Independence Day 2023: 2014ರಿಂದ 2023ರವರೆಗೆ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದಂದು ತೊಟ್ಟ ಉಡುಗೆಗಳ ಬಗೆಗೆ ಒಂದು ನೋಟ

Narendra Modi Outfit: ಭಾರತವು ತನ್ನ 77ನೇ ಸ್ವಾತಂತ್ರ್ಯ ದಿನವನ್ನು ಇಂದು ಆಚರಿಸಿಕೊಳ್ಳುತ್ತಿದೆ, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿರಿಸಿದ್ದಾರೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಧರಿಸಿರುವ ಬಟ್ಟೆಯ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಹಾಗಾದರೆ 2014 ರಿಂದ 2023ರವರೆಗೆ ಸ್ವಾತಂತ್ರ್ಯ ದಿನದಂದು ಮೋದಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿದ್ದರು ಎನ್ನುವ ಮಾಹಿತಿ ಇಲ್ಲಿದೆ.

ನಯನಾ ರಾಜೀವ್
|

Updated on: Aug 15, 2023 | 9:48 AM

ನರೇಂದ್ರ ಮೋದಿ

2013ರಲ್ಲಿ 77ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಬಹುವರ್ಣದ ರಾಜಸ್ಥಾನಿ ಶೈಲಿಯ ಪೇಟವನ್ನು ಧರಿಸಿದ್ದರು. ಜತೆಗೆ ಬಿಳಿ ಕುರ್ತಾ ಜತೆಗೆ ಕಪ್ಪು ನೀಲಿ ಬಣ್ಣದ ಕೋಟ್​ ಅನ್ನು ಧರಿಸಿದ್ದರು.

1 / 10
ನರೇಂದ್ರ ಮೋದಿ

2022ರಲ್ಲಿ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣಕ್ಕಾಗಿ ಪ್ರಧಾನಿ ಮೋದಿ ಅವರು ತ್ರಿವರ್ಣ ಧ್ವಜವನ್ನು ಮುದ್ರಿಸಿದ ಬಿಳಿ ಪೇಟವನ್ನು ಧರಿಸಿದ್ದರು. ಪೇಟದ ಜೊತೆಗೆ ಸಾಂಪ್ರದಾಯಿಕ ಬಿಳಿ ಕುರ್ತಾ ಪೈಜಾಮ ಸೆಟ್ ಮತ್ತು ನೀಲಿ ನೆಹರೂ ಕೋಟ್ ಧರಿಸಿದ್ದರು.

2 / 10
ನರೇಂದ್ರ ಮೋದಿ

ಪ್ರಧಾನಿ ಮೋದಿ, 2021 ರಲ್ಲಿ, ಕೇಸರಿ ಪೇಟವನ್ನು ಧರಿಸಿದ್ದರು, ಬಿಳಿ ಬಣ್ಣದ ಕುರ್ತಾಗೆ ನೀಲಿ ಬಣ್ಣದ ಕೋಟ್ ಧರಿಸಿದ್ದರು.

3 / 10
ನರೇಂದ್ರ ಮೋದಿ

2020ರಲ್ಲಿ ಕೋವಿಡ್ -19 ಸಂದರ್ಭದಲ್ಲಿ, ಪಿಎಂ ಮೋದಿ ಅವರು ಕೇಸರಿ ಮತ್ತು ಬೀಜ್ ಸಫಾವನ್ನು ಆರಿಸಿಕೊಂಡರು ಮತ್ತು ಅದನ್ನು ಪೇಸ್ಟ್ ಮತ್ತು ನೀಲಿಬಣ್ಣದ ಶೇಡ್ ಇರುವ ಅರ್ಧ ತೋಳಿನ ಕುರ್ತಾ ಧರಿಸಿದ್ದರು.

4 / 10
ನರೇಂದ್ರ ಮೋದಿ

2019ರಲ್ಲಿ 73 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ರಾಜಸ್ಥಾನದಿಂದ ರೋಮಾಂಚಕ ಹಳದಿ ಪೇಟದಲ್ಲಿ ಕಾಣಿಸಿಕೊಂಡರು. ಅದರೊಂದಿಗೆ, ಅವರು ಅರ್ಧ ತೋಳಿನ ಕುರ್ತಾ ಧರಿಸಿದ್ದರು.

5 / 10
ನರೇಂದ್ರ ಮೋದಿ

2018ರಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಕೇಸರಿ ಪೇಟ ಧರಿಸಿದ್ದರು. ಜತೆ ಬಿಳಿ ಕುರ್ತಾವನ್ನು ತೊಟ್ಟಿದ್ದರು.

6 / 10
ನರೇಂದ್ರ ಮೋದಿ

2017ರಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಬಣ್ಣದ ಕ್ರಿಸ್‌ಕ್ರಾಸ್ಡ್ ಗೋಲ್ಡನ್ ಲೈನ್‌ಗಳೊಂದಿಗೆ ಪ್ರಕಾಶಮಾನವಾಗಿ ಕಾಣುವ ಹಳದಿ ಪೇಟದಲ್ಲಿ ಕಾಣಿಸಿಕೊಂಡರು.

7 / 10
ನರೇಂದ್ರ ಮೋದಿ

2016 ರಲ್ಲಿ, ಪಿಎಂ ಮೋದಿ ಗುಲಾಬಿ, ಕೆಂಪು ಮತ್ತು ಹಳದಿ ಶೇಡ್​ ಇರುವ ಪೇಟವನ್ನು ಧರಿಸಿದ್ದರು. ಅದರ ಜತೆ ಬಿಳಿ ಕುರ್ತಾವನ್ನು ಕೂಡ ಧರಿಸಿದ್ದರು.

8 / 10
ನರೇಂದ್ರ ಮೋದಿ

2015ರಲ್ಲಿ 69 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ಕೆಂಪು ಮತ್ತು ನೀಲಿ ಮಾದರಿಯ ಹಳದಿ ಪೇಟವನ್ನು ಧರಿಸಿದ್ದರು. ಅವರು ಅದನ್ನು ಬೀಜ್ ಕುರ್ತಾ ಮತ್ತು ಜಾಕೆಟ್‌ನೊಂದಿಗೆ ತುಂಬಾ ಸುಂದರವಾಗಿ ಕಾಣಿಸುತ್ತಿತ್ತು.

9 / 10
ನರೇಂದ್ರ ಮೋದಿ

2014 ರಲ್ಲಿ ಪ್ರಧಾನಿ ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಜೋಧಪುರಿ ಬಂಧೇಜ್ ಪೇಟವನ್ನು ಧರಿಸಿದ್ದರು, ಗಾಢ ಕೆಂಪು ಬಣ್ಣದಲ್ಲಿತ್ತು, ಅದರಲ್ಲಿ ಹಸಿರು ಬಣ್ಣವೂ ಕೂಡ ಇತ್ತು.

10 / 10
Follow us