ಗ್ರೇಟರ್ ನೋಯ್ಡಾ: ನಗರದ ರೆಸ್ಟೊರೆಂಟ್‌ನಲ್ಲಿ (Restaurant) ಊಟಕ್ಕೆಂದು ಹೊರಟಿದ್ದ ಮೂವರು ವ್ಯಕ್ತಿಗಳು ತಡವಾಗಿ ಬಿರಿಯಾನಿ(Biryani)ಆರ್ಡರ್ ನೀಡಿದ್ದಿರಂದ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿಗೆ ಥಳಿಸಿದ್ದು, ವಿಡಿಯೊ ವೈರಲ್ ಆಗಿದೆ. ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‌ನಲ್ಲಿರುವ ಝೌಕ್ ರೆಸ್ಟೋರೆಂಟ್‌ನಲ್ಲಿ ಬುಧವಾರ ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ. ಇದೀಗ ಬಂಧಿತರಾಗಿರುವ ಮೂವರನ್ನು ಮನೋಜ್, ರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ದಾದ್ರಿ ನಿವಾಸಿಗಳು.ರೆಸ್ಟೊರೆಂಟ್‌ನ ಟೇಬಲ್‌ನಲ್ಲಿ ಕುಳಿತಿರುವ ಮೂವರು ವ್ಯಕ್ತಿಗಳು ಆಹಾರಕ್ಕಾಗಿ ಕಾಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಲ್ಲಿ ಒಬ್ಬನು ಇದ್ದಕ್ಕಿದ್ದಂತೆ ತನ್ನ ಸೀಟಿನಿಂದ ಎದ್ದು ತನ್ನ ಕಂಪ್ಯೂಟರ್‌ನಲ್ಲಿ ಕೆಲಸದಲ್ಲಿ ನಿರತನಾಗಿದ್ದ ರೆಸ್ಟೋರೆಂಟ್ ಉದ್ಯೋಗಿಯನ್ನು ಥಳಿಸಲು ಪ್ರಾರಂಭಿಸುತ್ತಾನೆ.
ಕುಪಿತನಾಗಿದ್ದ ಆ ವ್ಯಕ್ತಿ ನೌಕರನನ್ನು ಅವನ ಕುತ್ತಿಗೆ ಹಿಡಿದು ಎಳೆದುಕೊಂಡು ಹೊರಗೆ ಹೋಗುತ್ತಾಮೆ. ಅಲ್ಲಿಗೆ ಹಲ್ಲೆ ನಿಲ್ಲಲಿಲ್ಲ. ಮೂವರು ವ್ಯಕ್ತಿಗಳು ನೌಕರನನ್ನು ರೆಸ್ಟೋರೆಂಟ್‌ನಿಂದ ಹೊರಗೆಳೆದು ಒದೆಯುವುದು ಮತ್ತು ಥಳಿಸುವುದು ವಿಡಿಯೊದಲ್ಲಿದೆ.
Location: Greater Noida
Reason: Biryani order late
All 3 thugs arrested by @noidapolice pic.twitter.com/7qEdXNeChu— Shiv Aroor (@ShivAroor) November 10, 2022
ಬುಧವಾರ ರಾತ್ರಿ ಮೂವರು ಆರೋಪಿಗಳು ಊಟಕ್ಕೆಂದು ರೆಸ್ಟೋರೆಂಟ್‌ಗೆ ತೆರಳಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, ಅಲ್ತಾಫ್ ಎಂಬ ಸಿಬ್ಬಂದಿ ಬಿರಿಯಾನಿ ಮುಗಿದಿದೆ ಎಂದು ಹೇಳಿದರು. ಆರೋಪಿಗಳಲ್ಲಿ ಒಬ್ಬ ಸಿಟ್ಟಿಗೆದ್ದು, ಸಿಬ್ಬಂದಿಯ ಕಾಲರ್ ಹಿಡಿದಿದ್ದಾನೆ ಎಂದು ಎಂದು ಗ್ರೇಟರ್ ನೋಯ್ಡಾದ ಎಸಿಪಿ -1 ಮಹೇಂದ್ರ ದೇವ್ ಅವರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.