ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್ ಜೈನ್ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ.
ಇದೆಲ್ಲವೂ ಸಂಜಯ್ ಜೈನ್ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ ಸಂಜಯ್ ಜೈನ್ನ ಒಂದು ನಿವಾಸದ ಬೀರು, ಅಲ್ಮೇರಾಗಳಲ್ಲಿ 2.37 ಕೋಟಿ ರೂಪಾಯಿ ನಗದು ಮತ್ತು 2.89 ಕೋಟಿ ರೂ ಮೌಲ್ಯದ ಆಭರಣಗಳನ್ನು Income Tax Department ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಇದೆಲ್ಲ ಅಕ್ರಮ ಸಂಪತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
Published On - 12:07 pm, Tue, 27 October 20