ತೆಹಲ್ಕಾ ಹಗರಣ: ಫರ್ನಾಂಡಿಸ್ ಗೆಳತಿ ಜಯಾ ಜೇಟ್ಲಿಗೆ ಜೈಲು ಶಿಕ್ಷೆ ಕಾಯಂ ಆಯ್ತು
ನವದೆಹಲಿ: ಸಮಾತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಮತ್ತು ಅವರ ಇಬ್ಬರು ಸಂಗಡಿಗರಿಗೆ ರಕ್ಷಣಾ ಖಾತೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೆಹಲಿಯ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಆಪ್ತರಾಗಿದ್ದ ಜಯಾ ಜೇಟ್ಲಿ, ಡಿಸೆಂಬರ್ 2000ರಲ್ಲಿ ತೆಹಲ್ಕಾ ವೆಬ್ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಶನ್‌ನಲ್ಲಿ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೀಲ್ ಕುದುರಿಸಲು 2 ಲಕ್ಷ ರೂ ಲಂಚ ಪಡೆಯಲು […]
ನವದೆಹಲಿ: ಸಮಾತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಮತ್ತು ಅವರ ಇಬ್ಬರು ಸಂಗಡಿಗರಿಗೆ ರಕ್ಷಣಾ ಖಾತೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೆಹಲಿಯ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಆಪ್ತರಾಗಿದ್ದ ಜಯಾ ಜೇಟ್ಲಿ, ಡಿಸೆಂಬರ್ 2000ರಲ್ಲಿ ತೆಹಲ್ಕಾ ವೆಬ್ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಶನ್‌ನಲ್ಲಿ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೀಲ್ ಕುದುರಿಸಲು 2 ಲಕ್ಷ ರೂ ಲಂಚ ಪಡೆಯಲು ಒಪ್ಪಿದ್ದು, ಸಿಬಿಐ ತನಿಖೆಯಲ್ಲಿ ಸಾಬೀತಾಗಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿಯ ವಿಶೇಷ ನ್ಯಾಯಾಲಯ, ತೆಹಲ್ಕಾ ಸ್ಟಿಂಗ್‌ನಲ್ಲಿ ಜಯಾ ಭ್ರಷ್ಟಾಚಾರವೆಸಗಿದ್ದು ಸಾಬೀತಾಗಿದೆ ಎಂದು ಜಯಾ ಜೇಟ್ಲಿ ಮತ್ತು ಅವರ ಇತರ ಇಬ್ಬರು ಸಂಗಡಿಗರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Published On - 4:07 pm, Thu, 30 July 20