Ladakh Crisis: ಲಡಾಖ್ ಬಿಕ್ಕಟ್ಟಿನ ಇತ್ಯರ್ಥಕ್ಕೆ ಭಾರತ, ಚೀನಾ ಒಪ್ಪಿಗೆ: ಬೀಜಿಂಗ್

|

Updated on: Apr 25, 2023 | 3:28 PM

ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡುವುದರ ಜೊತೆಗೆ ಪೂರ್ವ ಲಡಾಖ್‌ನಲ್ಲಿನ ದೀರ್ಘಕಾಲದ ಬಿಕ್ಕಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಇತ್ಯರ್ಥ ಮಾಡುವಂತೆ ಮತ್ತು ಅದಕ್ಕೊಂದು ವೇಗವನ್ನು ನೀಡುವಂತೆ ಎರಡು ದೇಶಗಳು ಒಪ್ಪಿಕೊಂಡಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಇಂದು (ಏ.25) ತಿಳಿಸಿದೆ.

Ladakh Crisis: ಲಡಾಖ್ ಬಿಕ್ಕಟ್ಟಿನ ಇತ್ಯರ್ಥಕ್ಕೆ ಭಾರತ, ಚೀನಾ ಒಪ್ಪಿಗೆ: ಬೀಜಿಂಗ್
ಸಾಂದರ್ಭಿಕ ಚಿತ್ರ
Follow us on

ಬೀಜಿಂಗ್: ಭಾರತ ಮತ್ತು ಚೀನಾ(India, China) ನಡುವಿನ ಹಲವು ವರ್ಷಗಳ ಸಮಸ್ಯೆಗಳು ಇತ್ಯರ್ಥವಾಗಲಿದೆ ಎಂದು ಚೀನಾ ಹೇಳಿದೆ, ಭಾರತ ಮತ್ತು ಚೀನಾದ ಉನ್ನತಮಟ್ಟದ ಮಿಲಿಟರಿ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಮಾತುಕತೆಯ ಸಂದರ್ಭದಲ್ಲಿ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡುವುದರ ಜೊತೆಗೆ ಪೂರ್ವ ಲಡಾಖ್‌ನಲ್ಲಿನ ದೀರ್ಘಕಾಲದ ಬಿಕ್ಕಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಇತ್ಯರ್ಥ ಮಾಡುವಂತೆ ಮತ್ತು ಅದಕ್ಕೊಂದು ವೇಗವನ್ನು ನೀಡುವಂತೆ ಎರಡು ದೇಶಗಳು ಒಪ್ಪಿಕೊಂಡಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಇಂದು (ಏ.25) ತಿಳಿಸಿದೆ. ಚೀನಾ-ಭಾರತ ಕಾರ್ಪ್ಸ್ ಕಮಾಂಡರ್ ಮಟ್ಟದ 18ನೇ ಸುತ್ತಿನ ಸಭೆಯು ಏಪ್ರಿಲ್ 23ರಂದು ಚೀನಾದ ಕಡೆಯಿಂದ ಚುಶುಲ್-ಮೊಲ್ಡೊ ಗಡಿ ಈ ಸಭೆ ನಡೆಯಿತು ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಏಪ್ರಿಲ್ 27 ಮತ್ತು 28 ರಂದು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಭಾಗವಹಿಸಲು ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರು ಭಾರತಕ್ಕೆ ಯೋಜಿತ ಭೇಟಿ ನೀಡುವ ಮೊದಲು ಈ ಮಾತುಕತೆ ನಡೆದಿದೆ ಎಂದು ಹೇಳಿದೆ. ಎರಡೂ ದೇಶದ ಸಂಬಂಧಿತ ವಿಷಯಗಳ ಬಗ್ಗೆ ಸ್ನೇಹಪರ ಮತ್ತು ಪ್ರಾಮಾಣಿಕವಾದ ವಿನಿಮಯವನ್ನು ಮಾಡಿಕೊಂಡಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿಕೆ ತಿಳಿಸಿದೆ.

ಎರಡೂ ದೇಶಗಳ ನಾಯಕರ ಮಾರ್ಗದರ್ಶನದಲ್ಲಿ (ಪ್ರಧಾನಿ-ಅಧ್ಯಕ್ಷ) ಮತ್ತು ಇಬ್ಬರು ವಿದೇಶಾಂಗ ಮಂತ್ರಿಗಳ ನಡುವಿನ ಸಭೆಯ ಆಧಾರದ ಮೇಲೆ, ಎರಡೂ ಕಡೆಯವರು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಕಟ ಸಂಪರ್ಕ ಮತ್ತು ಸಂವಾದವನ್ನು ಕಾಪಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ, ಪಶ್ಚಿಮ ಗಡಿಭಾಗದಲ್ಲಿ ಸಂಬಂಧಿತ ಸಮಸ್ಯೆಗಳ ಇತ್ಯರ್ಥಕ್ಕೆ ವೇಗ ನೀಡಲಾಗಿದ್ದು. ಚೀನಾ-ಭಾರತದ ಗಡಿಯ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದೇ ನಮ್ಮ ಮೊದಲ ಗುರಿ ಮತ್ತು ಆದ್ಯತೆ ಎಂದು ಹೇಳಿದೆ.

ಇದನ್ನೂ ಓದಿ:ಲಡಾಖ್‌ನಲ್ಲಿ ಪಿಎಲ್‌ಎ ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದು ನಿಜವೇ?; ಸರ್ಕಾರ ದೃಢೀಕರಿಸಬೇಕು ಎಂದ ಒವೈಸಿ

ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು ಸೋಮವಾರ ಬೀಜಿಂಗ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಸಂಬಂಧಿತ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಪರಿಹಾರ ಮಾಡುವ ಕುರಿತು ಉಭಯ ದೇಶಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಸೋಮವಾರದಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ನೀಡಿರುವ ಹೇಳಿಕೆಗಳ ಪ್ರಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪಾಶ್ಚಿಮಾತ್ಯ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸಂಬಂಧಿಸಿದ ಸಮಸ್ಯೆಗಳ ಪರಿಹಾರದ ಕುರಿತು ಉಭಯ ರಾಷ್ಟ್ರಗಳು ಸ್ಪಷ್ಟ ಮತ್ತು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ಪಾಶ್ಚಿಮಾತ್ಯ ವಲಯದಲ್ಲಿ ಎಲ್‌ಎಸಿಯೊಂದಿಗಿನ ಸಂಬಂಧಿತ ಸಮಸ್ಯೆಗಳ ಪರಿಹಾರದ ಕುರಿತು ಉಭಯ ರಾಷ್ಟ್ರಗಳು ಸಮಗ್ರವಾದ ಚರ್ಚೆಯನ್ನು ನಡೆಸಬೇಕಿದೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಸಾಧಿಸುತ್ತದೆ ಎಂದು ಅದು ಹೇಳಿದೆ. ಎರಡು ದೇಶದ ನಾಯಕರು ನೀಡಿರುವ ( ಪ್ರಧಾನಿ-ಅಧ್ಯಕ್ಷರು) ಮಾರ್ಗದರ್ಶನಕ್ಕೆ ಅನುಗುಣವಾಗಿ ಮಾರ್ಚ್ ತಿಂಗಳು 2023ರಲ್ಲಿ ಎರಡು ದೇಶದ ವಿದೇಶಾಂಗ ಮಂತ್ರಿಗಳ ನಡುವಿನ ಸಭೆಯಲ್ಲಿ ಮುಕ್ತ ಮತ್ತು ಪ್ರಾಮಾಣಿಕ ರೀತಿಯಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Tue, 25 April 23