ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ

|

Updated on: Jan 08, 2024 | 1:57 PM

ಜೂನಿಯರ್ ಎನ್​​ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ಜಗಳಕ್ಕೆ ತೆಲುಗು ದೇಶಂ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯ ಹಿಂದೆ ಯಾರೋ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಮುಂಬರುವ ಸಭೆಗಳಲ್ಲಿ ಸಂಯಮದಿಂದ ವರ್ತಿಸುವಂತೆ ಟಿಡಿಪಿ ಕಾರ್ಯಕರ್ತರಿಗೆ ಪಕ್ಷದ ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ
ಜೂ.ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಸಂಘರ್ಷ
Follow us on

ಹೈದರಾಬಾದ್ ಜನವರಿ 08: ಪಶ್ಚಿಮ ಗೋದಾವರಿ ಜಿಲ್ಲೆಯ (Godavari district) ಅಚಂತಾದಲ್ಲಿ ಟಿಡಿಪಿ (TDP) ಆಯೋಜಿಸಿದ್ದ ಕದಲೀರ ಸಭೆಯಲ್ಲಿ ಗದ್ದಲ ನಡೆದಿದೆ. ಜೂನಿಯರ್ ಎನ್‌ಟಿಆರ್ (Jr NTR )ಅಭಿಮಾನಿಗಳು ಬ್ಯಾನರ್ ಮತ್ತು ಫ್ಲೆಕ್ಸ್ ಹಿಡಿದುವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ಟಿಡಿಪಿ ಕಾರ್ಯಕರ್ತರು ಅವರನ್ನು ತಡೆದರು. ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಮವಾಗಿದ್ದು ಪರಸ್ಪರ ಹಲ್ಲೆ ನಡೆದಿದೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರು ಜಗಳವಾಡಿದ್ದು, ಏಕಾಏಕಿ ಉದ್ವಿಗ್ನತೆ ಉಂಟಾಗಿದೆ. ಇದನ್ನು ತಡೆಯಲು ಟಿಡಿಪಿ ಮುಖಂಡರು ಪ್ರಯತ್ನಿಸಿದರೂ ಟಿಡಿಪ ಕಾರ್ಯಕರ್ತರು ಅಥವಾ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಕೇಳಲಿಲ್ಲ. ಬಹಳ ಕಷ್ಟಪಟ್ಟು ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

ಮತ್ತೊಂದೆಡೆ, ಎನ್‌ಟಿಆರ್‌ ಅವರ ಜಿಲ್ಲೆಯ ತಿರುವುರು ಸಭಾಭವನದಲ್ಲಿ ಜೂನಿಯರ್‌ ಎನ್‌ಟಿಆರ್‌ ಅವರ ಫ್ಲೆಕ್ಸ್ ಗಳು ಸಂಚಲನ ಮೂಡಿಸಿದವು. ಅಭಿಮಾನಿಗಳು ಜೂನಿಯರ್ ಎನ್ ಟಿಆರ್ ಸಿಎಂ ಎಂದು ಬರೆದ ಬ್ಯಾನರ್ ಹಾಗೂ ಬಾವುಟಗಳನ್ನು ಪ್ರದರ್ಶಿಸಿದರು. ಧ್ವಜ ಮತ್ತು ಬ್ಯಾನರ್‌ಗಳನ್ನು ಕಸಿದುಕೊಂಡ ಟಿಡಿಪಿ ಕಾರ್ಯಕರ್ತರು ಅವುಗಳನ್ನು ಪಕ್ಕಕ್ಕೆ ಎಸೆದರು. ಕೆರಳಿದ ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಟಿಡಿಪಿ ಕಾರ್ಯಕರ್ತರ ವರ್ತನೆಯನ್ನು ದೂಷಿಸಿದ್ದಾರೆ.

ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ಜಗಳಕ್ಕೆ ತೆಲುಗು ದೇಶಂ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯ ಹಿಂದೆ ಯಾರೋ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಮುಂಬರುವ ಸಭೆಗಳಲ್ಲಿ ಸಂಯಮದಿಂದ ವರ್ತಿಸುವಂತೆ ಟಿಡಿಪಿ ಕಾರ್ಯಕರ್ತರಿಗೆ ಪಕ್ಷದ ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಧರ್ಮ ದಂಗಲ್; ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಹಾಕಲಾಗಿದ್ದ ಬ್ಯಾನರ್ ತೆರವು

ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು ಅಥವಾ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರ ಸೋಗಿನಲ್ಲಿ ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳಾಗಿರುವ ಕೆಲವರು ಸಭೆಯಲ್ಲಿ ಪಾಲ್ಗೊಂಡು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಎಂ9 ಡಾಟ್ ನ್ಯೂಸ್ ವರದಿ ಮಾಡಿದೆ. ಸ್ವಯಂ ಸೇವಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಆದರೆ ಅವರು ನಿಲ್ಲಿಸಲಿಲ್ಲ. ಚಂದ್ರಬಾಬು ಡಯಾಸ್‌ಗೆ ಬರುತ್ತಿದ್ದಾಗ ವೇದಿಕೆಗೆ ನುಗ್ಗಲು ಯತ್ನಿಸಿದರು. ಅವರು ಏನನ್ನೋ ಮಾಡುತ್ತಿದ್ದಾರೆ ಎಂದು ಗ್ರಹಿಸಿದ ಸ್ವಯಂಸೇವಕರು ಅವರನ್ನು ತಡೆಯಲು ಪ್ರಯತ್ನಿಸಿದರು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Mon, 8 January 24