AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರಪ್ರದೇಶದ ಈ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದ ಇಲ್ಲ ದೀಪಾವಳಿ ಆಚರಣೆ

ದೀಪಾವಳಿಯ ಜೊತೆಗೆ ಈ ಗ್ರಾಮಸ್ಥರು ಪ್ರತಿ ವರ್ಷ ನಾಗುಲ ಚವಿತಿ ಪೂಜೆಯಿಂದ ದೂರ ಉಳಿಯುತ್ತಾರೆ. ಸುಮಾರು 200 ವರ್ಷಗಳಿಂದ ಈ ಉತ್ಸವ ನಡೆಯುತ್ತಿಲ್ಲ. ಇದಕ್ಕೆ ಪುನ್ನನಪಾಲೆಂ ದೋಷ ಒಂದು ಕಾರಣ ಎನ್ನಲಾಗಿದೆ. ನರಕಾಸುರನನ್ನು ವಧೆ ಮಾಡಿ ಜಗತ್ತನ್ನು ಬೆಳಗಿದ ದಿನವೆಂದು ದೀಪಾವಳಿಯನ್ನು ಆಚರಿಸಿದರೆ, ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕತ್ತಲೆ ತುಂಬುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಆಂಧ್ರಪ್ರದೇಶದ ಈ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದ ಇಲ್ಲ ದೀಪಾವಳಿ ಆಚರಣೆ
ಪುನ್ನನಪಾಲೆಂ ಗ್ರಾಮ
ರಶ್ಮಿ ಕಲ್ಲಕಟ್ಟ
|

Updated on: Nov 13, 2023 | 3:13 PM

Share

ಶ್ರೀಕಾಕುಲಂ ನವೆಂಬರ್ 13: ದೀಪಾವಳಿ ಹಬ್ಬ (Diwali) ಎಂದರೆ ದೀಪಗಳ ಖರೀದಿ, ರೊಟ್ಟಿ ತಯಾರಿಯ ಸಡಗರ ಹಳ್ಳಿಗಳಲ್ಲಿ ಇರುತ್ತದೆ. ದೀಪಾವಳಿಯ ದಿನದಂದು ಮನೆಗಳಲ್ಲಿ ಪೂಜೆ, ದೀಪಾಲಂಕಾರ, ಪಟಾಕಿ ಸದ್ದು ಇದ್ದೇ ಇರುತ್ತದೆ. ದೀಪಾವಳಿ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಆನಂದಿಸುವ ಹಬ್ಬ. ಆದ್ದರಿಂದಲೇ ಹಿಂದೂಗಳು ತಮ್ಮ ಸ್ಥಾನಮಾನಕ್ಕೆ ಅನುಗುಣವಾಗಿ ವರ್ಷಕ್ಕೊಮ್ಮೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ಶ್ರೀಕಾಕುಲಂ(srikakulam )ಜಿಲ್ಲೆಯ ರಣಸ್ಥಳಂ ಮಂಡಲದ ಪುನ್ನನಪಾಲೆಂ ಗ್ರಾಮಸ್ಥರು ದೀಪಾವಳಿ ಹಬ್ಬದಿಂದ ದೂರವಿದ್ದಾರೆ.

ದೀಪಾವಳಿಯ ಜೊತೆಗೆ ಈ ಗ್ರಾಮಸ್ಥರು ಪ್ರತಿ ವರ್ಷ ನಾಗುಲ ಚವಿತಿ ಪೂಜೆಯಿಂದ ದೂರ ಉಳಿಯುತ್ತಾರೆ. ಸುಮಾರು 200 ವರ್ಷಗಳಿಂದ ಈ ಉತ್ಸವ ನಡೆಯುತ್ತಿಲ್ಲ. ಇದಕ್ಕೆ ಪುನ್ನನಪಾಲೆಂ ದೋಷ ಒಂದು ಕಾರಣ ಎನ್ನಲಾಗಿದೆ. ನರಕಾಸುರನನ್ನು ವಧೆ ಮಾಡಿ ಜಗತ್ತನ್ನು ಬೆಳಗಿದ ದಿನವೆಂದು ದೀಪಾವಳಿಯನ್ನು ಆಚರಿಸಿದರೆ, ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕತ್ತಲೆ ತುಂಬುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮೊನ್ನೆ ದೀಪಾವಳಿಯ ದಿನ ಗ್ರಾಮದಲ್ಲಿ ಮಗುವೊಂದು ಉಯ್ಯಾಲೆಯಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದು, ಅದೇ ದಿನ ಗ್ರಾಮದಲ್ಲಿ ಎರಡು ಆನೆಗಳು ಕೂಡ ಸಾವನ್ನಪ್ಪಿದ್ದವು. ಗ್ರಾಮಸ್ಥರು ಇದನ್ನು ಅಶುಭವೆಂದು ಪರಿಗಣಿಸಿ ಹಬ್ಬದಿಂದ ದೂರ ಉಳಿದಿದ್ದಾರೆ. ನೀವು ಪುನ್ನನಪಾಲೆಂ ಗ್ರಾಮದಲ್ಲಿ ಹುಟ್ಟಿ ಬೆಳೆದು ಹೊರಗಿನ ಹುಡುಗನನ್ನು ಮದುವೆಯಾಗಿ  ಅತ್ತೆಯ ಮನೆಗೆ ಹೋದರೆ, ಅವರ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೆ ಊರ ಹೊರಗಿನ ಹುಡುಗಿ ಪುನ್ನನಪಾಲೆಂ ಹುಡುಗನನ್ನು ಮದುವೆಯಾಗಿ ಈ ಗ್ರಾಮಕ್ಕೆ ಬಂದರೆ ದೀಪಾವಳಿ ಆಚರಿಸಲ್ಲ.

ಇದನ್ನೂ ಓದಿ: Deepavali: ಈ ರಾಜ್ಯದ 7 ಹಳ್ಳಿಗಳಲ್ಲಿ ಪಟಾಕಿಯ ಅಬ್ಬರವಿಲ್ಲದೆ ಶಾಂತಿಯಿಂದ ಆಚರಿಸಲಾಗುತ್ತೆ ದೀಪಾವಳಿ

ಆದರೆ ಇದೆಲ್ಲ ಮೂಢನಂಬಿಕೆ ಎಂದು ಅಲ್ಲಗಳೆಯುವವರೂ ಇದ್ದಾರೆ. ಗ್ರಾಮದ ಯುವಕರು ಮತ್ತು ವಿದ್ಯಾವಂತರು ದೀಪಾವಳಿ ಹಬ್ಬವನ್ನು ಆಯೋಜಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದಾರೆ. ಆದರೆ ತಲೆಮಾರಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಪಾಲಿಸದೆ ಮತ್ತೆ ಹಬ್ಬ ಆಚರಿಸುವುದು ಒಳ್ಳೆಯದಲ್ಲ ಎಂದು ಗ್ರಾಮದ ಹಿರಿಯರು ಹೇಳಿದರು.  ಪುನ್ನನ ನರಸಿಂಹು ನಾಯ್ಡು ಎಂಬ ಶಿಕ್ಷಕ ಈ ಹಿಂದೆಯೇ ಹಬ್ಬ ಆಚರಿಸಲು ಯತ್ನಿಸಿ ಮಗ ಅಕಾಲಿಕ ಮರಣ ಹೊಂದಿದ್ದ. ಇದರಿಂದ ಗ್ರಾಮಸ್ಥರು ದೀಪಾವಳಿ, ನಾಗುಲ ಚವಿತಿ ಹಬ್ಬಗಳಿಂದ ಸಂಪೂರ್ಣ ದೂರ ಉಳಿಯುವಂತಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!