ಅಲಾಸ್ಕದಲ್ಲಿ ಭಾರತ -ಅಮೆರಿಕ ಜಂಟಿ ಸಮರಾಭ್ಯಾಸ ಕಬಡ್ಡಿ, ಸ್ನೋಬಾಲ್ ಫೈಟ್​​ನೊಂದಿಗೆ ಆರಂಭ

Yudh Abhyas ಈ ಸಮರಾಭ್ಯಾಸವು ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಹಕಾರದ ಮತ್ತೊಂದು ಹೆಜ್ಜೆಯಾಗಿದೆ. ಎರಡು ಸೈನ್ಯಗಳ ನಡುವೆ ತಿಳುವಳಿಕೆ, ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ

ಅಲಾಸ್ಕದಲ್ಲಿ ಭಾರತ -ಅಮೆರಿಕ ಜಂಟಿ ಸಮರಾಭ್ಯಾಸ ಕಬಡ್ಡಿ, ಸ್ನೋಬಾಲ್ ಫೈಟ್​​ನೊಂದಿಗೆ ಆರಂಭ
ಕಬಡ್ಡಿ ಆಡಿ ಸಮರಾಭ್ಯಾಸ ಆರಂಭಿಸಿದ ಯೋಧರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2021 | 5:20 PM

ಅಲಾಸ್ಕ: ಭಾರತ ಮತ್ತು ಅಮೆರಿಕ ಭಾನುವಾರ ತಮ್ಮ “ಯುದ್ಧ ಅಭ್ಯಾಸ್” (Yudh Abhyas) ಸಮರಾಭ್ಯಾಸವನ್ನು  ಅಲಾಸ್ಕದಲ್ಲಿ ಆರಂಭಿಸಿದ್ದು, ಎರಡೂ ಕಡೆಯಿಂದ 300 ಕ್ಕೂ ಹೆಚ್ಚು ಸೈನಿಕರು ತರಬೇತಿಯಲ್ಲಿ ಭಾಗವಹಿಸಿದ್ದಾರೆ. “ಐಸ್-ಬ್ರೇಕಿಂಗ್ ಸೆಷನ್” ನ ಭಾಗವಾಗಿ ಯೋಧರು ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದು, ಆಂಕರೇಜ್​​ನ ಜಾಯಿಂಟ್ ಬೇಸ್ ಎಲ್ಮೆಂಡೋರ್ಫ್ ರಿಚರ್ಡ್ಸನ್ ನಲ್ಲಿ ತಮಾಷೆಯಾಗಿ ಸ್ನೋ ಬಾಲ್ ಫೈಟ್ ಆಡಿದ್ದಾರೆ. “ಯುದ್ಧ ಅಭ್ಯಾಸ್” ಎರಡು ಸೇನೆಗಳ ನಡುವೆ ದೀರ್ಘಾವಧಿಯ ಜಂಟಿ ಮಿಲಿಟರಿ ತರಬೇತಿ ಮತ್ತು ರಕ್ಷಣಾ ಸಹಕಾರದ ಪ್ರಯತ್ನವಾಗಿದೆ. ಹಿಂದಿನ ಆವೃತ್ತಿಯು ಫೆಬ್ರವರಿಯಲ್ಲಿ ಬಿಕನೇರ್‌ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆಯಿತು.

15 ದಿನಗಳ ಸುದೀರ್ಘ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಪದಾತಿದಳ ಬೆಟಾಲಿಯನ್ ಗುಂಪಿನ 350 ಸಿಬ್ಬಂದಿಯನ್ನು ಒಳಗೊಂಡಿದೆ.

“ಈ ಸಮರಾಭ್ಯಾಸವು ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಹಕಾರದ ಮತ್ತೊಂದು ಹೆಜ್ಜೆಯಾಗಿದೆ. ಎರಡು ಸೈನ್ಯಗಳ ನಡುವೆ ತಿಳುವಳಿಕೆ, ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ, “ಎಂದು ಸೇನೆ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ-ಯುಎಸ್ ರಕ್ಷಣಾ ಬಾಂಧವ್ಯಗಳು ಹೆಚ್ಚುತ್ತಿವೆ. ಜೂನ್ 2016 ರಲ್ಲಿ ಯುಎಸ್ ಭಾರತವನ್ನು “ಪ್ರಮುಖ ರಕ್ಷಣಾ ಪಾಲುದಾರ” ಎಂದು ಘೋಷಿಸಿತು. ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳು ಪ್ರಮುಖ ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿವೆ, ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಮ್ ಆಫ್ ಅಗ್ರಿಮೆಂಟ್ (LEMOA) ಸೇರಿದಂತೆ 2016 ರಲ್ಲಿ ತಮ್ಮ ಸೇನಾಪಡೆಗಳು ಪರಸ್ಪರ ನೆಲೆಗಳನ್ನು ದುರಸ್ತಿ, ಪೂರೈಕೆ ಮತ್ತು ಸಹಕಾರಕ್ಕೆ ಬಳಸಿಕೊಳ್ಳುತ್ತವೆ.

ಇದನ್ನೂ ಓದಿ:Kerala Floods ಪ್ರವಾಹದ ನಡುವೆ ಬಸ್ ಚಲಾಯಿಸಿದ ಕೇರಳ ಆರ್​​ಟಿಸಿ ಚಾಲಕ ಅಮಾನತು; ತಬಲಾ ನುಡಿಸುವ ವಿಡಿಯೊದೊಂದಿಗೆ ಪ್ರತಿಕ್ರಿಯಿಸಿದ ಚಾಲಕ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ