ್ಮರಣೆಯಲ್ಲಿ ಚಿಕ್ಕ ಮಗುವಿನಂತೆ ರೋಮಾಂಚನಗೊಳ್ಳುತ್ತಿದ್ದರು. ಸ್ವಾಮಿ ಆತ್ಮಸ್ಥಾನಾನಂದರ ಭಕ್ತಿಯಲ್ಲಿಯೂ ಅದೇ ಪ್ರಾಮಾಣಿಕತೆ ಮತ್ತು ಅದೇ ಶಕ್ತಿ ಸಾಧನಾ ಶಕ್ತಿಯನ್ನು ನಾನು ನೋಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಸ್ವಾಮಿ ಆತ್ಮಸ್ಥಾನಾನಂದರಿಗೆ ಶ್ರದ್ಧಾಂಜಲಿ ಅರ್ಪಿಸಿದ ಅವರು, “ನಮ್ಮ ಆಲೋಚನೆಗಳು ವಿಶಾಲವಾದಾಗ ನಮ್ಮ ಪ್ರಯತ್ನಗಳಲ್ಲಿ ನಾವು ಎಂದಿಗೂ ಒಂಟಿಯಾಗಿರುವುದಿಲ್ಲ ಎಂಬುದನ್ನು ನಮ್ಮ ಋಷಿಮುನಿಗಳು ನಮಗೆ ತೋರಿಸಿಕೊಟ್ಟಿದ್ದಾರೆ. ಅಂತಹ ಹಲವಾರು ಸಂತರ ಜೀವನ ಪಯಣವನ್ನು ನೀವು ಭಾರತ ಭೂಮಿಯ ಮೇಲೆ ನೋಡುತ್ತೀರಿ. ಆತ್ಮಸ್ಥಾನಾನಂದ ಜೀಯವರ ಜೀವನದಲ್ಲಿ ಅದೇ ನಂಬಿಕೆ ಮತ್ತು ಸಮರ್ಪಣೆಯನ್ನು ನೋಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಭಾರತದ ಒಬ್ಬ ಸಂತ ಇಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾದಾಗ, 130 ಕೋಟಿ ದೇಶವಾಸಿಗಳ ಸಾಮೂಹಿಕ ಸಂಕಲ್ಪದಿಂದ ಸಾಧಿಸಲಾಗದ ಯಾವ ಗುರಿಯೂ ಇಲ್ಲ ಎಂದು ಮೋದಿ ಹೇಳಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದ ಮೋದಿ ಪ್ರತಿಯೊಬ್ಬರೂ ಜನರನ್ನು ಪ್ರೇರೇಪಿಸಬೇಕು. ಮಾನವ ಸೇವೆಯ ಉದಾತ್ತ ಕೆಲಸದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಧಾನಿ ಮೋದಿ ಒತ್ತಾಯಿಸಿದರು