India Covid Cases: ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ, 24 ಗಂಟೆಗಳಲ್ಲಿ 3,823 ಹೊಸ ಪ್ರಕರಣಗಳು ಪತ್ತೆ

ಭಾರತದಲ್ಲಿ ಕೊರೊನಾ(Corona)  ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3,823 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 18,389 ಸಕ್ರಿಯ ಪ್ರಕರಣಗಳಿವೆ

India Covid Cases: ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ, 24 ಗಂಟೆಗಳಲ್ಲಿ 3,823 ಹೊಸ ಪ್ರಕರಣಗಳು ಪತ್ತೆ
ಕೊರೊನಾ ಸೋಂಕು
Image Credit source: NDTV

Updated on: Apr 02, 2023 | 10:26 AM

ಭಾರತದಲ್ಲಿ ಕೊರೊನಾ(Corona)  ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3,823 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 18,389 ಸಕ್ರಿಯ ಪ್ರಕರಣಗಳಿವೆ, ಭಾರತದಲ್ಲಿ 2,994 ಹೊಸ ಕೋವಿಡ್ ಸೋಂಕುಗಳು ದಾಖಲಾದ ಒಂದು ದಿನದ ಬಳಿಕ ಬರೋಬ್ಬರಿ 3,823 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಸಕ್ರಿಯ ಪ್ರಕರಣಗಳು ಶೇಕಡಾ 0.04 ರಷ್ಟಿದೆ, ಕಳೆದ 24 ಗಂಟೆಗಳಲ್ಲಿ 1,784 ಚೇತರಿಕೆಗಳು ಒಟ್ಟು ಚೇತರಿಕೆಗಳನ್ನು 4,41,73,335 ಕ್ಕೆ ಹೆಚ್ಚಿಸಿವೆ. ಪ್ರಸ್ತುತ 98.77 ರಷ್ಟು ಚೇತರಿಕೆ ದರ, ದೈನಂದಿನ ಪಾಸಿಟಿವಿಟಿ ದರ ಶೇ.2.87 ರಷ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ