ಸೀರಮ್ ಇನ್ಸ್ಟಿಟ್ಯೂಟ್ ಆಯ್ತು, ಇದೀಗ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ನಂಬಿ 1 ಕೋಟಿ ಕಳೆದುಕೊಂಡ ಜೆಬಿಎಂ ಗ್ರೂಪ್

ಈ ಹಿಂದೆ ಸೀರಮ್ ಇನ್​ಸ್ಟಿಟ್ಯೂಟ್​ಗೆ ವಂಚಕರು 1 ಕೋಟಿ ರೂ. ವಂಚಿಸಿದ್ದರು. ಇದೀಗ ಜೆಬಿಎಂ ಗ್ರೂಪ್​ಗೆ ನಕಲಿ ವಾಟ್ಸ್ ಅ್ಯಪ್ ಸಂದೇಶ ಕಳುಹಿಸಿ 1 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಯ್ತು, ಇದೀಗ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ನಂಬಿ 1 ಕೋಟಿ ಕಳೆದುಕೊಂಡ ಜೆಬಿಎಂ ಗ್ರೂಪ್
ಜೆಬಿಎಂ ಗ್ರೂಪ್​ಗೆ ನಕಲಿ ವಾಟ್ಸ್ ಆ್ಯಪ್ ಮೆಸೆಜ್ ಕಳುಹಿಸಿ 1 ಕೋಟಿ ರೂ. ವಂಚನೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Sep 19, 2022 | 3:45 PM

ವಾಟ್ಸ್ ಆ್ಯಪ್ ಬಳಕೆದಾರರೇ ನಿಮಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಬರುವ ಮೆಸೆಜ್​ಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಈ ನಕಲಿ ವಾಟ್ಸ್ ಆ್ಯಪ್ ಸಂದೇಶ (Fake WhatsApp Message) ಕಳುಹಿಸಿ ನಿಮ್ಮಿಂದ ಹಣ ಲಪಟಾಯಿಸುವ ಜಾಲವೊಂದು ಸಕ್ರಿಯವಾಗಿದೆ. ಇದಕ್ಕೆ ದೊಡ್ಡದೊಡ್ಡ ಸಂಸ್ಥೆಗಳು ಕೂಡ ಬಲಿಯಾಗಿವೆ. ಈ ಹಿಂದೆ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ವಂಚಕರ ಬಲೆಗೆ ಬಿದ್ದು 1 ಕೋಟಿ ಕಳೆದುಕೊಂಡಿತ್ತು. ಇದೀಗ ಜೆಬಿಎಂ ಗ್ರೂಪ್ (JBM Group) ಕೂಡ ವಂಚನೆಗೆ ಒಳಗಾಗಿದೆ. ಜೆಬಿಎಂ ಗ್ರೂಪ್ ಹೆಸರಿನ ಆಟೋಮೊಬೈಲ್ ಕಂಪನಿಯ ಉಪಾಧ್ಯಕ್ಷರ ಹೆಸರಿನಲ್ಲಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಗೆ ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಿ 7 ಬ್ಯಾಂಕ್ ಖಾತೆಗಳಿಂದ 1 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿ ವಂಚಿಸಲಾಗಿದೆ.

ಮಾಹಿತಿ ಪ್ರಕಾರ, ಸಿಎಫ್​ಒ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್​ಐಆರ್ ದಾಖಲಾಗಿದೆ. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ವಿವೇಕ್ ಗುಪ್ತಾ ಅವರು ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಲಾಗಿದೆ. ನಕಲಿ ಸಂದೇಶದಲ್ಲಿ ಸೂಚಿಸಲಾದ ಬ್ಯಾಂಕ್ ಖಾತೆಗಳಿಗೆ ನಿರ್ದಿಷ್ಟ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಸಂದೇಶವನ್ನು ಗುಪ್ತಾ ಅವರು ಸ್ವೀಕರಿಸಿದ್ದಾರೆ. ಅದರಂತೆ ಒಟ್ಟು ಎಂಟು ವಹಿವಾಟುಗಳ ಮೂಲಕ ಏಳು ವಿವಿಧ ಬ್ಯಾಂಕ್ ಖಾತೆಗಳಿಂದ 1,11,97,696 ರೂಪಾಯಿ ವರ್ಗಾವಣೆ ಮಾಡಲಾಗಿದೆ.

“ವಂಚಕನು ತಾನು ಜೆಬಿಎಂ ಗ್ರೂಪ್ ಉಪಾಧ್ಯಕ್ಷ ನಿಶಾಂಕ್ ಆರ್ಯ ಎಂದು ಹೇಳಿಕೊಂಡಿದ್ದಾನೆ. ಕರೆ ಮಾಡಿದ ನಂಬರ್​ನ ವಾಟ್ಸ್​ ಆ್ಯಪ್​ ಪ್ರೊಫೈಲ್​ನಲ್ಲಿ ಆರ್ಯ ಅವರದ್ದೇ ಫೋಟೋ ಪ್ರದರ್ಶಿಸಿದೆ. ಟ್ರೂಕಾಲರ್​ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿದಾಗಲೂ ಅದು ಆರ್ಯ ಅವರ ನಂಬರ್ ಎಂದು ತೋರಿಸಿದೆ. ಅವರು ಮಹತ್ವದ ಸಭೆಯಲ್ಲಿ ನಿರತರಾಗಿದ್ದಾರೆ ಎಂದು ಸಂದೇಶ ಕಳುಹಿಸುವವರು ನನಗೆ ತಿಳಿಸಿದ್ದರಿಂದ ಯಾವುದೇ ಹೆಚ್ಚಿನ ವಿಚಾರಣೆ ಮಾಡಲು ನಾನು ನೇರವಾಗಿ ಕರೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಜೆಬಿಎಂ ಗ್ರೂಪ್​ನ ಜೆಬಿಎಂ ಇಂಡಸ್ಟ್ರೀಸ್ ಮತ್ತು ಜೆಬಿಎಂ ಆಟೋ ಎಂಬ ಎರಡು ಘಟಕಗಳಿಂದ ಮೊತ್ತವನ್ನು ವರ್ಗಾಯಿಸಲಾಗಿದೆ. ಕೋರಿಕೆಯ ಮೇರೆಗೆ ಅಂತಹ ವರ್ಗಾವಣೆಗಳನ್ನು ದೃಢೀಕರಿಸುವ ಯುಟಿಆರ್ ಸಂಖ್ಯೆಯನ್ನು ಅದೇ ವಾಟ್ಸ್​ ಆ್ಯಪ್ ಚಾಟ್​ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಗುಪ್ತಾ ಅವರು ಹೇಳಿದ್ದಾರೆ.

ಸೈಬರ್ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

  • ನಿಮಗೆ ತಿಳಿದಿರುವವರ ಅಥವಾ ಇನ್ಯಾರದ್ದೋ ಹೆಸರನ್ನು ಹೇಳಿಕೊಂಡು ಅಪರಿಚಿತ ನಂಬರ್​ನಲ್ಲಿ ವಾಟ್ಸ್​ ಆ್ಯಪ್ ಮೆಜೆಜ್​ಗಳು ಬಂದರೆ ಅದರ ಮೂಲದ ಬಗ್ಗೆ ಪರಿಶೀಲನೆ ನಡೆಸಬೇಕು.
  • QR ಕೋಡ್ ಅನ್ನು ಅದರ ಮೂಲವನ್ನು ಸಂಪೂರ್ಣವಾಗಿ ತಿಳಿಯದ ಹೊರತು ಅಥವಾ ಅನುಮಾನಗಳಿದ್ದರೆ ಸ್ಕ್ಯಾನ್ ಮಾಡಲು ಮುಂದಾಗಬೇಡಿ.
  • ನಿಮ್ಮ ಬ್ಯಾಂಕ್ ಖಾತೆಯ ಬಳಕೆದಾರ ಹೆಸರು ಅಥವಾ ಪಾಸ್​ವರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕ್​ನಿಂದ ಕರೆ ಈ ರೀತಿಯಾಗಿ ಮಾಹಿತಿಗಳನ್ನು ಪಡೆಯುವುದಿಲ್ಲ ಎಂಬುದನ್ನು ನೆನಪಿಡಬೇಕು.
  • ಅಪರಿಚಿತರು ಕಳುಹಿಸುವ ಯಾವುದೇ ಲಿಂಕ್ ಅನ್ನು ತೆರೆಯಬೇಡಿ. ನಿಮ್ಮ ಪಾಸ್​ವರ್ಡ್ ವಂಚಕರ ಕೈಸೇರಬಹುದು. ಈ ಎಲ್ಲದರ ಬಗ್ಗೆ ಎಚ್ಚರವಾಗಿರಿ.

ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 19 September 22

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ