ದೆಹಲಿ ಜೂನ್ 25: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನೀಟ್ ಪರೀಕ್ಷೆಯನ್ನು (NEET-PG 2024) ರದ್ದುಗೊಳಿಸಬೇಕೆಂಬ ಬೇಡಿಕೆಗಳ ನಡುವೆಯೇ ಬಿಹಾರದ (Bihar) ಪೂರ್ಣೆಯಾದಿಂದ ಗೆದ್ದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (Pappu Yadav) ಅವರು 18 ನೇ ಲೋಕಸಭೆಯ ಸದಸ್ಯರಾಗಿ “RENEET” ಎಂದು ಬರೆದ ಟೀ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಾದವ್ ಅವರು ತಮ್ಮ ಪ್ರಮಾಣವಚನದ ನಂತರ ಹಲವಾರು ಘೋಷಣೆಗಳನ್ನು ಕೂಗಿದ್ದು, ಸಂಸತ್ನಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ನೀಟ್ ಮರು ಪರೀಕ್ಷೆ , ಬಿಹಾರಕ್ಕೆ ವಿಶೇಷ ಸ್ಥಾನಮಾನ, ಸೀಮಾಂಚಲ್ ಜಿಂದಾಬಾದ್, ಮಾನವತಾವಾದ್ ಜಿಂದಾಬಾದ್, ಭೀಮ್ ಜಿಂದಾಬಾದ್, ಸಂವಿಧಾನ್ ಜಿಂದಾಬಾದ್ ಎಂದು ಅವರು ಘೋಷಣೆ ಕೂಗಿದ್ದಾರೆ.
ಆಡಳಿತಾರೂಢ ಸಮ್ಮಿಶ್ರ ಶಾಸಕರು ತಮ್ಮ ಅಸಮ್ಮತಿ ವ್ಯಕ್ತಪಡಿಸುತ್ತಿದ್ದಂತೆ, ಯಾದವ್, “ನಾನು ಆರು ಬಾರಿ ಸಂಸದನಾಗಿದ್ದೇನೆ. ನೀವು ನನಗೆ ಕಲಿಸುತ್ತಿದ್ದೀರಾ? ನೀವು (ಇತರರ) ಅನುಕಂಪದಿಂದ ಗೆದ್ದಿದ್ದೀರಿ. ನಾನು ಏಕಾಂಗಿಯಾಗಿ ಹೋರಾಡುತ್ತೇನೆ ಎಂದಿದ್ದಾರೆ.
ಪಪ್ಪು ಯಾದವ್ ಪ್ರಮಾಣ ವಚನ
#WATCH | Independent MP from Bihar’s Purnea, Pappu Yadav wears a t-shirt with the words ‘ReNEET’ on it as he takes oath as a member to the 18th Lok Sabha and concludes his oath by saying, “Re-NEET, special status for Bihar, Seemanchal Zindabad, Manavtavaad Zindabad, Bhim… pic.twitter.com/UYuwp82ypQ
— ANI (@ANI) June 25, 2024
ಪಪ್ಪು ಯಾದವ್ ಅವರು ತಮ್ಮ ಜನ ಅಧಿಕಾರ ಪಕ್ಷವನ್ನು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು. ಆದರೆ ಮಿತ್ರಪಕ್ಷ ಆರ್ಜೆಡಿ ಏಕಪಕ್ಷೀಯವಾಗಿ ಜೆಡಿ(ಯು) ಶಾಸಕಿ ಬೀಮಾ ಭಾರ್ತಿ ಅವರ ಉಮೇದುವಾರಿಕೆಯನ್ನು ಘೋಷಿಸಿದಾಗ ಪೂರ್ಣೆಯಾದಿಂದ ಸ್ಪರ್ಧಿಸುವ ಅವರ ಭರವಸೆಯು ವಿಫಲವಾಯಿತು. ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 23 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಾರ್ತಿ ಮೂರನೇ ಸ್ಥಾನ ಗಳಿಸಿ ಠೇವಣಿ ಕಳೆದುಕೊಂಡರು. ಯಾದವ್ ಅವರು 1990 ರ ದಶಕದಲ್ಲಿ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
18ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವೂ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿವಿಧ ಘೋಷಣೆಗಳನ್ನು ಕೂಗಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಹಲವು ಸಂಸದರು ಜೈ ಹಿಂದ್, ಜೈ ಮಹಾರಾಷ್ಟ್ರ, ಜೈ ಭೀಮ್ ಹಾಗೂ ಜೈ ಶಿವಾಜಿ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ:Asaduddin Owaisi: ಸದನದಲ್ಲಿ ಜೈ ಭೀಮ್, ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಅಸಾದುದ್ದೀನ್ ಓವೈಸಿ; ವಿಡಿಯೋ ವೈರಲ್
ಕಾಂಗ್ರೆಸ್‌ನ ಹೊರ ಮಣಿಪುರ ಸಂಸದ ಆಲ್‌ಫ್ರೆಡ್ ಎಸ್ ಆರ್ಥರ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು “ಮಣಿಪುರ ಮೇ ನ್ಯಾಯ ದಿಲಾಯೆ, ದೇಶ್ ಬಚಾಯಿಯೇ” ಎಂದು ಹೇಳಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ನಂತರ ಅಸಾದುದ್ದೀನ್ ಓವೈಸಿ, ಜೈ ಭೀಮ್, ಜೈ ತೆಲಂಗಾಣ ಮತ್ತು ಜೈ ಪ್ಯಾಲೆಸ್ತೀನ್ ಘೋಷಣೆಗಳನ್ನು ಕೂಗಿದ್ದಾರೆ.ಹಲವು ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್, ಓವೈಸಿ ಅವರು ಆಕ್ಷೇಪಾರ್ಹವಾಗಿ ಏನಾದರೂ ಹೇಳಿದ್ದರೆ ಅದನ್ನು ಕಲಾಪದ ದಾಖಲೆಯಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Tue, 25 June 24