ಒಮಿಕ್ರಾನ್ ಭೀತಿ ಹೆಚ್ಚಳ; ಭಾರತದ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಒಮಿಕ್ರಾನ್ ಭೀತಿ ಹೆಚ್ಚಳ; ಭಾರತದ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
ಪ್ರಾತಿನಿಧಿಕ ಚಿತ್ರ

Covid Guidelines: ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಪ್ರಯಾಣಿಕರನ್ನು ಆಗಮನದ ನಂತರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಎಲ್ಲಾ ಪ್ರಯಾಣಿಕರು ದೆಹಲಿಗೆ ಆಗಮಿಸಿದ ನಂತರ ಅವರ ಮಾದರಿ ಸಂಗ್ರಹಣೆಯನ್ನು ಮಾಡಲಾಗುತ್ತದೆ.

TV9kannada Web Team

| Edited By: Sushma Chakre

Dec 24, 2021 | 3:15 PM

ನವದೆಹಲಿ: ದೆಹಲಿಗೆ ಪ್ರಯಾಣ ಮಾಡುವ ಪ್ರಯಾಣಿಕರೇ ಗಮನಿಸಿ. ಒಮಿಕ್ರಾನ್ ಕೇಸುಗಳು ಹೆಚ್ಚಾಗಿರುವುದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (MoCA) ದೆಹಲಿಗೆ ಪ್ರಯಾಣಿಸುವ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಎಲ್ಲಾ ವಿಮಾನ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಮಾದರಿ ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಭಾರತದೊಳಗಿನ ಪ್ರಯಾಣಿಕರು (ಡೊಮೆಸ್ಟಿಕ್ ವಿಮಾನದ ಪ್ರಯಾಣಿಕರು) ದೆಹಲಿಗೆ ಬರುವಾಗ ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುವುದು ಕಡ್ಡಾಯ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಪ್ರಯಾಣಿಕರನ್ನು ಆಗಮನದ ನಂತರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಎಲ್ಲಾ ಪ್ರಯಾಣಿಕರು ದೆಹಲಿಗೆ ಆಗಮಿಸಿದ ನಂತರ ಅವರ ಮಾದರಿ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಮಾದರಿ ಸಂಗ್ರಹಣೆಯ ನಂತರವೇ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ತೆರಳಲು ಅನುಮತಿ ನೀಡಲಾಗುತ್ತದೆ.

ಕೊವಿಡ್ ಪಾಸಿಟಿವ್ ಬಂದ ಪ್ರಯಾಣಿಕರಿಗೆ 10 ದಿನಗಳವರೆಗೆ ಮನೆ ಅಥವಾ ಕೊವಿಡ್ ಕೇರ್ ಸೆಂಟರ್ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳು ಅಥವಾ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಎಲ್ಲಾ ದೇಶೀಯ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಒಮಿಕ್ರಾನ್ ಆತಂಕದ ಮಧ್ಯೆ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿದ ಬೆಂಗಳೂರು, ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?

ಕರ್ನಾಟಕದಲ್ಲಿ ಇಂದು ಒಂದೇ ದಿನ 12 ಒಮಿಕ್ರಾನ್ ಕೇಸ್ ಪತ್ತೆ; ಬೆಂಗಳೂರಿನಲ್ಲೇ ಅತಿ ಹೆಚ್ಚು ಸೋಂಕಿತರು

Follow us on

Related Stories

Most Read Stories

Click on your DTH Provider to Add TV9 Kannada