ಆಗಸ್ಟ್ 15ರಂದು ದೇಶದಲ್ಲೆಡೆ 76ನೇ ಸ್ವಾತಂತ್ರೋತ್ಸವದ (Independence Day 2023) ಹಬ್ಬ ನಡೆಯಲಿದೆ. ಸ್ವಾತಂತ್ರೋತ್ಸವ ಅಂದರೆ ತ್ಯಾಗ ಬಲಿದಾನವನ್ನ ಸ್ಮರಿಸುವ ದಿನ. ಕನಸಿನ ಭಾರತದ ತೇರನ್ನ ಎಳೆಯುವ ಸುದಿನ. 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತ್ತು. ಈ ಶುಭ ದಿನದಂದು ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ.
ಭಾರತದ ರಾಷ್ಟ್ರೀಯ ಧ್ವಜ ಅಥವಾ ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ತ್ರಿವರ್ಣ ಧ್ವಜವು ಭಾರತದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಭಾರತೀಯರಾದ ನಾವು ತ್ರಿವರ್ಣ ಧ್ವಜದ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಂಡಿರಬೇಕು.
ಪ್ರಪಂಚದ ಪ್ರತಿಯೊಂದು ಸ್ವತಂತ್ರ ರಾಷ್ಟ್ರವೂ ತನ್ನದೇ ಆದ ಧ್ವಜವನ್ನು ಹೊಂದಿದ್ದು, ಅದು ಸ್ವತಂತ್ರದ ಸಂಕೇತವಾಗಿದೆ. ಆಗಸ್ಟ್ 15, 1947 ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಕೆಲವು ದಿನಗಳ ಮೊದಲು ಜುಲೈ 22, 1947 ರಂದು ನಡೆದ ಸಂವಿಧಾನ ಸಭೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಪ್ರಸ್ತುತ ರೂಪದಲ್ಲಿ ಅಂಗೀಕರಿಸಲ್ಪಟ್ಟಿತು. 1916 ರಲ್ಲಿ, ಪಿಂಗಲಿ ವೆಂಕಯ್ಯ ಎಂಬ ಲೇಖಕನು ಖಾದಿ ಬಟ್ಟೆಯಿಂದ ಮೊದಲ ಬಾರಿಗೆ ಧ್ವಜವನ್ನು ತಯಾರು ಮಾಡಿದರು.
ನಮ್ಮ ತ್ರಿವರ್ಣ ಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು. ಮಧ್ಯ ಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕ ಚಕ್ರವಿದೆ. ಧ್ವಜದ ಅಗಲ ಮತ್ತು ಅದರ ಉದ್ದದ 2: 3 ಅನುಪಾತದಲ್ಲಿದೆ.
ಇದನ್ನೂ ಓದಿ: Independence Day 2023: ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ದ ಬಗ್ಗೆ ತಿಳಿಯಬೇಕಾದ ವಿಷಯಗಳು ಮತ್ತು ಗೀತೆಯ ಅರ್ಥ
ಕೇಸರಿ: ಇದು ಧೈರ್ಯ, ನಿಸ್ವಾರ್ಥತೆ ಮತ್ತು ಶಕ್ತಿಯ ಸಂಕೇತವಾಗಿದೆ.
ಬಿಳಿ: ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಈ ಬಣ್ಣವು ದೇಶದಲ್ಲಿ ಸಂತೋಷ ಮತ್ತು ಶಾಂತಿಯ ಉಪಯುಕ್ತತೆಯನ್ನು ತೋರಿಸುತ್ತದೆ.
ಇದನ್ನೂ ಓದಿ: Independence Day 2023: ಸ್ವಾತಂತ್ರ್ಯ ದಿನಾಚರಣೆಯ ರಜಾದಿನದಲ್ಲಿ ರುಚಿಯಾದ ಆಹಾರ ಸವಿಯಲು ಈ ತಾಣಗಳಿಗೆ ಭೇಟಿ ನೀಡಿ
ಹಸಿರು: ಅಶ್ವದಳ, ಬೆಳವಣಿಗೆ ಮತ್ತು ಫಲವತ್ತತೆಯ ಸಂಕೇತವಾಗಿದೆ. ಜೊತೆಗೆ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 pm, Sat, 12 August 23