ತೆರಿಗೆ ವಂಚನೆ: ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ
ಕನೌಜ್‌ನಲ್ಲಿರುವ ತನ್ನ ಎಂಎಲ್‌ಸಿ ಪುಷ್ಪರಾಜ್(MLC Pushpraj) ಅಲಿಯಾಸ್ ಪಂಪಿ ಜೈನ್ ಅವರ ಆವರಣದ ಮೇಲೆ ದಾಳಿ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೊಂಡಿದೆ.
ಲಖನೌ: ತೆರಿಗೆ ವಂಚನೆ (tax evasion)ತನಿಖೆಯ ಭಾಗವಾಗಿ ಉತ್ತರ ಪ್ರದೇಶದಲ್ಲಿ ಸುಗಂಧ ದ್ರವ್ಯ ವ್ಯಾಪಾರಿಗಳು(perfume traders) ಮತ್ತು ಇತರ ಕೆಲವರಿಗೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಶುಕ್ರವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾನ್ಪುರ, ಕನೌಜ್, ರಾಷ್ಟ್ರ ರಾಜಧಾನಿ ಪ್ರದೇಶ (NCR) ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಇಲಾಖೆಯು ಸುಗಂಧ ದ್ರವ್ಯ ವ್ಯಾಪಾರ ಮತ್ತು ಸಂಬಂಧಿತ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಘಟಕಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಯಾವ ವ್ಯಕ್ತಿಗಳ ಆಸ್ತಿ ಮೇಲೆ ದಾಳಿ ನಡೆಸಲಾಗಿದೆ ಎಂಬುದರ ನಿಖರ ಗುರುತುಗಳನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಕನೌಜ್‌ನಲ್ಲಿರುವ ತನ್ನ ಎಂಎಲ್‌ಸಿ ಪುಷ್ಪರಾಜ್(MLC Pushpraj) ಅಲಿಯಾಸ್ ಪಂಪಿ ಜೈನ್ ಅವರ ಆವರಣದ ಮೇಲೆ ದಾಳಿ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೊಂಡಿದೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕನ್ನೌಜ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದದ್ದು “ಬಿಜೆಪಿ ಸರ್ಕಾರ” ದಾಳಿಗಳನ್ನು ಪ್ರಾರಂಭಿಸಿದೆ ಎಂದಿದ್ದಾರೆ.
IT Dept conducting searches at perfume businessman Pushpraj Jain ‘Pampi’ & one more perfume company on intelligence of tax evasion. Searches underway since early morning today at 8 premises including Kanpur, Kannauj, Bombay, Surat, Dindigul (TN). More details awaited: Sources
— ANI UP/Uttarakhand (@ANINewsUP) December 31, 2021
पिछली बार की अपार विफलता के बाद इस बार BJP के परम सहयोगी I.T. ने सपा MLC श्री पुष्प राज जैन और कन्नौज के अन्य इत्र व्यापारियों के यहां पर आखिर छापे मार ही दिए है। डरी BJP द्वारा केंद्रीय एजेंसियों का खुलेआम दुरुपयोग, यूपी चुनावों में आम है।
जनता सब देख रही है, वोट से देगी जवाब।
— Samajwadi Party (@samajwadiparty) December 31, 2021
ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಜೈನ್ ಸಿದ್ಧಪಡಿಸಿದ ‘ಸಮಾಜವಾದಿ ಇತ್ರ್ ’ ಎಂಬ ಸುಗಂಧ ದ್ರವ್ಯವನ್ನು ಯಾದವ್ ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಅಡಿಯಲ್ಲಿನ ತನಿಖಾ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಇತ್ತೀಚೆಗೆ ಕಾನ್ಪುರ ಮತ್ತು ಕನೌಜ್‌ನಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಿ ಸುಗಂಧ ದ್ರವ್ಯ ವ್ಯಾಪಾರಿ ಪೀಯೂಷ್ ಜೈನ್ ಅವರನ್ನು ಬಂಧಿಸಿ 197 ಕೋಟಿ ರೂ. ನಗದು, 26 ಕೆಜಿ ಚಿನ್ನ ಮತ್ತು ಅಪಾರ ಪ್ರಮಾಣದ ಶ್ರೀಗಂಧದ ಎಣ್ಣೆ ವಶ ಪಡಿಸಿಕೊಂಡಿತ್ತು ಐಟಿ ಇಲಾಖೆಯು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ದಾಳಿ ಮತ್ತು ನಗದು ವಶಪಡಿಸಿಕೊಳ್ಳುವಿಕೆಯ ಬೆನ್ನಲ್ಲೇ ಚುನಾವಣೆಗೆ ಒಳಪಟ್ಟಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರವನ್ನು ಉಂಟುಮಾಡಿದೆ. ಬಂಧಿತರು ಯಾದವ್ ಅವರ ನಿಕಟ ಮಿತ್ರ ಎಂದು ಬಿಜೆಪಿ ಹೇಳಿದರೆ, ಆಡಳಿತಾರೂಢ ಪಾಳಯವು ತಪ್ಪಾಗಿ ತನ್ನದೇ ಪಕ್ಷದವನನ್ನು ಬಂಧಿಸಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ. ಕಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜವಾದಿ ಪಕ್ಷವು 2017 ರ ಮೊದಲು ಉತ್ತರ ಪ್ರದೇಶದಾದ್ಯಂತ ಹರಡಿದ ಭ್ರಷ್ಟಾಚಾರದ ಸುಗಂಧವನ್ನು ಎಲ್ಲರೂ ನೋಡಬಹುದು ಎಂದು ಕುಟುಕಿದ್ದರು.
ಇದನ್ನೂ ಓದಿ: ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ; ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ
Published On - 1:05 pm, Fri, 31 December 21