1977ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಖಿನ್ನತೆಗೆ ಜಾರಿದ್ದ ಇಂದಿರಾ ಗಾಂಧಿ

|

Updated on: Mar 20, 2024 | 10:32 AM

ಲೋಕಸಭಾ ಚುನಾವಣೆಯಲ್ಲಿ ಸದಾ ಯಶಸ್ಸು ಕಾಣುತ್ತಾ ಬಂದಿದ್ದ ಕಾಂಗ್ರೆಸ್​, 1977ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಹೀನಾಯ ಸೋಲು ಅನುಭವಿಸಿತ್ತು. ಆ ಬಳಿಕ ಇಂದಿರಾ ಗಾಂಧಿ ನಾಲ್ಕು ದಿನಗಳ ಕಾಲ ರೂಮಿನಿಂದ ಹೊರಬಂದಿರಲಿಲ್ಲ, ಖಿನ್ನತೆಗೆ ಜಾರಿದ್ದರು. ಇದೀಗ 2024ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್​ 19ರಿಂದ ಚುನಾವಣೆಯು ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಈ ಸಮಯದಲ್ಲಿ ಪ್ರಮುಖವಾಗಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆಯೇ ಪೈಪೋಟಿ ಇದೆ.

1977ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಖಿನ್ನತೆಗೆ ಜಾರಿದ್ದ ಇಂದಿರಾ ಗಾಂಧಿ
ಇಂದಿರಾ ಗಾಂಧಿ
Image Credit source: Mint
Follow us on

1952ರಿಂದಲೂ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಸದಾ ಯಶಸ್ಸು ಕಾಣುತ್ತಾ ಬಂದಿದ್ದ ಕಾಂಗ್ರೆಸ್​, 1977ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಹೀನಾಯ ಸೋಲು ಅನುಭವಿಸಿತ್ತು. ಆ ಬಳಿಕ ಇಂದಿರಾ ಗಾಂಧಿ ನಾಲ್ಕು ದಿನಗಳ ಕಾಲ ರೂಮಿನಿಂದ ಹೊರಬಂದಿರಲಿಲ್ಲ, ಖಿನ್ನತೆಗೆ ಜಾರಿದ್ದರು. ಇದೀಗ 2024ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್​ 19ರಿಂದ ಚುನಾವಣೆಯು ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಈ ಸಮಯದಲ್ಲಿ ಪ್ರಮುಖವಾಗಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆಯೇ ಪೈಪೋಟಿ ಇದೆ.

ಈ ಸಂದರ್ಭದಲ್ಲಿ 1977ರಲ್ಲಿ ಕಾಂಗ್ರೆಸ್​ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಂಡ ಸೋಲಿನ ಬಗ್ಗೆ ಮಾತನಾಡೋಣ. ಇಂದಿರಾಳನ್ನು ತೊಲಗಿಸಿ, ದೇಶ ಉಳಿಸಿ ಎಂಬ ಜನತಾದಳದ ಘೋಷಣೆ ಯಶಸ್ವಿಯಾಗಿತ್ತು, ಭಾರತೀಯ ಲೋಕದಳ, ಅಥವಾ ಜನತಾ ದಳವು ಜಯಭೇರಿ ಬಾರಿಸಿತ್ತು.

ಇಂದಿರಾಗೆ ರಾಯ್​ಬರೇಲಿ ಸ್ಥಾನವೂ ಕೈತಪ್ಪಿತ್ತು
ಇಂದಿರಾಗಾಂಧಿ ಅವರು ತಮ್ಮ ರಾಯ್ ಬರೇಲಿ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗದಷ್ಟು ಹೀನಾಯವಾಗಿ ಸೋತಿದ್ದರು. 55 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದರು. 47 ವರ್ಷಗಳ ಹಿಂದೆ ಮಾರ್ಚ್ 20, 1977 ರಂದು ಚುನಾವಣಾ ಫಲಿತಾಂಶ ಬಂದಾಗ ಇಂದಿರಾಗಾಂಧಿ ಎದೆಗುಂದಿದ್ದರು.

ಚುನಾವಣೆ ಸೋಲಿನ ಬಳಿಕ ವಿನೋಬಾ ಭಾವೆ ಆಶ್ರಮದಲ್ಲಿ ಇಂದಿರಾ

ಸಫ್ದರ್‌ಜಂಗ್ ರಸ್ತೆಯಲ್ಲಿ ಮೌನ ಆವರಿಸಿತ್ತು. ಅವರು ಕೋಣೆಯಲ್ಲಿ ತನ್ನನ್ನು ಬಂಧಿಯಾಗಿಸಿಕೊಂಡಿದ್ದರು. 4 ದಿನಗಳ ಕಾಲ ಕೋಣೆಯಲ್ಲೇ ಬಂಧಿಯಾಗಿದ್ದರು. ಅವರು ಖಿನ್ನತೆಗೆ ಒಳಗಾಗಿದ್ದಳು. ಯಾರನ್ನೂ ಭೇಟಿಯಾಗಿರಲಿಲ್ಲ, ಯಾರೊಂದಿಗೂ ಮಾತನಾಡಿರಲಿಲ್ಲ, ಯಾರನ್ನೂ ಸಮಾಧಾನಪಡಿಸಲಿಲ್ಲ.

ಇಬ್ಬರು ಸೊಸೆಯರಾದ ಸೋನಿಯಾ ಗಾಂಧಿ ಮತ್ತು ಮೇನಕಾ ಗಾಂಧಿ, ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಸ್ನೇಹಿತ ಸುಮನ್ ದುಬೆ ಅವರ ಮನೆಗೆ ಕಳುಹಿಸಲಾಗಿತ್ತು. ಅವರು ಸಂಜಯ್ ಗಾಂಧಿ ಬಗ್ಗೆ ಚಿಂತಿತರಾಗಿದ್ದರು. 1980 ರಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಮತ್ತಷ್ಟು ಓದಿ: ಇತರ ಧರ್ಮಗಳ ಬಗ್ಗೆ ಅವಹೇಳನಕಾರಿ ಪದ ಬಳಸಲು ರಾಹುಲ್ ಗಾಂಧಿಗೆ ಧೈರ್ಯವಿದೆಯೇ?: ಬಿಜೆಪಿ

ನೀರ್ಜಾ ಚೌಧರಿ ಅವರು ತಮ್ಮ ‘‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’’ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಮಾರ್ಚ್ 22 ರಂದು ಇಂದಿರಾ ಗಾಂಧಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ನೀರ್ಜಾ ಬರೆದಿದ್ದಾರೆ.
ಅವರು ತಮ್ಮ ರಾಜೀನಾಮೆಯನ್ನು ಹಂಗಾಮಿ ಅಧ್ಯಕ್ಷ ಬಿ.ಡಿ.ಜತ್ತಿ ಅವರಿಗೆ ಸಲ್ಲಿಸಿದ್ದರು. ಆಪರೇಷನ್ ಬ್ಲೂ ಸ್ಟಾರ್ ಮತ್ತು 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಇಂದಿರಾ ಗಾಂಧಿಯವರ ವೃತ್ತಿಜೀವನವನ್ನು ಕೊನೆಗೊಳಿಸಿತು.

ಮೊದಲ ಲೋಕಸಭಾ ಚುನಾವಣೆ 1952ರಲ್ಲಿ ನಡೆಯಿತು, ಎರಡನೇ ಚುನಾವಣೆ 1957, ಮೂರನೇ ಚುನಾವಣೆ 1962, ನಾಲ್ಕನೇ ಚುನಾವಣೆ 1967, ಐದನೇ ಚುನಾವಣೆ 1971, ಆರನೇ ಚುನಾವಣೆ 1977, ಏಳನೇ ಚುನಾವಣೆ 1980, ಎಂಟನೇ ಚುನಾವಣೆ 1984, ಒಂಭತ್ತನೇ ಚುನಾವಣೆ 1989, 10ನೇ ಲೋಕಸಭಾ ಚುನಾವಣೆ 1991, 11ನೇ ಲೋಕಸಭಾ ಚುನಾವಣೆ 1996, 12ನೇ ಲೋಕಸಭಾ ಚುನಾವಣೆ 1998, 13ನೇ ಲೋಕಸಭಾ ಚುನಾವಣೆ 1999, 14ನೇ ಲೋಕಸಭಾ ಚುನಾವಣೆ 2004, 15ನೇ ಚುನಾವಣೆ 2009, 16ನೇ ಚುನಾವಣೆ 2014, 17ನೇ ಚುನಾವಣೆ 2019ರಲ್ಲಿ ನಡೆಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:31 am, Wed, 20 March 24