Sign In

By signing in or creating an account, you agree with Associated Broadcasting Company's Terms & Conditions and Privacy Policy.

Seema Haider: ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಿಸಿ, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದ ಸೀಮಾ ಹೈದರ್

ತನ್ನ ಪ್ರೀತಿಯನ್ನರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಂದು ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಅದೇ ಸಮಯದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ ವಿರೋಧಿ ಘೋಷಣೆಯನ್ನು ಕೂಗಿದ್ದಾರೆ.

Seema Haider: ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಿಸಿ, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದ ಸೀಮಾ ಹೈದರ್
ಸೀಮಾ ಹೈದರ್
Follow us
ನಯನಾ ರಾಜೀವ್
|

Updated on:Aug 15, 2023 | 11:08 AM

ತನ್ನ ಪ್ರೀತಿಯನ್ನರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಂದು ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ(Independence Day) ಆಚರಿಸಿದ್ದಾರೆ. ಅದೇ ಸಮಯದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ(Pakistan) ವಿರೋಧಿ ಘೋಷಣೆಯನ್ನು ಕೂಗಿದ್ದಾರೆ. ಏತನ್ಮಧ್ಯೆ, ಸ್ವಾತಂತ್ರ್ಯ ದಿನದಂದು, ಸೀಮಾ ಅವರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡರು ಮತ್ತು ಪತಿ ಸಚಿನ್ ಅವರೊಂದಿಗೆ ನೋಯ್ಡಾದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಮಯದಲ್ಲಿ, ಅವರು ತ್ರಿವರ್ಣ ಸೀರೆಯನ್ನು ಧರಿಸಿದ್ದರು.

ಅದೇ ಸಮಯದಲ್ಲಿ, ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಸೀಮಾ ಅವರು ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ, ಇದಕ್ಕೂ ಮುನ್ನ ಧ್ವಜಾರೋಹಣ ಮಾಡುವಾಗ ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಗಿದ್ದರು.

ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿದ ಸೀಮಾ ಹೈದರ್

ಇದಕ್ಕೂ ಮುನ್ನ ಸೀಮಾ ಹೈದರ್ ಅವರು ತಮ್ಮ ವಕೀಲ ಎಪಿ ಸಿಂಗ್ ಅವರ ಸಮ್ಮುಖದಲ್ಲಿ ಮನೆಯ ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಮತ್ತಷ್ಟು ಓದಿ:ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಚಾನ್ಸ್​

ಅಲ್ಲಿ ಸುತ್ತಮುತ್ತಲಿನ ಮನೆಗಳ ಜನರು ತಮ್ಮ ಮನೆಯ ಛಾವಣಿಯ ಮೇಲೆ ಜಮಾಯಿಸಿ ಈ ಅಭಿಯಾನದ ಭಾಗವಾದರು. ಇದೀಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಸೀಮಾ ಪಾಕಿಸ್ತಾನ್ ಮುರ್ದಾಬಾದ್ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.

ಸೀಮಾಳ ಮಡಿಲಲ್ಲಿ ಪುಟ್ಟ ಹುಡುಗಿಯೊಬ್ಬಳು ಕಾಣಿಸಿಕೊಂಡಿದ್ದಾಳೆ, ಪಾಕಿಸ್ತಾನ ಮುರ್ದಾಬಾದ್ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದಾಳೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.

ಕಳೆದ ಕೆಲವು ದಿನಗಳಿಂದ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮೊನ್ನೆ ಭಾನುವಾರವೂ ಸೀಮಾ ಹೈದರ್ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದ್ದರು.

2019 ರಲ್ಲಿ PUBG ಗೇಮ್ ಆಡುವಾಗ ಸೀಮಾ ಸಚಿನ್ ಜೊತೆ ಸಂಪರ್ಕಕ್ಕೆ ಬಂದಿದ್ದಾಳೆ, ನಂತರ ಇಬ್ಬರ ನಡುವೆ ಸಂಭಾಷಣೆ ಹೆಚ್ಚಾಗಿತ್ತು, ಪ್ರೀತಿ ಮೊಳಕೆವೊಡೆದಿತ್ತು, ಬಳಿಕ ಮದುವೆಯಾಗಲು ನಿರ್ಧರಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:06 am, Tue, 15 August 23