Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ದತ್ತು ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸುಪ್ರೀಂಕೋರ್ಟ್ ಕಳವಳ

Child adoption: ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, "ಜನರು ದತ್ತು ಪಡೆಯಲು ಬಯಸುತ್ತಾರೆ ಮತ್ತು ಮಕ್ಕಳನ್ನು ಹೊಂದಲು ಪರಿತಪಿಸುತ್ತಿರುವುದು ಮಾನವ ವಿಷಯವಾಗಿದೆ" ಎಂದು ಹೇಳಿದರು.  ಏತನ್ಮಧ್ಯೆ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚುವರಿ ಸಮಯವನ್ನು ಕೋರಿದರು.

ಮಕ್ಕಳ ದತ್ತು ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸುಪ್ರೀಂಕೋರ್ಟ್ ಕಳವಳ
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 14, 2023 | 3:15 PM

ದೆಹಲಿ ಅಕ್ಟೋಬರ್ 14: ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿನ ತೀವ್ರ ವಿಳಂಬದ ಬಗ್ಗೆ ಸುಪ್ರೀಂಕೋರ್ಟ್ (Supreme Court) ಶುಕ್ರವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದು ,ಪ್ರಕ್ರಿಯೆಯನ್ನು ಸರಳಗೊಳಿಸಲು ಯಾವುದೇ ಕ್ರಮಗಳನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರವನ್ನು ಕೇಳಿದೆ. ಮಕ್ಕಳ ದತ್ತು ಸ್ವೀಕಾರವನ್ನು(child adoption process) “ಮಾನವೀಯ ವಿಷಯ” ಎಂದು ಪರಿಗಣಿಸಿದ ಸುಪ್ರೀಂಕೋರ್ಟ್ ಈ ಸಮಸ್ಯೆಯನ್ನು ಎತ್ತಿದ್ದು, ಉತ್ತಮ ಜೀವನದ ಭರವಸೆಯಲ್ಲಿ ಹಲವಾರು ಮಕ್ಕಳು ದತ್ತು ಪಡೆಯಲು ಕಾಯುತ್ತಿದ್ದಾರೆ ಎಂದು ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠ, “ದತ್ತು ಸ್ವೀಕಾರದಲ್ಲಿ ತೀವ್ರ ವಿಳಂಬವಾಗುತ್ತಿದೆ. ದಂಪತಿಗಳು ಮೂರ್ನಾಲ್ಕು ವರ್ಷಗಳ ಕಾಲ ಕಾಯಬೇಕು ನಾವು ದತ್ತು ಪ್ರಕ್ರಿಯೆ ವಿಳಂಬಗೊಳಿಸುತ್ತಿದ್ದೇವೆ? ಕೇಂದ್ರ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (CARA) ಅದರ ಬಗ್ಗೆ ಏಕೆ ಏನೂ ಮಾಡುತ್ತಿಲ್ಲ? ಎಂದು ಕೇಳಿದೆ.

ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುವ ಎರಡು ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವಾಗ ದತ್ತು ಸ್ವೀಕಾರ ಪ್ರಕ್ರಿಯೆ ವಿಳಂಬವಾಗುತ್ತಿದ್ದು ಇಡೀ ಪ್ರಕ್ರಿಯೆಯನ್ನು ಪ್ರಹಸನವಾಗಿಸುತ್ತಿದೆ ಎಂದು ಹೇಳಿದೆ.

ಅರ್ಜಿದಾರರಲ್ಲಿ ಒಂದಾಗಿರುವ ಎನ್‌ಜಿಒ ಟೆಂಪಲ್ ಆಫ್ ಹೀಲಿಂಗ್ ಸಂಸ್ಥಾಪಕ ಪಿಯೂಷ್ ಸಕ್ಸೇನಾ ಅವರು 30 ಮಿಲಿಯನ್‌ಗಿಂತಲೂ ಹೆಚ್ಚು ಅನಾಥರಿರುವ ದೇಶದಲ್ಲಿ ವಾರ್ಷಿಕವಾಗಿ ಕೇವಲ 4,000 ದತ್ತುಗಳು ನಡೆಯುತ್ತಿವೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ಜನರು ದತ್ತು ಪಡೆಯಲು ಬಯಸುತ್ತಾರೆ ಮತ್ತು ಮಕ್ಕಳನ್ನು ಹೊಂದಲು ಪರಿತಪಿಸುತ್ತಿರುವುದು ಮಾನವ ವಿಷಯವಾಗಿದೆ” ಎಂದು ಹೇಳಿದರು.  ಏತನ್ಮಧ್ಯೆ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚುವರಿ ಸಮಯವನ್ನು ಕೋರಿದರು.

ಅಕ್ಟೋಬರ್ 30 ರಂದು ವಿಚಾರಣೆಗೆ ಎರಡು ಅರ್ಜಿಗಳನ್ನು ಪಟ್ಟಿ ಮಾಡಿದ ನ್ಯಾಯಾಲಯವು ಎಎಸ್‌ಜಿ ಭಾಟಿ ಪ್ರತಿನಿಧಿಸುವ ಕೇಂದ್ರಕ್ಕೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು, ನಂತರ ಕಾರ್ಯವಿಧಾನವನ್ನು ಸರಳಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿತು.

ದತ್ತು ವಿಳಂಬದಿಂದ ಉಂಟಾಗುವ ಪ್ರಾಯೋಗಿಕ ತೊಂದರೆಗಳ ಬಗ್ಗೆ ನ್ಯಾಯಾಲಯವು ಆಲೋಚಿಸಿದೆ. 26 ವರ್ಷದವರಾಗಿದ್ದಾಗ ದತ್ತು ತೆಗೆದುಕೊಳ್ಳಲು ಬಯಸುವ ದಂಪತಿಗಳು ಇರಬಹುದು. ಹಾಗೆ ಅವರು ದತ್ತು ತೆಗೆದುಕೊಳ್ಳುವ ಸಮಯಕ್ಕೆ ಅವರು 32-33 ವರ್ಷ ವಯಸ್ಸಿನವರಾಗಿದ್ದಾರೆ. ಅಷ್ಟರೊಳಗೆ ದತ್ತು ಪಡೆಯುವ ಮಗುವಿನ ಸ್ಥಾನದೊಂದಿಗೆ ಪೋಷಕರ ಸ್ಥಾನವೂ ಬದಲಾಗುತ್ತದೆ ಎಂದು ಪೀಠ ಹೇಳಿದೆ.

ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಸಂಪೂರ್ಣ ಭರವಸೆ ನೀಡಲು ಕೇಂದ್ರವು ಬಯಸುತ್ತಿರುವುದರಿಂದ ಮಕ್ಕಳನ್ನು ಗುರುತಿಸುವುದು ಸಮಯ ತೆಗೆದುಕೊಳ್ಳುವ ಸಮಸ್ಯೆಯಾಗಿದೆ ಎಂದು ಭಾಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಾವು ಈ ಪ್ರಕ್ರಿಯೆಯಲ್ಲಿ ಸಹಕಾರಿಯಾಗಿರಲು ಬಯಸುತ್ತೇವೆ. ಈ ನ್ಯಾಯಾಲಯದ ಆದೇಶದ ನಂತರ ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಎಎಸ್‌ಜಿ ಹೇಳಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಅರ್ಜಿಯ ಕುರಿತು ನ್ಯಾಯಾಲಯ ನೋಟಿಸ್ ನೀಡಿತ್ತು.

ಭಾರತವು ವಿಶ್ವದ ‘ಅನಾಥ ರಾಜಧಾನಿ’ಯಾಗಿ ಮಾರ್ಪಟ್ಟಿರುವ ಕಾರಣ, CARA ಮಧ್ಯಸ್ಥಿಕೆಯಿಲ್ಲದೆ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ (HAMA) ಅಡಿಯಲ್ಲಿ ದತ್ತುಗಳನ್ನು ಕೌಟುಂಬಿಕ ನ್ಯಾಯಾಲಯಗಳು ಪ್ರಕ್ರಿಯೆಗೊಳಿಸಲು ಅನುಮತಿ ನೀಡಿದರೆ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸಕ್ಸೇನಾ ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ಡಾರ್ವಿನ್ ವಿಕಾಸದ ಸಿದ್ಧಾಂತ, ಐನ್‌ಸ್ಟೀನ್‌ನ ಸಮೀಕರಣವನ್ನು ಪ್ರಶ್ನಿಸಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂಕೋರ್ಟ್

ಇದಕ್ಕೆ, ಭಾಟಿ ಅವರು ಈ ಮೊದಲು (ದತ್ತು ಪ್ರಕ್ರಿಯೆ) ಸಾಧ್ಯವಿತ್ತು. ಆದರೆ ಪ್ರಸ್ತುತ ಆಡಳಿತದಲ್ಲಿ ಎಲ್ಲಾ ದತ್ತುಗಳನ್ನು CARA ನಿಯಮಗಳ ಅಡಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.

ವಕೀಲ ರೋಹನ್ ಶಾ ಪ್ರತಿನಿಧಿಸಿದ ಇತರ ಅರ್ಜಿದಾರರು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಒಳಗೊಂಡಿರುವ ಮುಖವನ್ನು ಎತ್ತಿ ತೋರಿಸಿದರು, ಇದು ಇನ್ನೂ ಕೆಟ್ಟ ಪರಿಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ ಏಕೆಂದರೆ ಈ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪೋಷಕರು ಮುಂದೆ ಬರುವುದಿಲ್ಲ.

ನ್ಯಾಯಾಲಯವು ಮುಂದಿನ ದಿನಾಂಕದಂದು ವಿಷಯದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಒಪ್ಪಿಕೊಂಡಿತು ಮತ್ತು ಅರ್ಜಿದಾರರೊಂದಿಗೆ ಕುಳಿತು ಕೆಲವು ಪರಿಹಾರಗಳೊಂದಿಗೆ ಮತ್ತೆ ಬರಲು ಭಾಟಿ ಅವರಿಗೆ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!