ಶರವೇಗದಲ್ಲಿ ಹಬ್ಬುತ್ತಿದೆ ಕೊರೊನಾ, ವಿಶ್ವದಲ್ಲಿ ಭಾರತಕ್ಕೆ 6 ನೇ ಸ್ಥಾನ!

ಬೆಂಗಳೂರು: ವರ್ಲ್ಡ್ ಕೊರೊನಾ ಲಿಸ್ಟ್​ನಲ್ಲಿ, ಒಲಂಪಿಕ್ ಮೆಡಲ್ ಟೇಬಲ್​ನಂತೆ ಪೈಪೋಟಿ ನಡೀತಿದೆ. ಅಲ್ಲೆಲ್ಲೋ ಕೆಳಗಿದ್ದ ದೇಶ ಬೆಳಗಾಗುವಷ್ಟರಲ್ಲಿ ಮೇಲೆ ಬಂದುಬಿಡುತ್ತೆ. ಅಷ್ಟೇ ಅಲ್ಲ ಸಾವಿರಾರು ಕೊರೊನಾ ಸೋಂಕಿತರು ಅಲ್ಲಿ ಪತ್ತೆಯಾಗ್ತಿದ್ದಾರೆ. ಇದು ಭಾರತಕ್ಕೂ ಅನ್ವಯ ಆಗ್ತಿದೆ. ಮುಠ್ಠಾಳ ಚೀನಾದಿಂದ ಹರಡಿರುವ ‘ಕೊರೊನಾ’ಗೆ ಭಾರತ ಬಲಿಪಶು ಆಗುತ್ತಿದೆ. ನೋಡ ನೋಡ್ತಿದ್ದಂತೆ ಕೊರೊನಾ ಟೇಬಲ್​ನಲ್ಲಿ ಭಾರತ 6ನೇ ಸ್ಥಾನಕ್ಕೆ ಬಂದು ನಿಂತಿದೆ. ಲಾಕ್​ಡೌನ್​ಗೂ ಬಗ್ಗಲಿಲ್ಲ ಸೀಲ್​ಡೌನ್​ಗಂತೂ ಜಗ್ಗಲೇ ಇಲ್ಲ. ‘ಕೊರೊನಾ’ ಅನ್ನೋ ಡೆಡ್ಲಿ ವೈರಸ್ ನೋಡ ನೋಡ್ತಿದ್ದಂತೆ ಇಡೀ ದೇಶಕ್ಕೆ […]

ಶರವೇಗದಲ್ಲಿ ಹಬ್ಬುತ್ತಿದೆ ಕೊರೊನಾ, ವಿಶ್ವದಲ್ಲಿ ಭಾರತಕ್ಕೆ 6 ನೇ ಸ್ಥಾನ!
ಸಾಧು ಶ್ರೀನಾಥ್​ Edited By:

Updated on: Jun 06, 2020 | 9:12 AM

ಬೆಂಗಳೂರು: ವರ್ಲ್ಡ್ ಕೊರೊನಾ ಲಿಸ್ಟ್​ನಲ್ಲಿ, ಒಲಂಪಿಕ್ ಮೆಡಲ್ ಟೇಬಲ್​ನಂತೆ ಪೈಪೋಟಿ ನಡೀತಿದೆ. ಅಲ್ಲೆಲ್ಲೋ ಕೆಳಗಿದ್ದ ದೇಶ ಬೆಳಗಾಗುವಷ್ಟರಲ್ಲಿ ಮೇಲೆ ಬಂದುಬಿಡುತ್ತೆ. ಅಷ್ಟೇ ಅಲ್ಲ ಸಾವಿರಾರು ಕೊರೊನಾ ಸೋಂಕಿತರು ಅಲ್ಲಿ ಪತ್ತೆಯಾಗ್ತಿದ್ದಾರೆ. ಇದು ಭಾರತಕ್ಕೂ ಅನ್ವಯ ಆಗ್ತಿದೆ. ಮುಠ್ಠಾಳ ಚೀನಾದಿಂದ ಹರಡಿರುವ ‘ಕೊರೊನಾ’ಗೆ ಭಾರತ ಬಲಿಪಶು ಆಗುತ್ತಿದೆ. ನೋಡ ನೋಡ್ತಿದ್ದಂತೆ ಕೊರೊನಾ ಟೇಬಲ್​ನಲ್ಲಿ ಭಾರತ 6ನೇ ಸ್ಥಾನಕ್ಕೆ ಬಂದು ನಿಂತಿದೆ.

ಲಾಕ್​ಡೌನ್​ಗೂ ಬಗ್ಗಲಿಲ್ಲ ಸೀಲ್​ಡೌನ್​ಗಂತೂ ಜಗ್ಗಲೇ ಇಲ್ಲ. ‘ಕೊರೊನಾ’ ಅನ್ನೋ ಡೆಡ್ಲಿ ವೈರಸ್ ನೋಡ ನೋಡ್ತಿದ್ದಂತೆ ಇಡೀ ದೇಶಕ್ಕೆ ಹಬ್ಬಿದೆ. ಒಂದು, ಎರಡೂ ಅಂತಾ ಸಿಂಗಲ್ ಡಿಜಿಟ್​ನಲ್ಲಿ ಏರಿಕೆ ಆಗುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಸಾವಿರದ ಲೆಕ್ಕದಲ್ಲಿ ಏರುತ್ತಿದೆ.ಕೊರೊನಾ ಸೋಂಕಿತರು ಇರುವ ಆಧಾರದಲ್ಲಿ ಭಾರತಕ್ಕೆ 6ನೇ ಸ್ಥಾನ ಸಿಕ್ಕಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಮಿಳುನಾಡು, ದೆಹಲಿಯಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ..!
ಹೌದು ಭಾರತದಲ್ಲಿ ಕೊರೊನಾ ಸೋಂಕು ತನ್ನ ಅಬ್ಬರ, ಆರ್ಭಟ ಹಾಗೂ ಅಟ್ಟಹಾಸವನ್ನು ಮುಂದುವರಿಸಿದೆ. ಕೆಲ ದಿನಗಳ ಹಿಂದಷ್ಟೇ 2 ಲಕ್ಷದ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ, ಇದೀಗ 3 ಲಕ್ಷದತ್ತ ದಾಪುಗಾಲು ಇಡುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಹಾಗಾದ್ರೆ ಸದ್ಯದ ಮಟ್ಟಿಗೆ ಯಾವ ಯಾವ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ ಅನ್ನೊದರ ಅಂಕಿ-ಅಂಶ ನೋಡೋದಾದ್ರೆ.

ಕಿಲ್ಲರ್ ‘ಕೊರೊನಾ’ ಕಿರಿಕಿರಿ
ಮಹಾರಾಷ್ಟ್ರದಲ್ಲಿ ಈವರೆಗೂ 77 ಸಾವಿರದ 793 ಕೊರೊನಾ ಕೇಸ್​ಗಳು ಕನ್ಫರ್ಮ್ ಆಗಿದ್ರೆ, 2710 ಜನರು ಮೃತಪಟ್ಟಿದ್ದಾರೆ. ಹಾಗೇ ತಮಿಳುನಾಡಿನಲ್ಲಿ 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕನ್ಫರ್ಮ್ ಆಗಿದ್ದು, 220 ಸೋಂಕಿತರು ಬಲಿಯಾಗಿದ್ದಾರೆ. ದೆಹಲಿಯಲ್ಲಿ 25 ಸಾವಿರ ಕೇಸ್​ಗಳು ಪತ್ತೆಯಾಗಿದ್ರೆ, 650 ಜನರು ಅಸುನೀಗಿದ್ದಾರೆ. ಹಾಗೇ ಗುಜರಾತ್​ನಲ್ಲೂ ಸೂಂಕಿನ ಬಲೆಯಲ್ಲಿ 18 ಸಾವಿರದ 584 ಸಿಲುಕಿದ್ದು, 1155 ಜನರು ಸಾವನ್ನಪ್ಪಿದ್ದಾರೆ.

ನೌಕಾಪಡೆಯ 16 ಸಿಬ್ಬಂದಿಗೆ ಕೊರೊನಾ ಕನ್ಫರ್ಮ್
ಭಾರತದಲ್ಲಿ ಕೊರೊನಾ ಯಾವ ಮಟ್ಟಿಗೆ ವೇಗವಾಗಿ ಹಬ್ಬುತ್ತಿದೆ ಅಂದ್ರೆ, ದೇಶದ ಯೋಧರನ್ನೂ ಈ ವೈರಸ್ ಬಿಡ್ತಿಲ್ಲ. ಅಷ್ಟಕ್ಕೂ ಕಳೆದ 4 ದಿನಗಳಲ್ಲಿ ಗುಜರಾತ್​ನಲ್ಲಿ ನೌಕಾಪಡೆಯ 16 ಸಿಬ್ಬಂದಿಗೆ ಕೊರೊನಾ ಕನ್ಫರ್ಮ್ ಆಗಿದೆ. ಪೋರಬಂದರ್​ ನೌಕಾನೆಲೆಯ ಸಿಬ್ಬಂದಿಗೆ ಸೋಂಕು ಹರಡಿರೋದು ಗೊತ್ತಾಗಿದ್ದು, ಬೆಚ್ಚಿಬೀಳುವಂತೆ ಮಾಡಿದೆ.

ವ್ಯಾಕ್ಸಿನ್ ಸಿಗುತ್ತಿಲ್ಲ, ಎಲ್ಲಿಂದ-ಹೇಗೆ ಅಟ್ಯಾಕ್ ಮಾಡ್ತಿದೆ ಅನ್ನೋದು ಅರಿವಾಗ್ತಿಲ್ಲ. ಹೀಗೆ ಲಕ್ಷಾಂತರ ಜನರಿಗೆ ಕೊರೊನಾ ಬಾಧಿಸುತ್ತಿದೆ.ಭಾರತದಲ್ಲಿ ಪರಿಸ್ಥಿತಿ ಕಂಟ್ರೋಲ್​ಗೆ ಬಂತು ಅನ್ನುವಷ್ಟರಲ್ಲೇ ಭಯಾನಕ ಸ್ಥಿತಿ ಎದುರಾಗಿದೆ.

Published On - 9:11 am, Sat, 6 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us