AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಸಿಗಲಿಲ್ಲ ಅವಕಾಶ, ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆದಿಲಾಬಾದ್ ಜಿಲ್ಲೆಯ ಮಂಗುರ್ಲಾ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.

ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಸಿಗಲಿಲ್ಲ ಅವಕಾಶ, ವಿದ್ಯಾರ್ಥಿ ಆತ್ಮಹತ್ಯೆ
ವಿದ್ಯಾರ್ಥಿImage Credit source: India Today
ನಯನಾ ರಾಜೀವ್
|

Updated on: Mar 01, 2024 | 9:03 AM

Share

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳನ್ನು ವಿದ್ಯಾರ್ಥಿಗಳು ಮನಸ್ಸಿಗೆ ತೆಗೆದುಕೊಂಡು ಬಿಡುತ್ತಿದ್ದಾರೆ. ಕೇವಲ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಜೀವವನ್ನೇ ಕಳೆದುಕೊಂಡಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ವಿದ್ಯಾರ್ಥಿಯೊಬ್ಬ ಪರೀಕ್ಷಾ ಹಾಲ್​ಗೆ ತಡವಾಗಿ ಬಂದಿದ್ದ ಹೀಗಾಗಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡಿರಲಿಲ್ಲ. ಆದಿಲಾಬಾದ್ ಜಿಲ್ಲೆಯ ಮಂಗುರ್ಲಾ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಆತ್ಮಹತ್ಯೆ ಪತ್ರವನ್ನು ಬರೆದಿಟ್ಟು ವಿದ್ಯಾರ್ಥಿ ನೀರಾವರಿ ಕಾಲುವೆಗೆ ಹಾರಿದ್ದಾನೆ.

17 ವರ್ಷದ ವಿದ್ಯಾರ್ಥಿ ಬೆಳಗ್ಗೆ 9.15 ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ ಎಂದು ವರದಿಯಾಗಿದೆ, ಆದರೆ ಪರೀಕ್ಷೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯುತ್ತಿತ್ತು.

ವಿದ್ಯಾರ್ಥಿಯು ತನ್ನ ಆತ್ಮಹತ್ಯೆ ಪತ್ರದಲ್ಲಿ ಪರೀಕ್ಷೆ ಕೇಂದ್ರಕ್ಕೆ ತಡವಾಗಿ ತಲುಪಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ತನ್ನ ತಂದೆಗೆ ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ವಿದ್ಯಾಶಿಕ್ಷಕನಿಂದ ಮಾನಹಾನಿ ಮೆಸೇಜ್ ರವಾನೆ; ಎಸ್​ಡಿಎಂ ಶಾಲೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಸಾವು

ವಿದ್ಯಾರ್ಥಿಗಳು ಒಂದು ನಿಮಿಷ ತಡವಾದರೂ ಪರೀಕ್ಷೆಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಇಂಟರ್ ಮೀಡಿಯೇಟ್ ಬೋರ್ಡ್ ಜಾರಿಗೊಳಿಸುತ್ತದೆ. ಬೆಳಗ್ಗೆ 9.30 ರ ಸುಮಾರಿಗೆ ವಿದ್ಯಾರ್ಥಿ ತನ್ನ ಗ್ರಾಮಕ್ಕೆ ಹೋಗಿದ್ದ ಆದರೆ ಮನೆಗೆ ಹಿಂದಿರುಗದೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಅವರ ಕೈಗಡಿಯಾರ ಮತ್ತು ವಾಲೆಟ್ ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ.

ಮತ್ತೊಂದು ಘಟನೆ ಬೆಂಗಳೂರಿನ NTTF ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ, ಎಚ್ಒಡಿ ಕಿರುಕುಳ ಆರೋಪ ನಗರದ ಬಾಗಲಗುಂಟೆ ಬಳಿಯ ಡಿಫೆನ್ಸ್ ಕಾಲೋನಿಯಲ್ಲಿ NTTF ಕಾಲೇಜಿನ ಎಚ್​​ಒಡಿ ಕಿರುಕುಳಕ್ಕೆ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಋಷ್ಯಂತ್ (18) ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇತ ಫೈನಲ್ ಇಯರ್ ಡಿಪ್ಲೋಮಾ ಇನ್ ಮ್ಯಾಕೇನಿಕ್ ಓದುತ್ತಿದ್ದ. ಈ

ವೇಳೆ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ಎಚ್ಒಡಿ ಶಿಜು ಗಂಗಧರ್ ಎಂಬುವವರು ಪ್ರಾಜೆಕ್ಟ್ ವರ್ಕ್​ಗೆ ಸಂಬಂಧ ಪಟ್ಟಂತೆ ‘ನೀನು ನೋಡೊದಕ್ಕೆ ಶವದ ರೀತಿ ಇದೀಯಾ, ನಿನ್ನ ಪ್ರಾಜೆಕ್ಟ ವರ್ಕ್ ಕೂಡ ಹಾಗೆ ಇದೆ ಎಂದು ಬೈದಿದ್ದರಂತೆ.

ಈ ಹಿನ್ನಲೆ ಅವರ ಕಿರುಕುಳಕ್ಕೆ ಬೇಸತ್ತ ಮಗ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಮಗನ ಶವ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ