ಸನಾತನ ಧರ್ಮವನ್ನು ಅವಮಾನಿಸಿದ್ದಕ್ಕೆ ಜನರು ಸಿಟ್ಟಾದ ಕಾರಣ ‘ಇಂಡಿಯಾ’ದ ಮೊದಲ ರ‍್ಯಾಲಿ ರದ್ದು: ಬಿಜೆಪಿ

|

Updated on: Sep 16, 2023 | 5:06 PM

ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಜನರು ಕೋಪಗೊಂಡಿದ್ದರಿಂದ ಇಂಡಿಯಾ ಮೈತ್ರಿಕೂಟವು ತನ್ನ ಮೊದಲ ರ‍್ಯಾಲಿಯನ್ನು ರದ್ದುಗೊಳಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಸಾರ್ವಜನಿಕರು ಸಿಟ್ಟಾಗಿದ್ದಾರೆ. ಸನಾತನ ಧರ್ಮವನ್ನು ಅವಮಾನಿಸಲಾಗಿದೆ. ಅದನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯಲಾಯಿತು, ಸನಾತನ ಧರ್ಮದ ಈ ಅವಮಾನವನ್ನು ಮಧ್ಯಪ್ರದೇಶದ ಜನರು ಸಹಿಸುವುದಿಲ್ಲ, ಅವರು ನಮ್ಮ ನಂಬಿಕೆಗೆ ಧಕ್ಕೆ ತಂದಿದ್ದಾರೆ

ಸನಾತನ ಧರ್ಮವನ್ನು ಅವಮಾನಿಸಿದ್ದಕ್ಕೆ ಜನರು ಸಿಟ್ಟಾದ ಕಾರಣ ಇಂಡಿಯಾದ ಮೊದಲ ರ‍್ಯಾಲಿ ರದ್ದು: ಬಿಜೆಪಿ
ಶಿವರಾಜ್ ಸಿಂಗ್ ಚೌಹಾಣ್
Follow us on

ಭೋಪಾಲ್ ಸೆಪ್ಟೆಂಬರ್ 16: ಅಕ್ಟೋಬರ್ ಮೊದಲ ವಾರದಲ್ಲಿ ಮಧ್ಯಪ್ರದೇಶದ (Madhya Pradesh)ರಾಜಧಾನಿ ಭೋಪಾಲ್‌ನಲ್ಲಿ (Bhopal) ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ (INDIA alliance) ಉದ್ದೇಶಿತ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ನ ಹಿರಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಇಂದು (ಶನಿವಾರ) ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಇಂಡಿಯಾ ಮೈತ್ರಿಕೂಟದ ಇತರ ಪಾಲುದಾರರೊಂದಿಗೆ ರ‍್ಯಾಲಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಹೇಳಿದರು. ಆದಾಗ್ಯೂ ರ‍್ಯಾಲಿ ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬುದರ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಜನರು ಕೋಪಗೊಂಡಿದ್ದರಿಂದ ಇಂಡಿಯಾ ಮೈತ್ರಿಕೂಟವು ತನ್ನ ಮೊದಲ ರ‍್ಯಾಲಿಯನ್ನು ರದ್ದುಗೊಳಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಸಾರ್ವಜನಿಕರು ಸಿಟ್ಟಾಗಿದ್ದಾರೆ. ಸನಾತನ ಧರ್ಮವನ್ನು ಅವಮಾನಿಸಲಾಗಿದೆ. ಅದನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯಲಾಯಿತು, ಸನಾತನ ಧರ್ಮದ ಈ ಅವಮಾನವನ್ನು ಮಧ್ಯಪ್ರದೇಶದ ಜನರು ಸಹಿಸುವುದಿಲ್ಲ, ಅವರು ನಮ್ಮ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಇದು ಇಲ್ಲಿ ನಡೆಯುವುದಿಲ್ಲ ಎಂಬುದನ್ನು ಇಂಡಿಯಾ ಮೈತ್ರಿ ಅರ್ಥಮಾಡಿಕೊಳ್ಳಬೇಕು. ಮಧ್ಯ ಪ್ರದೇಶದ ಜನರು ಸಿಟ್ಟಿಗೆದ್ದಿದ್ದಾರೆ. ಇದರಿಂದ ಭಯಗೊಂಡ ಇಂಡಿಯಾ ಮೈತ್ರಿ ತಮ್ಮ ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ. ಸಾರ್ವಜನಿಕರ ಕೋಪವು ಇಂಡಿ ಬ್ಲಾಕ್ ಮತ್ತು ಕಾಂಗ್ರೆಸ್ ವಿರುದ್ಧವಾಗಿದೆ, ಸಾರ್ವಜನಿಕರು ಅವರನ್ನು ಬಿಡುವುದಿಲ್ಲ  ಎಂದ ಚೌಹಾಣ್ ಮೈತ್ರಿಕೂಟದ ನಾಯಕತ್ವದಲ್ಲಿ ಬಲವಿಲ್ಲ ಎಂದಿದ್ದಾರೆ.


ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಚೌಹಾಣ್, ಆ ಪಕ್ಷದೊಳಗೆ ಸಾಕಷ್ಟು ಗೊಂದಲಗಳಿವೆ. ಪೋಸ್ಟರ್‌ಗಳಲ್ಲಿ ಯಾರ ಫೋಟೋವನ್ನು ಸೇರಿಸಬೇಕು ಎಂಬುದರ ಬಗ್ಗೆ ಅವರು ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿಯಲ್ಲಿ ಎಲ್ಲರೂ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಚುನಾವಣೆಗೆ ಸಿದ್ಧವಾಗಿರುವ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ತಮ್ಮ ಮೊದಲ ಜಂಟಿ ಸಾರ್ವಜನಿಕ ಸಭೆಯನ್ನು ನಡೆಸಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿತ್ತು. ಅಷ್ಟೇ ಅಲ್ಲದೆ ಘಟಕ ಪಕ್ಷಗಳು ಸೀಟು ಹಂಚಿಕೆಯ ಮಾತುಕತೆಯನ್ನು ಆದಷ್ಟು ಬೇಗ ಪ್ರಾರಂಭಿಸುತ್ತವೆ ಎಂದು ಹೇಳಿತ್ತು. ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯು ದೆಹಲಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದಿತ್ತು.

ಜನ ಆಕ್ರೋಶ ಯಾತ್ರೆ ಮಾಡಲಿದೆ ಕಾಂಗ್ರೆಸ್

ಕಮಲ್ ನಾಥ್ ಮತ್ತು ಸುರ್ಜೆವಾಲಾ ಅವರು ಭೋಪಾಲ್‌ನಲ್ಲಿ ತಮ್ಮ ಪಕ್ಷದ ರಾಜ್ಯಾದ್ಯಂತ ‘ಜನ ಆಕ್ರೋಶ ಯಾತ್ರೆ’ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯಂದು ಕಾಂಗ್ರೆಸ್‌ನ ಏಳು ಜನ ಆಕ್ರೋಶ ಯಾತ್ರೆಗಳು ಪ್ರಾರಂಭವಾಗಲಿವೆ ಎಂದು ಪಕ್ಷ ತಿಳಿಸಿದೆ. ಇದು 15 ದಿನಗಳಲ್ಲಿ ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಲ್ಲಿ 11,400 ಕಿಲೋಮೀಟರ್ ಕ್ರಮಿಸಲಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಡಾ ಗೋವಿಂದ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಯಾತ್ರೆಗಳನ್ನು ಮುನ್ನಡೆಸಲಿದ್ದಾರೆ.

ಮಾಜಿ ಕೇಂದ್ರ ಸಚಿವರಾದ ಅರುಣ್ ಯಾದವ್, ಕಾಂತಿಲಾಲ್ ಭುರಿಯಾ, ಸುರೇಶ್ ಪಚೌರಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಕಮಲೇಶ್ವರ್ ಪಟೇಲ್, ಮಾಜಿ ಸಂಸದ ಜೀತು ಪಟ್ವಾರಿ ಮತ್ತು ಮಾಜಿ ಲೋಪಿ ಅಜಯ್ ಸಿಂಗ್ ‘ರಾಹುಲ್’ ಯಾತ್ರೆಗಳನ್ನು ಮುನ್ನಡೆಸುವ ಇತರ ನಾಯಕರು.

ಇದನ್ನೂ ಓದಿ: ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ, ಧರ್ಮ ಬೇರೆ ರಿಲೀಜಿಯನ್ ಬೇರೆ: ಆರ್​​ಎಸ್​​ಎಸ್​​

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗೆ, ಮಧ್ಯಪ್ರದೇಶದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಕಮಲ್ ನಾಥ್ ಕಡೆಗೆ ತೋರಿಸಿದರು. ಕಮಲ್ ನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದನ್ನು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸಿಡಬ್ಲ್ಯೂಸಿ ನಿರ್ಧರಿಸುತ್ತದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ