ದೆಹಲಿ: ಪ್ರಧಾನಿ ಮೋದಿಯವರ (PM Modi) ನಾಯಕತ್ವದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರ ಪ್ರಯತ್ನದಿಂದ ಕೊವಿಡ್ ಲಸಿಕೆಯ (Covid Vaccine) ಮೊದಲ ಡೋಸ್‌ಗಳಲ್ಲಿ ಶೇ 88ನ್ನು ನೀಡಲಾಗಿದೆ. ಇಲ್ಲಿಯವರೆಗೆ ಶೇ58ರಷ್ಟು ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಗೆ ಇಂದು ಲಸಿಕೆ ನೀಡಲಾಗಿದೆ ಎಂದು ರಾಜ್ಯಸಭೆಯಲ್ಲಿ (Rajya Sabha) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ತಿಳಿಸಿದ್ದಾರೆ. ಇಂದು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ಹೊಂದಿವೆ, ಅವುಗಳ ಬಳಿ 17 ಕೋಟಿ ಡೋಸ್‌ಗಳು ಲಭ್ಯವಿದೆ. ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ಇಂದು ಭಾರತವು ತಿಂಗಳಿಗೆ 31 ಕೋಟಿ ಡೋಸ್ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ 2 ತಿಂಗಳುಗಳಲ್ಲಿ ಇದು ತಿಂಗಳಿಗೆ 45 ಕೋಟಿ ಡೋಸ್‌ಗಳ ಏರಿಕೆ ಕಾಣಲಿದೆ. ಸದ್ಯಕ್ಕೆ, ಭಾರತದಲ್ಲಿ 161 ಒಮಿಕ್ರಾನ್ ಪ್ರಕರಣಗಳಿವೆ. ನಾವು ತಜ್ಞರೊಂದಿಗೆ ಪ್ರತಿದಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. 1 ನೇ ಮತ್ತು 2 ನೇ ಅಲೆ ಸಮಯದಲ್ಲಿ ನಮ್ಮ ಅನುಭವದೊಂದಿಗೆ, ರೂಪಾಂತರಗಳು ಹರಡಿದಾಗ ನಾವು ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಾವು ಪ್ರಮುಖ ಔಷಧಿಗಳ ಬಫರ್ ಸ್ಟಾಕ್ ಅನ್ನು ವ್ಯವಸ್ಥೆಗೊಳಿಸಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಜಯಾ ಬಚ್ಚನ್ ಮತ್ತು ಖಜಾನೆ ಪೀಠಗಳ ನಡುವಿನ ಮಾತಿನ ಚಕಮಕಿಯ ನಂತರ ಪ್ರತಿಪಕ್ಷಗಳ ಗದ್ದಲವು ತೀವ್ರಗೊಂಡಿದ್ದರಿಂದ ರಾಜ್ಯಸಭೆಯನ್ನು ಇಂದು ಸಂಜೆ 5 ಗಂಟೆಗೆ ಮುಂದೂಡಲಾಯಿತು.
‘ಬಿಹಾರದಲ್ಲಿ ಇದುವರೆಗೆ ಯಾವುದೇ ಒಮಿಕ್ರಾನ್ ಪ್ರಕರಣಗಳಿಲ್ಲ: ಸಿಎಂ ನಿತೀಶ್ ಕುಮಾರ್
ರಾಜ್ಯದಲ್ಲಿ ಇದುವರೆಗೆ ಯಾವುದೇ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು ಹೊಸ ರೂಪಾಂತರವನ್ನು ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿರುವುದಾಗಿ ಎಂದು ಎಎನ್ಐ ವರದಿ ಮಾಡಿದೆ. “ನಮ್ಮ ರಾಜ್ಯದಲ್ಲಿ ಇದುವರೆಗೆ ಯಾವುದೇ ಒಮಿಕ್ರಾನ್ ಪ್ರಕರಣಗಳಿಲ್ಲ. ಯಾವುದೇ ಪ್ರಕರಣಗಳಿಲ್ಲದಿದ್ದರೂ ರಾಜ್ಯದಲ್ಲಿ ಕಟ್ಟೆಚ್ಚರವಿದೆ. ನಾವು ಸಿದ್ಧರಿದ್ದೇವೆ, ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ದಿನಕ್ಕೆ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳು ನಡೆಯುತ್ತಿವೆ 5 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕೊವಿಡ್ -19 ಪ್ರಕರಣಗಳನ್ನು ಈಗ ಜಿನೋಮ್ ಅನುಕ್ರಮಕ್ಕೆ ಕಳುಹಿಸಲಾಗುವುದು: ಸಿಎಂ ಕೇಜ್ರಿವಾಲ್
ಕೆಲವು ದಿನಗಳಿಂದ ಪ್ರಕರಣಗಳ ಹೆಚ್ಚಳವನ್ನು ಗಮನಿಸಿದರೆ, ಈಗ ದೆಹಲಿಯ ಎಲ್ಲಾ ಸಕಾರಾತ್ಮಕ ಪ್ರಕರಣಗಳನ್ನು ಒಮಿಕ್ರಾನ್‌ಗಾಗಿ ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಬೂಸ್ಟರ್ ಡೋಸ್‌ಗಳನ್ನು ಅನುಮತಿಸುವಂತೆ ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು. ಇಂದು ದೆಹಲಿಯಲ್ಲಿ ನಾಲ್ಕು ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಇಲ್ಲಿ ರೂಪಾಂತರದ ಒಟ್ಟು ಪ್ರಕರಣಗಳ ಸಂಖ್ಯೆಯನ್ನು 28 ಕ್ಕೆ ಏರಿದೆ. ನಾಲ್ಕು ಜನರನ್ನು ರೂಪಾಂತರದಿಂದ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಅವರನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರ
Published On - 4:25 pm, Mon, 20 December 21