ಪೆದ್ದಪಲ್ಲಿ: ಹಾವಿನಿಂದ ಕಚ್ಚಿಸಿದಳು, ಉಸಿರಾಡದಂತೆ ಮಾಡಿದಳು – ಕೊನೆಗೆ ಹೆಂಡತಿ ಏನು ಮಾಡಿದಳು ಅಂದರೆ

|

Updated on: Oct 14, 2023 | 2:06 PM

Peddapalli: ಪ್ರವೀಣ್‌ಗೆ ಹೃದಯಾಘಾತವಾಗಿದೆ ಎಂದು ಆತನ ಪತ್ನಿ ಲಲಿತಾ, ನೆರೆಮನೆಯವರನ್ನು ನಂಬಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪ್ರವೀಣ ಆಗಲೇ ಸತ್ತಿರುವುದಾಗಿ, ವೈದ್ಯರು ಘೋಷಿಸಿದರು. ಪ್ರವೀಣನ ಸಾವಿನ ವಿಷಯ ಆತನ ಕುಟುಂಬಸ್ಥರಿಗೆ ತಿಳಿದ ನಂತರ, ಪ್ರವೀಣನ ತಾಯಿ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ರಂಗ ಪ್ರವೇಶಿಸಿದಾಗ ಸತ್ಯ ಬಯಲಾಗಿದೆ.

ಪೆದ್ದಪಲ್ಲಿ: ಹಾವಿನಿಂದ ಕಚ್ಚಿಸಿದಳು, ಉಸಿರಾಡದಂತೆ ಮಾಡಿದಳು - ಕೊನೆಗೆ ಹೆಂಡತಿ ಏನು ಮಾಡಿದಳು ಅಂದರೆ
ಹಾವಿನಿಂದ ಕಚ್ಚಿಸಿ, ಗಂಡ ಉಸಿರಾಡದಂತೆ ಮಾಡಿದಳು ಹೆಂಡತಿ
Follow us on

ಪೆದ್ದಪಲ್ಲಿ ಜಿಲ್ಲೆ, ಅಕ್ಟೋಬರ್ 14; ಮುಖ-ತಲೆಗೆ ದಿಂಬು ಹಿಡಿದಿಟ್ಟು ಉಸಿರಾಡದಂತೆ ಮಾಡಿದರು. ಅದನ್ನು ತಾಳಲಾರದೆ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ.. ಅಷ್ಟಕ್ಕೇ ಸುಮ್ಮನಾಗದೆ ಆಸಾಮಿ ಎಲ್ಲಿ ಸತ್ತಿಲ್ಲವೋ ಎಂಬ ಶಂಕೆಯಿಂದ ಹಾವಿನಿಂದ ಕಚ್ಚಿಸಿದ್ದೂ ನಡೆದಿದೆ. ವ್ಯಕ್ತಿಯ ಇಂತಹ ಭೀಕರ ಹತ್ಯೆಗೆ ಆತ ಕಟ್ಟಿಕೊಂಡ ಪತ್ನಿಯೇ ಕಾರಣ ಎಂಬುದು ಸಂಚಲನ ಮೂಡಿಸಿದೆ. ಪೆದ್ದಪಲ್ಲಿ ಜಿಲ್ಲೆಯ ಗೋದಾವರಿ ತಟದಲ್ಲಿ ನಡೆದ ಈ ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಗೋದಾವರಿ ಮಾರ್ಕಂಡೇಯ ಕಾಲೋನಿಯಲ್ಲಿ ಈ ಪ್ರಸಂಗ ನಡೆದಿದೆ. ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಪ್ರವೀಣ್ ಎಂಬಾತ ಕಾಲಾಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಮಧ್ಯೆ ಬಿಲ್ಡರ್ ಆಗಲು ಮುಂದಾದರು. ಹೀಗಿರುವಾಗ, ಪ್ರವೀಣ್‌ ಮಹಿಳೆಯೊಬ್ಬಳ ಸಂಗಕ್ಕೆ ಬಿದ್ದು, ವಿವಾಹೇತರ ಸಂಬಂಧ ಹೊಂದಿದ್ದ. ಇದು ಪ್ರವೀಣನ ಹೆಂಡತಿಯನ್ನುನ ಕೆರಳಿಸಿತು. ಪ್ರವೀಣ್​ ದಂಪತಿ ನಡುವೆ ಮನಸ್ತಾಪಕ್ಕೆ ಹೇತುವಾಯಿತು. ಈ ಹಿನ್ನೆಲೆಯಲ್ಲಿ ಪ್ರವೀಣ ಕುಡಿತದ ಚಟಕ್ಕೆ ಬಿದ್ದ.

ಪ್ರತಿದಿನ ಕುಡಿದು ಮನೆಗೆ ಬರತೊಡಗಿದ. ಇದನ್ನೆಲ್ಲ ಭರಿಸಲಾಗದೆ/ ಸಹಿಸಲಾಗದೆ ಪತ್ನಿ ಲಲಿತಾ, ತನ್ನ ಗಂಡನ ಜೊತೆ ಸೆಂಟ್ರಿಂಗ್​​ ಕೆಲಸ ಮಾಡುವ ಸುರೇಶ್ ಎಂಬುವವನ ಮುಂದೆ ತನ್ನ ಸಂಕಟಗಳನ್ನು ತೋಡಿಕೊಂಡಳು. ಗಂಡನ ಕಾಟದಿಂದ ತನಗೆ ಮುಕ್ತಿಕೊಡಿಸಲು ಎಂದು ಪುಸಲಾಯಿಸಿದಳು. ಕೊನೆಗೆ ಇಬ್ಬರೂ ಸೇರಿ ಪ್ರವೀಣನನ್ನು ಕೊಲೆ ಮಾಡಲು ನಿರ್ಧರಿಸಿದರು. ಆದರೆ, ಹೀಗೆ ಮಾಡಿದರೆ ಸಂಸಾರಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ಸುರೇಶನದಾಗಿತ್ತು. ಆದರೆ ಇದಕ್ಕೆ ಬೇರೆಯದ್ದೇ ಸ್ಕೆಚ್​ ಹಾಕಿದ ಲಲಿತಾ, ತನ್ನ ಒಡೆತನದಲ್ಲಿರುವ ಫ್ಲ್ಯಾಟ್​​ ಒಂದನ್ನು ನಿಡುವುದಾಗಿ ಸುರೇಶನಿಗೆ ಸುಪಾರಿ ನೀಡಿದಳು.

ಇದನ್ನೂ ಓದಿ: ಮತ್ತೊಮ್ಮೆ ಅಪಜಯ ಅನುಭವಿಸಲು ಸನ್ನದ್ದ ಕೂಟ I.N.D.I.A -ವಿಡಂಬನಾತ್ಮಕ ಕಾರ್ಟೂನ್​​ಗಳನ್ನು ಪೋಸ್ಟ್​ ಮಾಡಿದ BJP

ಹೀಗಿರುವಾಗ ಆಸೆಗೆ ಬಿದ್ದ ಸುರೇಶ, ಪ್ರವೀಣ್‌ನನ್ನು ಕೊಲ್ಲಲು ನಿರ್ಧರಿಸಿದ. ಈ ಪ್ರವೀಣನ ಕೊಲೆಯನ್ನು ಸಹಜ ಸಾವು ಎಂದು ನಂಬಿಸುವ ಸಲುವಾಗಿ ಉಸಿರಾಡದಂತೆ ಮಾಡಿ ಕೊಲ್ಲಲು ನಿರ್ಧರಿಸಿದ್ದ. ಒಂದು ವೇಳೆ ಪ್ರವೀಣ ಪ್ರತಿರೋಧ ತೋರಿದರೆ ಹಾವಿನಿಂದ ಕಚ್ಚಿಸಿ, ಕೊಲೆ ಮಾಡುವ ಯೋಜನೆ ಕೂಡ ಸಿದ್ಧಪಡಿಸಿದ್ದ.

ಈ ಕೊಲೆಗೆ ರಾಮಗುಂಡಂನ ಇಂದಾರಪು ಸತೀಶ್, ಮಂದಮರಿಗೆ ಸೇರಿದ ಮಾಸ್ ಶ್ರೀನಿವಾಸ್, ಭೀಮಾ ಗಣೇಶ್ ಸೇರಿ ಪ್ರವೀಣನ ಹತ್ಯೆಗೆ ಸುರೇಶ ಸಂಚು ರೂಪಿಸಿದ. ಹಾವಿನಿಂದ ಕಚ್ಚಿಸುವ ಯೋಜನೆಗೆ ಖಾಸಗಿ ಸೆಕ್ಯುರಿಟಿ ಗಾರ್ಡ್ ಮಂದಮರಿಗೆ ಸೇರಿದ ನನ್ನಾಪುರಾಜು ಚಂದ್ರಶೇಖರ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಸರಿದೂಗಿಸಲು ಲಲಿತಳು ಅವರುಗಳ ಖರ್ಚಿಗೆಂದು ತನ್ನ ಮೈಮೇಲಿದ್ದ 34 ಗ್ರಾಂ ಚಿನ್ನದ ಸರವನ್ನು ನೀಡಿದ್ದಾಳೆ.

ಈ ರೀತಿ ಯೋಜನೆಯಂತೆ ರಾಮಗುಂಡಂನಲ್ಲಿ ಆ ರಾತ್ರಿ ಪ್ರವೀಣ ಮದ್ಯ ಸೇವಿಸಿ, ನಿದ್ರೆಗೆ ಜಾರಿದ್ದಾನೆ. ಆ ವೇಳೆ ಲಲಿತಾ ಮೊಬೈಲ್ ಕರೆ ಮಾಡಿ, ಸುರೇಶನನ್ನು ಕರೆಯಿಸಿಕೊಂಡಿದ್ದಾಳೆ. ಪ್ರವೀಣ್ ಮದ್ಯ ಸೇವಿಸಿ ಮಲಗಿದ್ದಾಗ ಸುರೇಶ ಮತ್ತು ಅವನ ತಂಡ ಆಕ್ಟೋಬ್ರ್ 9ರ ರಾತ್ರಿ 11 ಗಂಟೆಗೆ ಪ್ರವೀಣ್ ಮನೆ ತಲುಪಿಕೊಮಡಿದ್ದಾನೆ ಸುರೇಶ.

ಅಲ್ಲಿ ಬೆಡ್ ಶೀಟ್ ಮೂಲಕ ಪ್ರವೀಣನ ಮುಖ ಅದುಮಿಟ್ಟುಕೊಂಡಿದ್ದಾನೆ. ಉಳಿದವರು ಬಿಗಿಯಾಗಿ ಕಾಲುಗಳು ಬಂಧಿಸಿದ್ದಾರೆ. ಅಷ್ಟೇ ಪ್ರವೀಣ ಖಲಾಸ್​ ಆಗಿದ್ದಾನೆ. ಆದರೆ ಪ್ರವೀಣ ಸತ್ತಿದ್ದಾನೋ, ಇಲ್ಲವೋ ಎಂಬ ಅನುಮಾನ ಸುರೇಶನಿಗೆ ಕಾಡಿದೆ. ಆಗ ಹಾವಿನ ಕಾಟ ಶುರುವಾಗಿದೆ.

ಇತ್ತ ಪ್ರವೀಣ್‌ಗೆ ಹೃದಯಾಘಾತವಾಗಿದೆ ಎಂದು ಆತನ ಪತ್ನಿ ಲಲಿತಾ, ನೆರೆಮನೆಯವರನ್ನು ನಂಬಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪ್ರವೀಣ ಆಗಲೇ ಸತ್ತಿರುವುದಾಗಿ, ಆಸ್ಪತ್ರೆಯ ವೈದ್ಯರು ಘೋಷಿಸಿದರು. ಪ್ರವೀಣನ ಸಾವಿನ ವಿಷಯ ಆತನ ಕುಟುಂಬಸ್ಥರಿಗೆ ತಿಳಿದ ನಂತರ, ಪ್ರವೀಣನ ತಾಯಿ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ರಂಗ ಪ್ರವೇಶಿಸಿದಾಗ ಸತ್ಯ ಬಯಲಾಗಿದೆ. ಪೊಲೀಸ್ ತನಿಖೆಯಲ್ಲಿ ಪತ್ನಿ ಲಲಿತಾ ಇಡೀ ಕಥೆಯನ್ನು ವಿವರಿಸಿದ್ದಾಳೆ, ಈ ಕಾರಣದಿಂದಾಗಿ ಪೊಲೀಸರು ಪತ್ನಿ ಲಲಿತಾ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ