AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಗುವನ್ನು ಕೊಲ್ಲಲು ಸಾಧ್ಯವಿಲ್ಲ’: ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್

ಅಕ್ಟೋಬರ್ 9 ರ ಆದೇಶವನ್ನು ಹಿಂಪಡೆಯಲು ಕೇಂದ್ರದ ಅರ್ಜಿಯ ಮೇಲೆ ದ್ವಿಸದಸ್ಯ ಪೀಠವು ಬುಧವಾರ ಭಿನ್ನ ತೀರ್ಪು ನೀಡಿದ ನಂತರ ಪ್ರಕರಣವನ್ನು ಸಿಜೆಐ ನೇತೃತ್ವದ ಪೀಠಕ್ಕೆ ನೀಡಲಾಯಿತು. ಇದರಲ್ಲಿ ಇಬ್ಬರು ಮಕ್ಕಳ ತಾಯಿಗೆ ಆಕೆಯ 26 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಈ ಮೊದಲು ಅನುಮತಿ ನೀಡಲಾಗಿತ್ತು. 

'ಮಗುವನ್ನು ಕೊಲ್ಲಲು ಸಾಧ್ಯವಿಲ್ಲ': ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 12, 2023 | 6:24 PM

ದೆಹಲಿ ಅಕ್ಟೋಬರ್ 12: ವಿವಾಹಿತ ಮಹಿಳೆಗೆ ತನ್ನ 26 ವಾರದ ಭ್ರೂಣವನ್ನು ಗರ್ಭಪಾತ (abortion) ಮಾಡಲು ಅವಕಾಶ ನೀಡಿದ ಅಕ್ಟೋಬರ್ 9 ರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ “ನಾವು ಮಗುವನ್ನು ಕೊಲ್ಲಲು ಸಾಧ್ಯವಿಲ್ಲ” ಎಂದು ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂಕೋರ್ಟ್(Supreme Court) ಪೀಠ ಹೇಳಿದೆ. ಆದಾಗ್ಯೂ, “ಜೀವಂತವಿರುವ” ಭ್ರೂಣದ ಹಕ್ಕು ತಾಯಿಯ ನಿರ್ಧಾರದ ಹಕ್ಕಿನೊಂದಿಗೆ ಸಮತೋಲನಗೊಳಿಸಬೇಕು ಎಂದು ನ್ಯಾಯಾಲಯವು ಕೇಂದ್ರಕ್ಕೆ ಹೇಳಿದೆ. ಕೆಲವು ವಾರಗಳವರೆಗೆ ಗರ್ಭಧಾರಣೆಯನ್ನು ಉಳಿಸಿಕೊಳ್ಳುವ ಬಗ್ಗೆ ಮಹಿಳೆಯೊಂದಿಗೆ ಮಾತನಾಡಲು ನ್ಯಾಯಾಲಯವು ಕೇಂದ್ರ ಮತ್ತು ಮಹಿಳೆಯ ವಕೀಲರನ್ನು ಕೇಳಿದೆ.

ಅಕ್ಟೋಬರ್ 9 ರ ಆದೇಶವನ್ನು ಹಿಂಪಡೆಯಲು ಕೇಂದ್ರದ ಅರ್ಜಿಯ ಮೇಲೆ ದ್ವಿಸದಸ್ಯ ಪೀಠವು ಬುಧವಾರ ಭಿನ್ನ ತೀರ್ಪು ನೀಡಿದ ನಂತರ ಪ್ರಕರಣವನ್ನು ಸಿಜೆಐ ನೇತೃತ್ವದ ಪೀಠಕ್ಕೆ ನೀಡಲಾಯಿತು. ಇದರಲ್ಲಿ ಇಬ್ಬರು ಮಕ್ಕಳ ತಾಯಿಗೆ ಆಕೆಯ 26 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಈ ಮೊದಲು ಅನುಮತಿ ನೀಡಲಾಗಿತ್ತು.

ಮಹಿಳೆಯು ಖಿನ್ನತೆಯಿಂದ ಬಳಲುತ್ತಿದ್ದ. “ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ” ಮೂರನೇ ಮಗುವನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಗೆ ವೈದ್ಯಕೀಯವಾಗಿ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ನ್ಯಾಯಾಲಯ ಅನುಮತಿ ನೀಡಿತ್ತು.

ಭ್ರೂಣದ ಹೃದಯವನ್ನು ನಿಲ್ಲಿಸಲು ನಾವು AIIMS ನಲ್ಲಿನ ವೈದ್ಯರಿಗೆ ಹೇಳಲು ನೀವು ಬಯಸುತ್ತೀರಾ?” ಎಂದು ನ್ಯಾಯಾಲಯವು 27 ವರ್ಷದ ಮಹಿಳೆಯ ವಕೀಲರಲ್ಲಿ ಕೇಳಿತ್ತು.. ವಕೀಲರು “ಇಲ್ಲ” ಎಂದು ಪ್ರತಿಕ್ರಿಯಿಸಿದಾಗ , ಮಹಿಳೆ ಇನ್ನೂ ಕೆಲವು ವಾರಗಳವರೆಗೆ ಭ್ರೂಣವನ್ನು ಉಳಿಸಿಕೊಳ್ಳಬಹುದೇ ಎಂದು ಪೀಠ ವಕೀಲರಿಗೆ ಕೇಳಿತು.

ಇದನ್ನೂ ಓದಿ: ಗರ್ಭಪಾತದ ಅರ್ಜಿ: ಎರಡು ಭಿನ್ನ ಆದೇಶ, ಒಮ್ಮತಕ್ಕೆ ಬಾರದ ಸುಪ್ರೀಂನ ದ್ವಿಸದಸ್ಯ ಪೀಠ

ನಾವು ಮಗುವನ್ನು ಕೊಲ್ಲಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ಮಹಿಳೆಗೆ ಈ ಬಗ್ಗೆ ನಿರ್ಧರಿಸಲು 24 ಗಂಟೆಗಳ ಕಾಲಾವಕಾಶ ನೀಡಿದೆ.

ಬಲವಂತದ ಗರ್ಭಧಾರಣೆ ಅಥವಾ ಮಗುವಿಗೆ ಜನ್ಮ ನೀಡುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಅಪ್ರಾಪ್ತ ವಯಸ್ಕರಲ್ಲಿ ಭ್ರೂಣವನ್ನು ಅಂತ್ಯಗೊಳಿಸುವ ಆಯ್ಕೆಯನ್ನು ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ