Covishield Corona Vaccine: ಭಾರತಕ್ಕೆ ಮತ್ತೆ ಕೊರೊನಾ ಭೀತಿ: ಕೇಂದ್ರ ಸರ್ಕಾರಕ್ಕೆ 2 ಕೋಟಿ ಕೋವಿಶೀಲ್ಡ್ ಲಸಿಕೆ ಉಚಿತವಾಗಿ ನೀಡಲು ಸೀರಮ್ ಸಿದ್ಧ

| Updated By: ನಯನಾ ರಾಜೀವ್

Updated on: Dec 29, 2022 | 10:56 AM

ದೇಶಕ್ಕೆ ಮತ್ತೆ ಕೊರೊನಾ(Corona) ಭೀತಿ ಎದುರಾಗಿದೆ, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 2 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಸಿದ್ಧ ಎಂದು ಸೀರಮ್ ಇನ್​ಸ್ಟಿಟ್ಯೂಟ್ ಹೇಳಿದೆ.

Covishield Corona Vaccine: ಭಾರತಕ್ಕೆ ಮತ್ತೆ ಕೊರೊನಾ ಭೀತಿ: ಕೇಂದ್ರ ಸರ್ಕಾರಕ್ಕೆ 2 ಕೋಟಿ ಕೋವಿಶೀಲ್ಡ್ ಲಸಿಕೆ ಉಚಿತವಾಗಿ ನೀಡಲು ಸೀರಮ್ ಸಿದ್ಧ
Covishield
Follow us on

ದೇಶಕ್ಕೆ ಮತ್ತೆ ಕೊರೊನಾ(Corona) ಭೀತಿ ಎದುರಾಗಿದೆ, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 2 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಸಿದ್ಧ ಎಂದು ಸೀರಮ್ ಇನ್​ಸ್ಟಿಟ್ಯೂಟ್ ಹೇಳಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನ ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು 410 ಕೋಟಿ ರೂಪಾಯಿಗಳ ಉಚಿತ ಡೋಸ್ ನೀಡುವುದಾಗಿ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಅದನ್ನು ಹೇಗೆ ತಲುಪಿಸಬಹುದು ಎಂಬುದನ್ನು ಸಚಿವಾಲಯದಿಂದ ತಿಳಿದುಕೊಳ್ಳಲು ಸಿಂಗ್ ಬಯಸಿದ್ದಾರೆ.

ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೇಂದ್ರ ಸರ್ಕಾರಕ್ಕೆ ಎರಡು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ. ಅಧಿಕೃತ ಮೂಲಗಳು ಬುಧವಾರ ಈ ವಿಷಯವನ್ನು ತಿಳಿಸಿವೆ.

ಮತ್ತಷ್ಟು ಓದಿ:Covishield Vaccine: ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆ ನೋ ಸ್ಟಾಕ್: ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನರು ಪರದಾಟ

ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮಕ್ಕಾಗಿ SII ಇದುವರೆಗೆ 170 ಕೋಟಿಗೂ ಹೆಚ್ಚು ಕೋವಿಶೀಲ್ಡ್‌ಗಳನ್ನು ಸರ್ಕಾರಕ್ಕೆ ಒದಗಿಸಿದೆ. ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳು ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿವೆ. ಭಾರತ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ ಮತ್ತು ಯಾವುದೇ ಘಟನೆಗೆ ಸಿದ್ಧರಾಗಿರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.

ಭಾರತವು ಕೋವಿಡ್ ಪಾಸಿಟಿವ್ ಮಾದರಿಗಳ ಕಣ್ಗಾವಲು ಮತ್ತು ಜೀನೋಮ್ ಅನುಕ್ರಮವನ್ನು ಹೆಚ್ಚಿಸಿದೆ. ಜನವರಿಯಲ್ಲಿ ದೇಶವು ಕೋವಿಡ್ ಪ್ರಕರಣಗಳ ಉಲ್ಬಣವನ್ನು ನೋಡಬಹುದಾದ್ದರಿಂದ ಮುಂದಿನ 40 ದಿನಗಳು ನಿರ್ಣಾಯಕ ಎಂದು ಅಧಿಕೃತ ಮೂಲಗಳು ಎಚ್ಚರಿಸಿವೆ.
ಅಲೆ ಇದ್ದರೂ ಸಾವಿನ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರಾ ಕಡಿಮೆ ಇರುತ್ತದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: Coronavirus Live Updates: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ; ಕೋರ್ಬಿವ್ಯಾಕ್ಸ್ ಪಡೆಯಲು ಜನರ ನಕಾರ

ಕೇಂದ್ರ ಸರ್ಕಾರ ಶನಿವಾರದಂದು ಪ್ರತಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುವ ಪ್ರಯಾಣಿಕರಿಗೆ RTPCR ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ಪ್ರಕರಣಗಳ ಹೊಸ ಉಲ್ಬಣವನ್ನು ಎದುರಿಸಲು ದೇಶದ ಸನ್ನದ್ಧತೆಯನ್ನು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಭೆ ನಡೆಸಿದ್ದಾರೆ.

ಅರ್ಹ ವಯಸ್ಕ ಜನಸಂಖ್ಯೆಯ ಶೇಕಡಾ 27ರಷ್ಟು ಮಂದಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದಾರೆ. ಜನವರಿಯಲ್ಲಿ ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಮುಂದಿನ 40 ದಿನಗಳು ನಿರ್ಣಾಯಕ ಎಂದು ಅಧಿಕೃತ ಮೂಲಗಳು ಎಚ್ಚರಿಕೆ ನೀಡಿವೆ. ಅಲೆ ಎದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಕೋವಿಡ್ ಸೋಂಕಿನ ತ್ವರಿತ ಹರಡುವಿಕೆಯನ್ನು ಎದುರಿಸಲು ದೇಶಾದ್ಯಂತ ಆರೋಗ್ಯ ಸೌಲಭ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ಅಣಕು ಡ್ರಿಲ್ ಅನ್ನು ನಡೆಸಲಾಯಿತು. ಭಾರತವು ತನ್ನ ಕಣ್ಗಾವಲು ಮತ್ತು ಕೋವಿಡ್ ಪಾಸಿಟಿವ್ ಸ್ಯಾಂಪಲ್‌ಗಳ ಜೀನೋಮ್ ಸೀಕ್ವೆನ್ಸಿಂಗ್‌ನತ್ತ ಹೆಜ್ಜೆ ಹಾಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:55 am, Thu, 29 December 22