ವನಪರ್ತಿ, ಮಾರ್ಚ್ 1: ಸಾವು ಯಾವಾಗ.. ಹೇಗೆ.. ಯಾವ ದಿಕ್ಕಿನಿಂದ ಬರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಬಾಳೆಹಣ್ಣು ತಿಂದರೂ ‘ಕಾಲ’ ಕೂಡಿಬಂದರೆ ಸಾವು ನಿಶ್ಚಿತ (Death). ಹಾಯಾಗಿ ನಗುತ್ತಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆಗಳು ಸಾಕಷ್ಟಿವೆ..! ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಿಢೀರ್ ಕುಸಿದು ಬೀಳುವುದೋ.. ಎದುರಿಗೆ ಬರುವ ವಾಹನದ ರೂಪವೋ.. ಅಥವಾ ಏಕಾಏಕಿ ಅನಾರೋಗ್ಯವೋ.. ಈ ದಿನಗಳಲ್ಲಿ ಸಾವು ಯಾವ ರೂಪದಿಂದ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುವುದು ತುಂಬಾ ಕಷ್ಟ. ಕೆಲವೊಮ್ಮೆ ನಾವು ತಿನ್ನಲು ಇಷ್ಟಪಡುವ ಆಹಾರಗಳು ಸಹ ನಮ್ಮ ಎದೆಯಲ್ಲಿ ಸಾವಿನ ಕೂಪಗಳಾಗುತ್ತವೆ. ಇಂತಹದೊಂದು ಘಟನೆ ಇತ್ತೀಚೆಗೆ ವನಪರ್ತಿ ಜಿಲ್ಲೆಯಲ್ಲಿ (Wanaparthy District in Telangana) ನಡೆದಿದೆ. ಒಬ್ಬ ವ್ಯಕ್ತಿ ಬೀದಿ ಬದಿಯಲ್ಲಿದ್ದ ಚಿಕ್ಕ ಬಜ್ಜಿ ಗೂಡಂಗಡಿಯಿಂದ ತನಗೆ ಇಷ್ಟವಾದ ಮೊಟ್ಟೆ ಬಜ್ಜಿ (Egg Bajji) ತೆಗೆದುಕೊಂಡು ತಿನ್ನಲು ಹೋದ. ಅಷ್ಟರಲ್ಲಿ ಅದು ಗಂಟಲಿಗೆ ಸಿಕ್ಕಿಕೊಂಡಿತು. ಅದರಿಂದ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ. ವಿವರ ನೋಡುವುದಾದರೆ..
ತೆಲಂಗಾಣ ರಾಜ್ಯದ ವನಪರ್ತಿ ಜಿಲ್ಲೆಯ ಮದನಪುರಂ ಮಂಡಲದ ಗೋವಿಂದಹಳ್ಳಿಯ ಗೊಲ್ಲ ತಿರುಪತಯ್ಯ (39) ಎಂಬ ವ್ಯಕ್ತಿಗೆ ಬಜ್ಜಿ ಎಂದರೆ ತುಂಬಾ ಇಷ್ಟ. ಬುಧವಾರ ಸಂಜೆ ತಿರುಪತಯ್ಯ ತನ್ನ ಮನೆ ಮುಂದೆ ಮೊಟ್ಟೆ ಬಜ್ಜಿ ತಿನ್ನುತ್ತಾ ಕುಳಿತಿದ್ದ. ಅಷ್ಟರಲ್ಲಿ ಬಜ್ಜಿ ಗಂಟಲಿನಲ್ಲಿ ಸಿಕ್ಕಿಕೊಂಡಿತು. ಅದನ್ನು ಹೊರತರಲು ಯತ್ನಿಸಿದ್ದಾರೆ. ಆದರೆ ಹೊರಗೆ ಬಾರದ ಹಿನ್ನೆಲೆಯಲ್ಲಿ ತಿರುಪತಿ ಉಸಿರುಗಟ್ಟಿ ಕೆಳಗೆ ಬಿದ್ದಿದ್ದಾನೆ.
Also Read: ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ, ಹೆಗಲ ಮೇಲೆ ಹೊತ್ತು ಓಡಿ ಪ್ರಾಣ ಉಳಿಸಿದ ಕಾನ್ಸ್ಟೇಬಲ್
ಪತಿ ಕೆಳಗೆ ಬಿದ್ದಿರುವುದನ್ನು ನೋಡಿದ ಪತ್ನಿ ಸುವರ್ಣ ಅವರು ಬಜ್ಜಿಯನ್ನು ಹೊರಗೆ ತೆಗೆಯಲು ಯತ್ನಿಸಿದ್ದಾರೆ. ಆದರೆ ಅದು ಸಲೀಸಾಗಿ ಬರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಸುತ್ತಮುತ್ತಲಿನವರು ಬಂದು ತಿರುಪತಯ್ಯನ ಕಂಠದಲ್ಲಿ ಸಿಲುಕಿದ್ದ ಬಜ್ಜಿಯನ್ನು ಸ್ವಲ್ಪ ಕಷ್ಟಪಟ್ಟು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಆದಾಗಲೇ ತಡ ಆಗಿತ್ತು. ತಿರುಪತಯ್ಯ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ಪತಿ ಪ್ರಾಣ ಕಳೆದುಕೊಂಡಿದ್ದನ್ನು ಸಹಿಸಲಾಗದೆ ಸುವರ್ಣ ಅವರ ಪತ್ನಿ ರೋದಿಸಿದ್ದಾರೆ. ಇದರಿಂದ ಸ್ಥಳದಲ್ಲಿ ದುರಂತದ ಛಾಯೆ ಆವರಿಸಿದೆ.
ಗುಂಟೂರಿನಲ್ಲಿ ಮತ್ತೊಂದು ರೀತಿಯ ದಾರುಣ: ಟ್ರ್ಯಾಕ್ಟರ್-ಕಾರು ಡಿಕ್ಕಿ.. ಮೂವರ ಸಾವು! ಗುಂಟೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ.
ಗುಂಟೂರು ಜಿಲ್ಲೆಯ ಎಟುಕೂರು ಎಂಬಲ್ಲಿ ಇಂದು ಶುಕ್ರವಾರ ಮುಂಜಾನೆ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಗುಂಟೂರು ಜಿಜಿಎಚ್‌ಗೆ ರವಾನಿಸಿದ್ದಾರೆ. ಈ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಮಂಗಳಗಿರಿಗೆ ಸೇರಿದವರು ಎಂದು ಪೊಲೀಸರು ಗುರುತಿಸಿದ್ದಾರೆ. ಪ್ರಟ್ಟಿಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Fri, 1 March 24