POSITIVE ವ್ಯಾಕ್ಸಿನ್ ಬರೋಕ್ಕೆ ಮುಂಚೆನೇ.. ಹೆಚ್ಚು ಸೋಂಕಿತರು ಗುಣಮುಖರಾಗ್ತಿದ್ದಾರೆ!

POSITIVE ವ್ಯಾಕ್ಸಿನ್ ಬರೋಕ್ಕೆ ಮುಂಚೆನೇ.. ಹೆಚ್ಚು ಸೋಂಕಿತರು ಗುಣಮುಖರಾಗ್ತಿದ್ದಾರೆ!

ದೆಹಲಿ: ವಿಶ್ವದಲ್ಲಿ ಕೊರೊನಾ ಆರ್ಭಟ ಎಲ್ಲೆ ಮೀರಿದೆ. ಜನ ನಲುಗಿ ಹೋಗಿದ್ದಾರೆ. ಕೊರೊನಾ ಆತಂಕದ ಜೊತೆಗೆ ಕೊಂಚ ಖುಷಿಕೊಡುವ ಸಂಗತಿಯನ್ನು ಕೇಂದ್ರದ ಆರೋಗ್ಯ ಇಲಾಖೆಯ ತಿಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. 16 ರಾಜ್ಯಗಳಲ್ಲಿ ಸರಾಸರಿಗಿಂತ ಹೆಚ್ಚು ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ದೆಹಲಿ ಮತ್ತು ಲಡಾಖ್‌ನಲ್ಲಿ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊವಿಡ್​ ಟೆಸ್ಟ್ ಮಾಡಲಾಗಿದೆ. ಭಾರತದಲ್ಲಿ ಕೊರೊನಾ ಸಾವಿನ‌ […]

Ayesha Banu

|

Jul 30, 2020 | 5:58 PM

ದೆಹಲಿ: ವಿಶ್ವದಲ್ಲಿ ಕೊರೊನಾ ಆರ್ಭಟ ಎಲ್ಲೆ ಮೀರಿದೆ. ಜನ ನಲುಗಿ ಹೋಗಿದ್ದಾರೆ. ಕೊರೊನಾ ಆತಂಕದ ಜೊತೆಗೆ ಕೊಂಚ ಖುಷಿಕೊಡುವ ಸಂಗತಿಯನ್ನು ಕೇಂದ್ರದ ಆರೋಗ್ಯ ಇಲಾಖೆಯ ತಿಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. 16 ರಾಜ್ಯಗಳಲ್ಲಿ ಸರಾಸರಿಗಿಂತ ಹೆಚ್ಚು ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೆಹಲಿ ಮತ್ತು ಲಡಾಖ್‌ನಲ್ಲಿ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊವಿಡ್​ ಟೆಸ್ಟ್ ಮಾಡಲಾಗಿದೆ. ಭಾರತದಲ್ಲಿ ಕೊರೊನಾ ಸಾವಿನ‌ ಪ್ರಮಾಣ ಕಡಿಮೆ ಇದೆ. 24 ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಸಾವುಗಳು ಸಂಭವಿಸಿದೆ.

ಕೆಲ ರಾಜ್ಯಗಳಲ್ಲಿ 7 ದಿನದಲ್ಲಿ ಶೇ.10ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಇದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಒಡಿಶಾದಲ್ಲಿ ಟೆಸ್ಟ್‌ಗೊಳಪಟ್ಟವರಲ್ಲಿ ಶೇ.10ಕ್ಕೂ ಹೆಚ್ಚು ಪಾಸಿಟಿವ್ ಇದೆ ಎಂದು ವಿಶೇಷ ಕರ್ತವ್ಯಾಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಭಾರತದಲ್ಲಿ 138 ಕೋಟಿ ಜನಸಂಖ್ಯೆ ಇದೆ. ಇಂತಹ ದೇಶದಲ್ಲಿ ಹರ್ಡ್ ಇಮ್ಯೂನಿಟಿ ಕಾರ್ಯತಂತ್ರ ಆಪ್ಷನ್ ಇಲ್ಲ. ಹರ್ಡ್ ಇಮ್ಯೂನಿಟಿ ಬಹಳ ದೂರವಿದೆ. ವ್ಯಾಕ್ಸಿನ್ ಬರುವವರೆಗೂ ಸೋಷಿಯಲ್ ವ್ಯಾಕ್ಸಿನ್ ಕಾಪಾಡಬೇಕು ಎಂದು ಹೇಳಿದ್ರು.

Follow us on

Related Stories

Most Read Stories

Click on your DTH Provider to Add TV9 Kannada